Train track: ಗಂಗಾ ನದಿ ತಳದಲ್ಲಿ ರೈಲು ಹಳಿ ಪ್ರತ್ಯಕ್ಷ!

Train track: ಭೂಮಿಯಲ್ಲಿ ಎಷ್ಟೋ ರಹಸ್ಯಗಳು ಇನ್ನೂ ಬುದ್ಧಿ ಜೀವಿಗಳಿಗೆ ಬೆಳಕಿಗೆ ಬರದೇ ಹಾಗೇ ಹುದುಗಿರಬಹುದು. ಕೆಲವೊಂದು ರಹಸ್ಯಗಳು ಕಾಲ ಕಳೆದಂತೆ ಗೋಚರಿಸುತ್ತದೆ. ಅಂತಹ ರಹಸ್ಯಗಳಲ್ಲಿ ಒಂದು ವಿಚಾರ ಇಲ್ಲಿ ತಿಳಿಸ್ತೀವಿ ಕೇಳಿ.

ಹೌದು, ಭಾರತದ ಪವಿತ್ರ ನದಿ ಎಂದು ಕರೆಯಲಾಗುವ ಗಂಗಾ ನದಿ ಉತ್ತರ ಭಾರತದ ಪ್ರಮುಖ ನದಿಗಳಲ್ಲಿ ಒಂದಾಗಿದೆ. ದಕ್ಷಿಣದಲ್ಲಿ ಕಾವೇರಿಯಂತೆ ಉತ್ತರದಲ್ಲಿ ಗಂಗೆಯನ್ನು ಪವಿತ್ರ ನದಿ ಎಂದು ನಂಬಲಾಗಿದೆ.

ಗಂಗಾ ನದಿ ಹಲವು ಪ್ರಮುಖ ತಾಣಗಳ ಮೂಲಕ ಹಾದು ಹೋಗುತ್ತದೆ. ಇನ್ನು ಗಂಗಾ ನದಿಯ ತೀರದಲ್ಲಿ ಪ್ರಮುಖ ಹಿಂದೂ ನಗರಗಳು, ಪುರಾತನ ನಗರಗಳು ಬರುತ್ತವೆ. ಇದೆಲ್ಲದರ ನಡುವೆ ಗಂಗಾ ನದಿಯಿಂದ ಮೇಲೆದ್ದಿರುವ ಅಚ್ಚರಿಯ ರೈಲ್ವೆ ಹಳಿಯೊಂದು (Train track) ಭಾರೀ ಕುತೂಹಲಕ್ಕೆ ಕಾರಣವಾಗಿದೆ. 

ಹೌದು, ಗಂಗಾ ನದಿಯ ಆಳದಿಂದ ರೈಲ್ವೆ ಹಳಿ ಗೋಚರವಾಗಿರುವುದು ಪುರಾತತ್ವ ಇಲಾಖೆ ಅಧಿಕಾರಿಗಳನ್ನು ಆಶ್ಚರ್ಯ ಗೊಳಿಸಿದೆ. ಹಾಗೆ ಈ ವಿಚಿತ್ರ ದೃಶ್ಯ ಕಣ್ತುಂಬಿಕೊಳ್ಳಲು ಜನರ ದಂಡೇ ಅಲ್ಲಿ ಸೇರುತ್ತಿದೆ. ಮುಖ್ಯವಾಗಿ ಗಂಗಾ ನದಿಯ ನೀರು ಕಡಿಮೆಯಾಗಿರುವುದರಿಂದ ಈ ರೈಲ್ವೆ ಹಳಿ ಮೇಲೆ ಕಾಣುತ್ತಿದೆ.

ಹರಿದ್ವಾರ ರೈಲು ನಿಲ್ದಾಣದಿಂದ ಸುಮಾರು 3 ಕಿಮೀ ದೂರದಲ್ಲಿ ಗಂಗಾ ನೀರಿನ ಕೆಳಗೆ ಹಳೆಯ ರೈಲು ಹಳಿಗಳು ಗೋಚರವಾಗಿದೆ. ಈ ಹಳಿಗಳು ಸುಮಾರು 1850ರಲ್ಲಿ ನಿರ್ಮಿಸಿರಬಹುದು ಎಂದು ಅಂದಾಜಿಸಲಾಗಿದೆ. ಇದನ್ನು ಬ್ರಿಟಿಷರು ಗಂಗಾ ಕಾಲುವೆಯ ನಿರ್ಮಾಣಕ್ಕೆ ಕಚ್ಚಾ ವಸ್ತುಗಳ ಸಾಗಿಸಲೆಂದು ನಿರ್ಮಿಸಿರಬಹುದು ಎಂದು ಅಂದಾಜಿಸಲಾಗಿದೆ. ಅಥವಾ ಈ ಹಿಂದೆ ಗಂಗಾ ನದಿಯ ನೀರಿನ ಮಟ್ಟ ಇರಲಿಲ್ಲವೇ? ಇಲ್ಲಿ ರೈಲುಗಳು ಓಡಾಡಿದ್ದವೇ ಎಂಬ ಕುತೂಹಲ ಕೂಡ ಮೂಡಿದೆ. 

ಕೆಲವು ಮೂಲಗಳ ಪ್ರಕಾರ, ಈ ಹಳಿಗಳು ರೈಲು ಓಡಿಸುವ ಬದಲಾಗಿ ಕೈಗಾಡಿಗಳನ್ನು ಇದರ ಮೇಲೆ ಬಳಸಿರಬಹುದು. ಕಚ್ಚಾ ವಸ್ತುಗಳನ್ನು ಸಾಗಿಸುವ ಉದ್ದೇಶದಿಂದ ಕೈ ಗಾಡಿಗಳ ಓಡಿಸುವ ಸಲುವಾಗಿಯೇ ಇದನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ. ಅಂದರೆ ಇದು ಬ್ರಿಟಿಷ್ ಅಧಿಕಾರಿ ಥಾಮಸ್ ಕೌಟ್ಲಿ ಅವರ ಮೇಲ್ವಿಚಾರಣೆಯಲ್ಲಿ ನಿರ್ಮಿಸಿರಬಹುದು. ವಿಶೇಷ ಅಂದರೆ ನೂರಾರು ವರ್ಷ ನೀರಿನಿಳಗೆ ಇದ್ದರೂ ಕೂಡ ಒಂಚೂರು ತುಕ್ಕು ಹಿಡಿಯದೆ, ಹಾಗೆ ಉಳಿದಿರುವುದನ್ನು ಕಂಡು ಜನರು ನಿಬ್ಬೆರಗಾಗಿದ್ದಾರೆ. ಹಾಗೆ ಅವರಿಗೆ ಹಿಂದೊಮ್ಮೆ ಇಲ್ಲಿ ರೈಲು ಚಲಿಸಿತ್ತೆ ಎಂಬ ಪ್ರಶ್ನೆ ಮೂಡಿರುವ ಜೊತೆಗೆ ಅನೇಕ ಪ್ರಶ್ನೆಗಳು ಕಾಡುತ್ತಿವೆ.

Leave A Reply

Your email address will not be published.