Bantwala: ಶಾಲಾ ಬಸ್‌ ಚಾಲನೆ ಸಂದರ್ಭ ಚಾಲಕನಿಗೆ ಮೂರ್ಛೆ ರೋಗ; ವಿದ್ಯುತ್‌ ಕಂಬಕ್ಕೆ ಗಾಡಿ ಡಿಕ್ಕಿ

Share the Article

Bantwala: ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುತ್ತಿದ್ದ ಬಸ್‌ ಚಾಲಕನೋರ್ವನಿಗೆ ಮೂರ್ಚೆ ರೋಗ ಉಂಟಾಗಿ ಬಸ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆಯೊಂದು ಪೊಳಲಿ ಸಮೀಪದ ಬಡಕಬೈಲು ಎಂಬಲ್ಲಿ ಇಂದು ನಡೆದಿದೆ.

ಅ.14 (ಇಂದು) ಬಡಕಬೈಲು ಸೈಂಟ್‌ ಡೊಮಿನಿಕ್‌ ಆಂಗ್ಲ ಮಾಧ್ಯಮ ಶಾಲೆಯ ಬಸ್‌ ಚಾಲಕ ಅಡ್ಡೂರು ನಿವಾಸಿ ಸುರೇಶ್‌ ಎಂಬುವವರು ಬಸ್‌ ಚಾಲನೆ ಮಾಡುವ ಸಂದರ್ಭ ಮೂರ್ಚೆ ರೋಗ ಕಾಣಿಸಿಕೊಂಡಿದೆ. ಪರಿಣಾಮ ಬಸ್‌ ನಿಯಂತ್ರಣ ಕಳೆದುಕೊಂಡಿದ್ದು, ರಸ್ತೆ ಬದಿ ಇದ್ದ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್‌ ಈ ಘಟನೆಯಲ್ಲಿ ಯಾವುದೇ ಅಪಾಯ ಉಂಟಾಗಿಲ್ಲ. ಚಾಲಕ ಸಹಿತ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.

Leave A Reply