Raging: ರಾಗಿಂಗ್ ಗೆ ಬಲಿಯಾದ ವಿದ್ಯಾರ್ಥಿನಿ: ಮರಳಿ ತರಲಾದಿತೇ ಜೀವ?

Share the Article

Raging: ಚಿತ್ರದುರ್ಗ( Chitradurga) ಡಾನ್ ಬೋಸ್ಕೋ ಶಾಲೆಯಲ್ಲಿ(School) ವಿದ್ಯಾರ್ಥಿನಿಯೋರ್ವಳು(Student) ಶಾಲೆಯ ಮೂರನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ನಡೆದಿದೆ. ಇದರ ಹಿಂದಿನ ಕಾರಣ ಕೇಳಿದ್ರೆ ಬೆಚ್ಚಿ ಬೀಳೋದು ಪಕ್ಕಾ. ನೂರಾರು ಕನಸು ಹೊತ್ತು ಪೋಷಕರು ತಮ್ಮ‌ಮಕ್ಕಳನ್ನು ಕಾಲೇಜಿಗೆ ಕಳುಹಿಸಿದ್ರೆ, ಯಾವುದೋ ನೀಚ ಮನಸ್ಸುಗಳ ಕೆಟ್ಟ ಬುದ್ದಿಗೆ ಮಕ್ಕಳು ಬಲಿಯಾಗುತ್ತಿದ್ದಾರೆ.

ವಿದ್ಯಾರ್ಥಿನಿಯ ಸಾವಿಗೆ ರ್ಯಾಗಿಂಗ್ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಚಿತ್ರದುರ್ಗದಲ್ಲಿ ಕಾಲೇಜು ಕಟ್ಟಡ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಮೃತ ವಿದ್ಯಾರ್ಥಿನಿಯನ್ನು ಚಳ್ಳಕೆರೆ ಮೂಲದ ಪ್ರೇಮಾ(18) ಎಂದು ಗುರುತಿಸಲಾಗಿದೆ. ಈಕೆ ಮೊದಲ ವರ್ಷದ Bsc ಓದುತ್ತಿದ್ದು, ರ್ಯಾಗಿಂಗ್ ಕಾರಣಕ್ಕೆ ಈ ಆತ್ಮಹತ್ಯೆ ನಡೆದಿದೆ ಎಂದು ಶಂಕೆ ವ್ಯಕ್ತವಾಗಿದೆ. ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Leave A Reply