Tiger: ಸೆರೆಯಾಗದ ಹುಲಿ: ಅರಣ್ಯ ಇಲಾಖೆಗೆ ಟೆನ್ಸನ್: ಮುಂದೇನು?

Tiger: ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಭಾಗದ ವೆಸ್ಟ್ ನೆಮ್ಮಲೆಗ್ರಾಮದಲ್ಲಿ ಮೂರನೇ ದಿನವೂ ಹುಲಿ ಸೆರೆ ಕಾರ್ಯಾಚರಣೆ ಮುಂದುವರೆದಿದೆ.

ಸದ್ಯಕ್ಕೆ ಕ್ಯಾಪ್ಟನ್ ಅಭಿಮನ್ಯು ತಂಡ ಅನುಪಸ್ಥಿತಿಯಲ್ಲಿ
ಎರಡು ಸಾಕಾನೆ , 60 ಸಿಬ್ಬಂದಿ ಭಾಗಿಯಾಗಿದ್ದು, ನಾಡಹಬ್ಬ ದಸರಾಕ್ಕೆ ತೆರಳಿದ್ದ ಅಭಿಮನ್ಯು ಅಂಡ್ ಟೀಂ ನಿರೀಕ್ಷೆಯಲ್ಲಿದೆ.
ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಕಳೆದೆರಡು ತಿಂಗಳಲ್ಲಿ ಹುಲಿ ದಾಳಿಗೆ 15ಕ್ಕೂ ಅಧಿಕ ಹಸುಗಳು ಬಲಿಯಾಗಿದ್ದು, ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಕಾರ್ಯಾಚರಣೆ ನೇತೃತ್ವ ವಹಿಸಿಕೊಂಡಿದ್ದಾರೆ. ಅರವಳಿಕೆ ತಜ್ಞ ಡಾ ಚಿಟ್ಟಿಯಪ್ಪ,, ಶಾರ್ಪ್ ಶೂಟರ್ ರಂಜನ್ ಕಾರ್ಯಾಚರಣೆಯಲ್ಲಿ ಡಿಸಿಎಫ್ ನೆಹರೂ, ಇತರೆ ಅರಣ್ಯಾಧಿಕಾರಿಗಳು ಭಾಗಿಯಾಗಿಯಿದ್ದು ಸದ್ಯ ಬೋನ್ ಅಳವಡಿಸಲಾಗಿದೆ.