Home News Muttappa Rai Property: ಮುತ್ತಪ್ಪ ರೈ ಎರಡನೇ ಪತ್ನಿಗೆ ಸಿಕ್ತು ನೂರಾರು ಕೋಟಿ ಆಸ್ತಿ

Muttappa Rai Property: ಮುತ್ತಪ್ಪ ರೈ ಎರಡನೇ ಪತ್ನಿಗೆ ಸಿಕ್ತು ನೂರಾರು ಕೋಟಿ ಆಸ್ತಿ

Hindu neighbor gifts plot of land

Hindu neighbour gifts land to Muslim journalist

Muttappa Rai Property: ಮಾಜಿ ಡಾನ್‌ ಮುತ್ತಪ್ಪ ರೈ ಅವರ ನಿಧನದ ನಂತರ ಸಾವಿರಾರು ಕೋಟಿ ರೂ. ಮೌಲ್ಯದ ಒಡೆತನವಿದ್ದ ಆಸ್ತಿಯನ್ನು ತನ್ನಿಬ್ಬರು ಮಕ್ಕಳು, ಎರಡನೇ ಹೆಂಡತಿ, ಸಹೋದರನ ಪುತ್ರ, ಮನೆ ಕೆಲಸದವರು ಸೇರಿ ಯಾರ್ಯಾರಿಗೆ ಎಷ್ಟು ಆಸ್ತಿ ಸೇರಬೇಕು ಎಂದು ಬರೆದಿಟ್ಟದ್ದರೂ, ಮುತ್ತಪ್ಪ ರೈ ಮಕ್ಕಳು ತಮ್ಮ ತಂದೆಯ ಎರಡನೇ ಹೆಂಡತಿಗೆ ಆಸ್ತಿ ನೀಡದೇ ಮನೆಯಿಂದ ಹೊರಗೆ ಹಾಕಿದ್ದರು.

ಇದನ್ನು ಪ್ರಶ್ನೆ ಮಾಡಿ ಕೋರ್ಟ್‌ ಮೊರೆ ಹೋಗಿದ್ದ ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧಾ ರೈ ಅವರ ಕೈಗೆ ಇದೀಗ ನೂರಾರು ಕೋಟಿ ಆಸ್ತಿ ಕೈ ಸೇರಿದೆ.

ಮುತ್ತಪ್ಪ ರೈ ಅವರ ಮೊದಲ ಹೆಂಡತಿ ಸಾವಿಗೀಡಾದ ನಂತರ ಮಕ್ಕಳು ಚೆನ್ನಾಗಿ ನೋಡಿಕೊಳ್ಳದ ಕಾರಣ ತನಗೊಬ್ಬ ಹೆಂಡತಿಯ ಅಗತ್ಯವಿದೆ ಎಂದು ಅವರು ಅನುರಾಧ ರೈ ಅವರನ್ನು ಮದುವೆಯಾಗಿದ್ದರು. ಕೆಲ ವರ್ಷಗಳ ಸಂಸಾರ ಮಾಡಿದ ಅನುರಾಧಾ ಅವರು ಮುತ್ತಪ್ಪ ರೈ ಅನಾರೋಗ್ಯ ಕಾಣಿಸಿಕೊಳ್ಳುತ್ತಿದ್ದಂತೆ ಮಕ್ಕಳು ಎರಡನೇ ಹೆಂಡತಿಗೆ ಎಲ್ಲಿ ಆಸ್ತಿ ಕೊಡಬೇಕಾಗಬಹುದು ಎನ್ನುವ ಕಾರಣಕ್ಕೆ ಮನೆಯಿಂದ ಹೊರಗೆ ಹಾಕಿದ್ದರು.

ವಿಲ್‌ನಲ್ಲಿ ಮುತ್ತಪ್ಪ ರೈ ಅವರು ತಮ್ಮ ಪುತ್ರರಾದ ರಾಖಿ ರೈ, ರಿಕ್ಕಿ ರೈ, ಸಹೋದರನ ಪುತ್ರ ಅಶ್ವಿನ್‌ ರೈ, ಎರಡನೇ ಪತ್ನಿ ಅನುರಾಧ ರೈ, ಮನೆಕೆಲಸದವರಿಗೂ ವಿಲ್‌ನಲ್ಲಿ ಆಸ್ತಿ ಹಂಚಿಕೆ ಮಾಡಿದ್ದರು. ಒಟ್ಟು 41 ಪುಟಗಳ ವಿಲ್‌ ಬರೆಸಿದ್ದರು.

ಆದರೆ ಇದನ್ನು ತಿಳಿದ ಮುತ್ತಪ್ಪ ರೈ ವಕೀಲರ ನೇತೃತ್ವದಲ್ಲಿ ವಿಲ್‌ ಬರೆದಿದ್ದು, ಅದರಲ್ಲಿ ತಮ್ಮ ಎರಡನೇ ಹೆಂಡತಿಗೂ ಆಸ್ತಿ ಹಂಚಿಕೆ ಮಾಡಿದ್ದರು. 2020ರಲ್ಲಿ ಮುತ್ತಪ್ಪ ರೈ ಸಾವಿಗೀಡಾದ್ದು, ನಂತರ ಅವರು ಬರೆದಿಟ್ಟ ವಿಲ್‌ ಅನ್ನು ಮಕ್ಕಳು ಮರೆಮಾಚಿದ್ದಾರೆ. ಯಾರಿಗೂ ತುಂಡು ಆಸ್ತಿ ಕೊಡದೇ ರಾಖಿ ರೈ, ರಿಕ್ಕಿ ರೈ ತಾವೇ ಇಟ್ಟುಕೊಂಡಿದ್ದರು.

ಅನಂತರ ಅನುರಾಧ ರೈ ಅವರು ಈ ವಿರುದ್ಧ ಕೋರ್ಟ್‌ ಮೊರೆ ಹೋಗಿದ್ದು, ಇದೀಗ ಬೆಂಗಳೂರಿನ 19 ನೇ ಸಿಟಿ ಸಿವಿಲ್‌ ಹಾಗೂ ಸೆಷನ್ಸ್‌ ಕೋರ್ಟ್‌ನಲ್ಲಿ ಆಸ್ತಿ ವಿವಾದ ಇತ್ಯರ್ಥಗೊಂಡಿದೆ. ಒಟ್ಟು 100 ಕೋಟಿ ಮೌಲ್ಯದ ಆಸ್ತಿ ಹಂಚಿಕೆ ಮಾಡಲಾಗಿದೆ ಎನ್ನಲಾಗಿದೆ.

ಅನುರಾಧಾ ರೈ ಅವರಿಗೆ ಸಿಗುವ ಆಸ್ತಿ ಪಟ್ಟಿ ಇಲ್ಲಿದೆ:
ಅನುರಾಧ ರೈಗೆ 7 ಕೋಟಿ ನಗದು ಹಣ, ಮಂಡ್ಯದ ಪಾಂಡವಪುರದ ಬಳಿ 22 ಎಕರೆ ಜಮೀನು, ಮೈಸೂರಿನಲ್ಲಿ 4,800 ಚದರಡಿ ನಿವೇಶನ ಹಾಗೂ ಅದೇ ನಿವೇಶನದಲ್ಲಿನ ಮನೆ, ನಂದಿಬೆಟ್ಟ ಬಳಿಯ ಕೆಂಪತಿಮ್ಮನಹಳ್ಳಿಯಲ್ಲಿ 5.5 ಎಕರೆ ಜಮೀನು. ಅನುರಾಧ ರೈ ಅವರಿಗೆ ನೀಡಲಾದ ಆಸ್ತಿ 100 ಕೋಟಿ ರೂ. ಎಂದು ಹೇಳಲಾಗಿದೆ.