Indian Parliament: ಭಾರತದ ನೂತನ ಸಂಸತ್ ಭವನ ‘ವಕ್ಫ್ ಬೋರ್ಡ್’ಗೆ ಸೇರಿದ್ದು ! ಮುಸ್ಲಿಂ ಮುಖಂಡನಿಂದ ವಿವಾದಾತ್ಮಕ ಸ್ಟೇಟ್ಮೆಂಟ್

Indian Parliament: ವಕ್ಫ್ ತಿದ್ದುಪಡಿ ಮಸೂದೆ ಕುರಿತು ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ವಕ್ಫ್ ಮಂಡಳಿಯ ಜಾಗದಲ್ಲಿ ಹೊಸ ಸಂಸತ್ತು(Indian Parliament) ನಿರ್ಮಾಣವಾಗಿದೆ ಎಂದು ವಿವಾದಾತ್ಮಕ ಸ್ಟೇಟ್ಮೆಂಟ್ ನೀಡಿದ್ದಾರೆ.

ಹೌದು, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್’ ನ ಅಧ್ಯಕ್ಷ ಹಾಗೂ 15 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಿದ ಬದರುದ್ದೀನ್ ಅಜಮಲ್ ಇವರು ನೂತನ ಸಂಸದ್ ಭವನವನ್ನು ‘ವಕ್ಫ್ ಬೋರ್ಡ್’ ನ ಜಾಗದಲ್ಲಿ ಕಟ್ಟಲಾಗಿದೆ ಎಂದು ದಾವೆ ಮಾಡಿದ್ದಾರೆ. ಇಷ್ಟೇ ಅಲ್ಲದೆ ಇಸ್ಲಾಂ ಧರ್ಮದ ಅನುಯಾಯಿಗಳಿಗೆ ತೊಂದರೆ ನೀಡುವುದು ಬಿಜೆಪಿಯ ಉದ್ದೇಶವಾಗಿದೆ. ನಮ್ಮ ಪೂರ್ವಜರು ಇಡೀ ದೇಶದ ಪ್ರತಿ ಬೀದಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.

ಅಜ್ಮಲ್ ಅವರು ದೂರದರ್ಶನ ಸುದ್ದಿ ವಾಹಿನಿಯೊಂದರೊಂದಿಗೆ ಮಾತನಾಡುತ್ತಾ ಈ ವಿಷಯದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. “ನಾನು 15 ವರ್ಷಗಳ ಕಾಲ ಸಂಸತ್ತಿನಲ್ಲಿದ್ದೆ, ಮತ್ತು ವಕ್ಫ್ ಭೂಮಿಯಲ್ಲಿ ಸಂಸತ್ತು ನಿರ್ಮಿಸಲಾಗಿದೆ ಎಂಬ ವದಂತಿಗಳಿವೆ. ಅದಕ್ಕಾಗಿಯೇ ನಾನು ಈ ಬಗ್ಗೆ ತನಿಖೆಗೆ ಕೇಳುತ್ತಿದ್ದೇನೆ ಮತ್ತು ಅದು ನಿಜವಾಗಿದ್ದರೆ ದೊಡ್ಡ ತಪ್ಪು” ಎಂದು ಅವರು ಹೇಳಿದ್ದಾರೆ.

Leave A Reply

Your email address will not be published.