Bigg boss: ಬಿಗ್ ಬಾಸ್ ನಲ್ಲಿ ಕಿಚ್ಚ ಸುದೀಪ್ ಸ್ಥಾನ ತುಂಬುವವರು ಇವರೇ ನೋಡಿ!

Share the Article

Bigg boss: ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್‌ ಬಾಸ್‌ ಕನ್ನಡ 11ನೇ ಸೀಸನ್‌ ಆರಂಭವಾಗಿ ಈಗಾಗಲೇ 2ವಾರ ಕಳೆದಿದೆ. ಕನ್ನಡ ಬಿಗ್ ಬಾಸ್ (Bigg boss) ನಲ್ಲಿ ಒಂದು ವಿಶೇಷತೆ ಇತ್ತು ಅದೇನೆಂದರೆ ನಿರೂಪಕನಾಗಿ 11ಸೀಸನ್ ನಲ್ಲೂ ಕಿಚ್ಚ ಸುದೀಪ್ ಅವರೇ ಇದ್ದರು. ಬಿಗ್ ಬಾಸ್ ಅಂದರೆ ಸುದೀಪ್ ನೆನಪಾಗುತ್ತಿದ್ದರು. ಆದರೆ ಇದೀಗ ಕಿಚ್ಚ ಸುದೀಪ್‌ ಅವರು ನಿರೂಪಕನಾಗಿ ಬಿಗ್‌ ಬಾಸ್‌ -12 ನನ್ನ ಕೊನೆಯ ಸೀಸನ್ ಎಂದು ಹೇಳಿದ್ದು, ಇದು ಅಭಿಮಾನಿಗಳಿಗೆ ಶಾಕ್ ನೀಡಿದೆ.

ಹೌದು, ಕಿಚ್ಚ ಬಿಗ್‌ ಬಾಸ್‌ ನಿರೂಪಣೆಗೆ ಗುಡ್‌ ಬೈ ಹೇಳುತ್ತಿದ್ದಂತೆ ಸೋಶಿಯಲ್‌ ಮೀಡಿಯಾದಲ್ಲಿ ʼಬಿಗ್‌ ಬಾಸ್‌ ಕನ್ನಡʼದ ನಿರೂಪಕ ಸ್ಥಳದಲ್ಲಿ ಯಾರು ಇರ್ತಾರೆ, ಮತ್ತು ಯಾರು ಇರಬಲ್ಲರು ಎಂಬ ಪ್ರಶ್ನೆ ಎಲ್ಲರಲ್ಲೂ ಹುಟ್ಟಿದೆ. ಅದರಂತೆ ಕನ್ನಡ ಬಿಗ್ ಬಾಸ್ ಶೋ ನಡೆಸಿಕೊಡಲು ಈ ಕೆಳಗಿನ ಹೆಸರುಗಳು ನಿರೂಪಕರರಾಗಿ ಬರಬಹುದು ಎಂದು ಬಹುತೇಕರು ಗೆಸ್ ಮಾಡುತ್ತಿದ್ದಾರೆ.

ಡಾಲಿ ಧನಂಜಯ್:‌

ಡಾಲಿ ಧನಂಜಯ್‌ (Dolly Dhananjay) ನಟನೆಯಿಂದ ಎಷ್ಟು ಜನಪ್ರಿಯರೋ, ತನ್ನ ಸರಳ ವ್ಯಕ್ತಿತ್ವದಿಂದಲೂ ಅವರನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸಿಂಪಲ್ ನಡವಳಿಕೆಯಿಂದ ಗುರುತಿಸಿಕೊಂಡಿರುವ ಡಾಲಿ ಧನಂಜಯ್‌ ಬಿಗ್‌ ಬಾಸ್‌ ಸೀಸನ್‌ -12ರ ನಿರೂಪಕರಾಗಿ ಕಾಣಿಸಿಕೊಳ್ಳಬೇಕೆಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್:

ಈಗಾಗಲೇ ‘ಸೂಪರ್ ಮಿನಿಟ್’ ಸೇರಿದಂತೆ ಎರಡು ಮೂರು ಶೋಗಳನ್ನು ಹೋಸ್ಟ್ ಮಾಡಿರುವ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) , ನಿರೂಪಣೆ ಮಾಡಲು ಹಿಂಜರಿಯುವ ಮಾತೇ ಇಲ್ಲ. ಅಂತೆಯೇ ಗೋಲ್ಡನ್‌ ಸ್ಟಾರ್‌ ಗಣೇಶ್‌ ಬಿಗ್‌ ಬಾಸ್‌ ಮನೆಯ ನಿರೂಪಕನಾಗಿ ಬರುವ ಸಾಧ್ಯತೆಯಿದೆ.

ಶಿವರಾಜ್‌ ಕುಮಾರ್:‌

ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ (Shiva Rajkumar) ಎಷ್ಟೇ ಬ್ಯುಸಿಯಾಗಿದ್ದರೂ ಕಿರುತೆರೆಯಲ್ಲಿ ವಾರದ ಕೊನೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಯಾಕೆಂದರೆ ಮುಖ್ಯ ತೀರ್ಪುಗಾರರಾಗಿ ಕಳೆದ ಕೆಲ ವರ್ಷದಿಂದ ʼಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್ʼ ಎನ್ನುವ ರಿಯಾಲಿಟಿ ಶೋನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅವರು ಒಪ್ಪಿಕೊಂಡ ಜವಾಬ್ದಾರಿ ಸರಿಯಾಗಿ ನಿಭಾಯಿಸುತ್ತಾರೆ ಅನ್ನೋದು ಇದರಿಂದಲೇ ಅರ್ಥವಾಗುತ್ತೆ.

ರಮೇಶ್‌ ಅರವಿಂದ್:‌

ಇನ್ನು ಚಿರಯುವಕ ರಮೇಶ್‌ ಅರವಿಂದ್‌ (Ramesh Aravind), ನಿರೂಪಕರಾಗಿ ಜನಮನದ ಪ್ರೀತಿ- ಪ್ರೋತ್ಸಾಹವನ್ನು ಗಳಿಸಿದವರಲ್ಲಿ ಒಬ್ಬರು. ʼಕೋಟ್ಯಧಿಪತಿʼ ಸೇರಿದಂತೆ ವೀಕೆಂಡ್‌ ವಿತ್‌ ರಮೇಶ್‌ʼ ಕಾರ್ಯಕ್ರಮವನ್ನು ನಿರೂಪಣೆ ಮಾಡಿ ಮಿಂಚಿರುವ ಅವರು ʼಬಿಗ್‌ ಬಾಸ್‌ʼ ನಿರೂಪಣೆಗೂ ಬೆಸ್ಟ್ ನಿರೂಪಕರು ಎಂದು ಅನೇಕರ ಅಭಿಪ್ರಾಯವಾಗಿದೆ.

ವಿಜಯ್‌ ರಾಘವೇಂದ್ರ:

ಬಿಗ್‌ ಬಾಸ್‌ ಸೀಸನ್‌ -1 ನಲ್ಲಿ ʼಚಿನ್ನಾರಿ ಮುತ್ತಾʼ ವಿಜಯ್‌ ರಾಘವೇಂದ್ರ (Vijay Raghavendra) ವಿಜೇಯರಾಗಿದ್ದರು. ದೊಡ್ಮನೆ ಆಟ ಹೇಗಿರುತ್ತದೆ ಎನ್ನುವುದರ ಅನುಭವ ಇರುವ ಇವರು ʼಬಿಗ್‌ ಬಾಸ್‌ʼ ಕಾರ್ಯಕ್ರಮವನ್ನು ಹೋಸ್ಟ್‌ ಮಾಡಿದ್ರೆ ಸೂಪರ್ ಆಗಿರುತ್ತೆ ಎನ್ನುವುದು ಇನ್ನು ಕೆಲವರ ಆಸೆ..

ರಿಷಬ್‌ ಶೆಟ್ಟಿ:

ಇನ್ನು ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ (Rishab Shetty) ಸದ್ಯ ʼಕಾಂತಾರ ಪಾರ್ಟ್-1‌ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅದರ ಜೊತೆಗೆ ಬಿಗ್‌ ಬಾಸ್‌ ನಲ್ಲಿ ಅವರು ಹೋಸ್ಟ್‌ ಆಗಿ ಬರುತ್ತಾರೆ ಎನ್ನುವ ಮಾತು ಬಿಗ್‌ ಬಾಸ್‌ ಸೀಸನ್‌ -11 ಆರಂಭದವರೆಗೂ ಕೇಳಿಬಂದಿತ್ತು. ತಮ್ಮ ಸಿನಿಮಾದಲ್ಲಿ ಬ್ಯುಸಿಯಾಗಿರುವ ರಿಷಬ್ ಬಿಗ್‌ ಬಾಸ್‌ ನಡೆಸಿಕೊಟ್ಟರೆ ಟಿ ಆರ್ ಪಿ ಇನ್ನೂ ಹೆಚ್ಚುತ್ತೆ ಅನ್ನೋದು ನೂರಕ್ಕೆ ನೂರು ಸತ್ಯ.

ಒಟ್ಟಿನಲ್ಲಿ ಬಿಗ್‌ ಬಾಸ್‌ ಸೀಸನ್‌ -11ರ ಮುಕ್ತಾಯ ಬಳಿಕ ಮುಂದಿನ ಸೀಸನ್‌ಗೆ ಯಾರು ಹೋಸ್ಟ್‌ ಆಗಲಿದ್ದಾರೆ. ಕಿಚ್ಚ ʼಬಿಗ್‌ ಬಾಸ್‌ʼ ಜಾಗವನ್ನು ಯಾರು 100% ತುಂಬಲಿದ್ದಾರೆ ಎನ್ನುವುದನ್ನು ಸದ್ಯದಲ್ಲೇ ಕಾದುನೋಡಬೇಕಿದೆ.

Leave A Reply