Gruha Lakshmi: ದೀಪಾವಳಿ ಹಬ್ಬಕ್ಕಾದ್ರು ಗೃಹಲಕ್ಷ್ಮಿ ಹಣ ಬರುತ್ತಾ?: ಅನ್ನಭಾಗ್ಯ ಫಲಾನುಭವಿಗಳಿಗೆ ಸರ್ಕಾರದಿಂದ ಹಬ್ಬದ ಉಡುಗೊರೆ!

Share the Article

Gruha Lakshmi: ಕಾಂಗ್ರೆಸ್ ಸರ್ಕಾರ(Congress govt) ಚುನಾವಣೆಯ(Election) ಭರವಸೆಯಂತೆ ಪಂಚ ಗ್ಯಾರಂಟಿಗಳನ್ನು(Free Scheme) ಸದ್ಯದ ಮಟ್ಟಿಗೆ ಫಲಾನುಭವಿಗಳಿಗೆ ತಲುಪಿಸುತ್ತಿದೆ. ಸಿಎಂ ಸಿದ್ದರಾಮಯ್ಯ(CM Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದ್ದೇವೆ ಎಂದು ಹೇಳುತ್ತಿರುವ ಸರ್ಕಾರ, ಜುಲೈ ಆಗಸ್ಟ್ ಹಾಗೂ ಸೆಪ್ಟೆಂಬರ್ ಮೂರು ತಿಂಗಳಿನಿಂದ ಗೃಹಲಕ್ಷ್ಮಿ(Gruhalakshmi Scheme) ಹಣ ಇನ್ನೂ ನೀಡಿಲ್ಲ. ಇತ್ತೀಚೆಗೆ ಜುಲೈ ತಿಂಗಳ ಹಣ ಗೃಹಲಕ್ಷ್ಮಿಯರ ಖಾತೆಗೆ(Account) ಬಂದಿತ್ತು. ಆದ್ರೆ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ದೀಪಾವಳಿ(Diwali) ಹಣ ಹಬ್ಬದೂಟ ಮಾಡಲಾದರು ಬರುತ್ತಾ ಎಂದು ಕಾದು ಕುಳಿತ್ತಿದ್ದಾರೆ.

ಈ ಮಧ್ಯೆ ಇನ್ನುಳಿದ ಎರಡು ತಿಂಗಳ ಗೃಹಲಕ್ಷ್ಮಿಯ 2 ಕಂತಿನ ಹಣ ಏಕಕಾಲಕ್ಕೆ ಬರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದರು. ಆದ್ರೆ ಅದು ಈ ವರೆಗೆ ಖಾತೆ ಸೇರಿಲ್ಲ. ನಂತರ ಸೆಪ್ಟೆಂಬರ್ 7 ಮತ್ತು 9ಕ್ಕೆ ಎರಡು ಕಂತಿನ ಹಣ ಬರುತ್ತದೆ ಎಂದು ಭರವಸೆ ನೀಡಿದ್ದರು. ಆದ್ರೆ ಆಗ ಕೇವಲ ಜುಲೈ ತಿಂಗಳ ಹಣ ಮಾತ್ರ ಗೃಹಲಕ್ಷ್ಮಿಯರನ್ನು ಸೇರಿತ್ತು. ಸದ್ಯದ ಮಾಹಿತಿಯ ಪ್ರಕಾರ, ಇನ್ನೊಂದು ವಾರದೊಳಗೆ ಆಗಸ್ಟ್ ತಿಂಗಳಿನ ಗೃಹಲಕ್ಷ್ಮಿ ಹಣ ಬರಲಿದೆ. ಆದ್ರೆ ಸೆಪ್ಟೆಂಬರ್ ತಿಂಗಳಿನ ಹಣ ಬರುವ ಬಗ್ಗೆ ಮಾಹಿತಿ ಇಲ್ಲ.
ಇನ್ನೊಂದು ಕಡೆ ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಹಣದ ಜೊತೆಗೆ 3 ತಿಂಗಳ ಅನ್ನಭಾಗ್ಯ ಯೋಜನೆಯ ಅಕ್ಕಿಯ ಹಣ ಕೂಡ ಬಿಡುಗಡೆಯಾಗುತ್ತೆ ಎಂಬ ಮಾಹಿತಿಯಿದ್ದು, ಈಗಾಗಲೇ ಅದರ ಡಿಬಿಟಿ ಹಣ ಪ್ರಕ್ರಿಯೆ ಆರಂಭವಾಗಿದೆಯಂತೆ. ದೀಪಾವಳಿ ಹಬ್ಬಕ್ಕೂ ಮೊದಲು ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಬಿಡುಗಡೆಯಾಗುವುದು ಖಚಿತ. ಎಲ್ಲಾ ಗೃಹಲಕ್ಷ್ಮಿಯರಿಗೂ ಅಗಸ್ಟ್ ತಿಂಗಳಿನ ಹಣ ಮತ್ತು ಅನ್ನಭಾಗ್ಯ ಯೋಜನೆ 3 ತಿಂಗಳ ಅಕ್ಕಿ ಹಣ ಮಹಿಳೆಯರ ಖಾತೆ ಸೇರಿದರೆ ಈ ಬಾರಿಯ ಹಬ್ಬ ಬಲು ಜೋರಾಗೆ ಮಾಡಬಹುದು.

ಹಬ್ಬದ ಸಮಯದಲ್ಲಿ ಈ ಹಣ ಬಂದ್ರೆ ಹಬ್ಬಕ್ಕೆ ಮನೆಯ ನಿರ್ವಹಣೆಗೆ ಅನುಕೂಲವಗಲಿದೆ. ಹಾಗಾಗಿ ಸರ್ಕಾರ ಕೂಡ ಹಣ ಬಾರದೆ ಬೇಸತ್ತ ಫಲಾನುಭವಿಗಳಿಗೆ ಖುಷಿ ಸುದ್ದಿ ನೀಡಲು ಮುಂದಾಗಿದೆ. ಕೇವಲ ಗೃಹಲಕ್ಷ್ಮಿ ಯೋಜನೆಯೊಂದಕ್ಕೆ ಪ್ರತೀ ತಿಂಗಳು ಸುಮಾರು 1.21 ಕೋಟಿ ಹಣ ರಿಲೀಸ್ ಮಾಡಲಾಗುತ್ತದೆ. ಈ ಒಂದು ಯೋಜನೆಗೆ ಪ್ರತೀ ತಿಂಗಳು 2500 ಕೋಟಿ ಹಣದ ಅಗತ್ಯವಿದೆ. ಇನ್ನು ಅನ್ನ ಭಾಘ್ಯದ ಹಣವನ್ನು ಯಾವ ಯೋಜನೆಯನ್ನು ಮುರಿದು ಕೊಡುತ್ತಾರೂ ಕಾದು ನೋಡಬೇಕು.

Leave A Reply