Renukaswamy Murder Case: ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ಬಿಗ್ ಅಪ್ಡೇಟ್ ಇಲ್ಲಿದೆ!

Share the Article

Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜೈಲು ಸೇರಿದ್ದ ಹಲವು ಆರೋಪಿಗಳ ಪೈಕಿ ಎ13 ಆರೋಪಿ ದೀಪಕ್ ಕುಮಾರ್ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿರುವ ಬಗ್ಗೆ ವರದಿ ಆಗಿದೆ.

ಹೌದು, ಕಳೆದ ಸೋಮವಾರ ಕೋರ್ಟ್‌ನಲ್ಲಿ ದೀಪಕ್ ಕುಮಾರ್‌ಗೆ ಜಾಮೀನು ಮಂಜೂರಾಗಿತ್ತು. ಅದರಂತೆ ಕೋರ್ಟ್ ನೀಡಿರುವ ಷರತ್ತುಗಳನ್ನು ಪೂರೈಸಿ ಜೈಲಿಗೆ ಬೇಲ್ ಕಾಪಿ ತಲುಪಿತ್ತು. ನಂತರ ಬುಧವಾರ ರಾತ್ರಿ ಬೇಲ್ ಕಾಪಿ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳ ಕೈಸೇರಿತ್ತು. ಇದೀಗ ಈ ಹಿನ್ನೆಲೆ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ದೀಪಕ್ ಕುಮಾರ್ ಬಿಡುಗಡೆಯಾಗಿದ್ದಾನೆ.

ಇನ್ನು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ (Darshan) ಮತ್ತು ಮೊದಲನೇ ಆರೋಪಿಯಾಗಿರುವ ದರ್ಶನ್ ಗೆಳತಿ ಪವಿತ್ರಾ ಗೌಡ, ದರ್ಶನ್ ಮ್ಯಾನೇಜರ್ ಆಗಿದ್ದ 11ನೇ ಆರೋಪಿ ಆರ್ ನಾಗರಾಜು ಹಾಗೂ 12ನೇ ಆರೋಪಿ ಎಂ ಲಕ್ಷ್ಮಣ್ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ.

Leave A Reply