Train Ticket: ಕೇವಲ 10 ನಿಮಿಷ ಅವಧಿ ಮುಂಚೆ ಬುಕ್ ಮಾಡಿ ಕನ್ಫರ್ಮ್ ಟ್ರೈನ್ ಟಿಕೆಟ್ ಪಡೆಯಲು ಸಾಧ್ಯ!

Train Ticket: ದೂರದ ಪ್ರಯಾಣಕ್ಕೆ ರೈಲು ಪ್ರಯಾಣವೇ ಸೂಕ್ತವಾಗಿರುವ ಕಾರಣ, ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಹಾಗಿರುವಾಗ ರೈಲಿನಲ್ಲಿ ಸೀಟು ಕಾಯ್ದಿರಿಸಲು, ಅಥವಾ ಟಿಕೆಟ್ ಪಡೆಯುವಲ್ಲಿ ಕಷ್ಟವಾಗುತ್ತೆ. ಇನ್ನು ಇದ್ದಕ್ಕಿದ್ದಂತೆ ಎಲ್ಲಿಗಾದರೂ ಹೋಗಬೇಕಾದಾಗ ಟಿಕೆಟ್ ಬುಕ್ (Train Ticket)ಮಾಡಬೇಕಾಗುತ್ತದೆ. ಅಂತಹ ಸಮಯದಲ್ಲಿ ರೈಲು ಹೊರಡುವ ಸ್ವಲ್ಪ ಸಮಯದ ಮುಂಚೆಯೇ ಅಂದರೆ 5 ರಿಂದ 10ನಿಮಿಷದ ಮುಂಚೆ ಕರೆಂಟ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎನ್ನುವ ಸೌಲಭ್ಯದ ಬಗ್ಗೆ ನಿಮಗೆ ಇಲ್ಲಿ ತಿಳಿಸಲಾಗಿದೆ.

ಕರೆಂಟ್ ಟಿಕೆಟ್ ಕಾಯ್ದಿರಿಸುವುದು ಹೇಗೆ:ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆಯು ಕರೆಂಟ್ ಟಿಕೆಟ್ ಬುಕ್ಕಿಂಗ್ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ಸೌಲಭ್ಯದ ಮೂಲಕ ರೈಲಿನಲ್ಲಿ ಖಾಲಿ ಇರುವ ಸೀಟುಗಳನ್ನು ಕೊನೆ ಘಳಿಗೆಯಲ್ಲಿ ಅಂದರೆ ಕರೆಂಟ್ ಟಿಕೆಟ್ ಬುಕ್ ಮಾಡುವ ಪ್ರಯಾಣಿಕಾರಿಗೆ ಹಂಚಲಾಗುತ್ತದೆ. ಈ ಟಿಕೆಟ್‌ಗಳನ್ನು ರೈಲು ಹೊರಡುವ ಸ್ವಲ್ಪ ಸಮಯದ ಮೊದಲು ನೀಡಲಾಗುತ್ತದೆ. ಇದರಿಂದ ರೈಲಿನ ಸೀಟುಗಳು ಸಂಪೂರ್ಣ ಭರ್ತಿಯಾಗುವುದಲ್ಲದೆ ಪ್ರಯಾಣಿಕರಿಗೆ ಕೊನೆಯ ಕ್ಷಣದಲ್ಲಿ ಪ್ರಯಾಣಿಸುವ ಅವಕಾಶವೂ ದೊರೆಯುತ್ತದೆ.

ಬುಕಿಂಗ್ ಸಮಯ ಮತ್ತು ಶುಲ್ಕ :

ಕರೆಂಟ್ ಟಿಕೆಟ್ ಅನ್ನು ಬುಕ್ ಮಾಡಲು ಎರಡು ಆಯ್ಕೆಗಳಿವೆ. ಮೊದಲನೆಯದಾಗಿ, IRCTC ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಎರಡನೆಯ ಆಯ್ಕೆಯೆಂದರೆ ರೈಲ್ವೆ ನಿಲ್ದಾಣದ ಟಿಕೆಟ್ ವಿಂಡೋಗೆ ಹೋಗಿ ಟಿಕೆಟ್ ಗಳನ್ನು ಬುಕ್ ಮಾಡಬಹುದು. ರೈಲು ಹೊರಡುವ ಸುಮಾರು 3-4 ಗಂಟೆಗಳ ಮೊದಲು ನೀವು ಈ ಎರಡೂ ವಿಧಾನಗಳ ಮೂಲಕ ಕರೆಂಟ್ ಟಿಕೆಟ್‌ಗಳ ಲಭ್ಯತೆಯನ್ನು ಪರಿಶೀಲಿಸಬಹುದು.

ರೈಲು ಹೊರಡುವ ಸುಮಾರು ನಾಲ್ಕು ಗಂಟೆಗಳ ಮೊದಲು ಕರೆಂಟ್ ಟಿಕೆಟ್ ಅನ್ನು ಬುಕ್ ಮಾಡಬಹುದು. ಅದಲ್ಲದೆ ಕರೆಂಟ್ ಟಿಕೆಟ್‌ನ ದೊಡ್ಡ ವೈಶಿಷ್ಟ್ಯವೆಂದರೆ ರೈಲು ಹೊರಡುವ 5 ರಿಂದ 10 ನಿಮಿಷಗಳ ಮುಂಚಿತವಾಗಿ ನೀವು ಅದನ್ನು ಬುಕ್ ಮಾಡಬಹುದು. ಅಲ್ಲದೇ ಇದು ಸಾಮಾನ್ಯ ಟಿಕೆಟ್‌ಗಿಂತ ಸ್ವಲ್ಪ ಅಗ್ಗವಾಗಿದೆ.

Leave A Reply

Your email address will not be published.