Ten Rupee Coin: ನಿಮ್ಮಲ್ಲಿ ಹತ್ತು ರೂಪಾಯಿ ನಾಣ್ಯ ಇದೆಯಾ? ಇಲ್ಲಿದೆ ನೋಡಿ ಬಿಗ್ ಅಪ್ಡೇಟ್ ನ್ಯೂಸ್

Ten Rupee Coin: ಬಹುತೇಕರ ಬಳಿಯಲ್ಲಿ 10 ರೂಪಾಯಿ ನಾಣ್ಯ (Ten Rupee Coin) ಇದ್ದು, ಈ ನಾಣ್ಯ ಒಂದು ಸಮಯದಲ್ಲಿ ಚಲಾವಣೆಯಲಿಲ್ಲ, ಇದನ್ನು ಯಾರು ಸಹ ಸ್ವೀಕರಿಸುತ್ತಿಲ್ಲ ಎಂದು ಸಾರ್ವಜನಿಕರು ಸಮಸ್ಯೆಗೆ ಸಿಲುಕಿದ್ದರು. ಯಾವುದೇ ವ್ಯಕ್ತಿಗಳು ಈ ನಾಣ್ಯ ವಿನಿಮಯ ಮಾಡಲು ಒಪ್ಪುತ್ತಿರಲಿಲ್ಲ.

ಹೌದು, ಇದೀಗ ಮತ್ತೆ ಇತ್ತೀಚಿನ ದಿನಗಳಲ್ಲಿ ಇದೇ ಸಮಸ್ಯೆ ಮತ್ತೆ ಸದ್ದು ಮಾಡುತ್ತಿದ್ದು, ಅನೇಕರು ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾ ಮುದ್ರಿಸಿರುವ ಹೊಸ 10 ರೂ. ನಾಣ್ಯಗಳನ್ನು ಹಾಗೂ ಹಳೆಯ ಕಾಯಿನ್​ಗಳನ್ನು ಬಸ್​ ನಿರ್ವಾಹಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ಕೊಟ್ಟರೆ, ನಾವು ಸ್ವೀಕರಿಸಲ್ಲ. ಈಗ ಇದರ ಅಸ್ತಿತ್ವವಿಲ್ಲ, ಚಲಾವಣೆಯೂ ಆಗ್ತಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ಕೆಲವರು, ತಮ್ಮ ಸುತ್ತಮುತ್ತಲಿನ ಬ್ಯಾಂಕ್​ಗಳಿಗೆ ಭೇಟಿ ನೀಡಿ, ಇದರ ಚಲಾವಣೆ ಇದೆಯೋ? ಇಲ್ಲವೋ? ಎಂದು ಸಿಬ್ಬಂದಿಗಳ ಬಳಿಯೇ ನೇರವಾಗಿ ಸ್ಪಷ್ಟನೆ ಕೇಳಿರುವುದು ಉಂಟು.

ಆದ್ರೆ 10 ರೂ. ಕಾಯಿನ್​ ಬಗ್ಗೆ RBI ಹೇಳೋದೇನೆಂದರೆ 10 ರೂಪಾಯಿ ನಾಣ್ಯಗಳು ರದ್ದಾಗಿದೆ, ಚಲಾವಣೆಯಲಿಲ್ಲ ಎಂಬ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದಿದೆ. ಈ ಸಮಸ್ಯೆ ಮನಗಂಡ RBI ಇತ್ತೀಚೆಗಷ್ಟೇ ಅ.14 ಮತ್ತು 15ರಂದು ಆಯ್ದ ಬ್ಯಾಂಕ್​ಗಳ ಸಮನ್ವಯದಲ್ಲಿ 10 ರೂ. ಕಾಯಿನ್​ಗಳು ಇಂದಿಗೂ ಕಾರ್ಯರೂಪದಲ್ಲಿದೆ ಎಂಬುದನ್ನು ತಿಳಿಹೇಳಲು ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಆರಂಭಿಸಿದೆ.

ಆದ್ದರಿಂದ, ಹತ್ತು ರೂ. ನಾಣ್ಯಗಳ ವಿನ್ಯಾಸಗಳು ಆಗಾಗ್ಗೆ ಬದಲಾಗುತ್ತಿರುತ್ತದೆ. ಕಾಲಕ್ಕೆ ತಕ್ಕಂತೆ ಹೊಸ ಡಿಸೈನ್​ನೊಂದಿಗೆ ಮುದ್ರಿತವಾಗಿ, ಚಲಾವಣೆಗೆ ಬರುತ್ತದೆ. ಈ ಕಾಯಿನ್​ಗಳು ಕಾನೂನುಬದ್ಧವಾಗಿದ್ದು, ವಹಿವಾಟುಗಳಿಗೆ ಮುಕ್ತವಾಗಿವೆ. ಇಂತಹ ನಾಣ್ಯಗಳನ್ನು ವ್ಯಾಪಾರಸ್ಥರು ಸ್ವೀಕರಿಸಬಹುದಾಗಿದೆ. ಸಾರ್ವಜನಿಕರು ತಮ್ಮ ಬಳಿಯಿರುವ ನಾಣ್ಯಗಳನ್ನು ಆರ್​ಬಿಐ ಅಡಿಯಲ್ಲಿರುವ ಎಲ್ಲಾ ಶಾಖೆಗಳಲ್ಲಿಯೂ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಿದೆ. ಈ ಕುರಿತಂತೆ ಬ್ಯಾಂಕ್​ಗಳಿಗೂ ಆರ್​ಬಿಐ ನಿರ್ದೇಶನ ಕೊಟ್ಟಿದೆ.

1 Comment
  1. Üsküdar kameralı tıkanıklık açma Hiçbir yeri kırmadan kaçağı buldular, mükemmel hizmet! https://friichat.com/read-blog/39931

Leave A Reply

Your email address will not be published.