

Actor Bala: ಮಲಯಾಳಂ ಚಿತ್ರರಂಗದ ಖ್ಯಾತ ನಟ ಬಾಲ ಅವರನ್ನು ಕೇರಳ ಪೊಲೀಸರು ಬಂಧನ ಮಾಡಿದ್ದಾರೆ. ಮಾಜಿ ಪತ್ನಿ ನೀಡಿದ ದೂರಿನ ಮೇರೆಗೆ ಇಂದು ಬೆಳಗ್ಗೆ ಕಡವಂತರಾ ಪೊಲೀಸರು ಬಾಲಾ ಮತ್ತು ಈತನ ಮ್ಯಾನೇಜರ್ ರಾಜೇಶ್ ರನ್ನು ಕೊಚ್ಚಿಯಲ್ಲಿರುವ ಮನೆಯಿಂದ ಬಂಧನ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮಗಳ ಮೂಲಕ ನಿಂದನೆ ಮತ್ತು ಕಿರುಕುಳ ನೀಡಿದ ಆರೋಪದ ಮೇಲೆ ಬಂಧನ ಮಾಡಲಾಗಿದೆ. ಬಾಲಾ ಮತ್ತು ಅವರ ಮಾಜಿ ಪತ್ನಿ ಅಮೃತಾ ಸುರೇಶ್ ನಡುವೆ ಉಂಟಾದ ಕಲಹದ ಕೆಲವೊಂದು ವಿಷಯಗಳನ್ನು ಇತ್ತೀಚೆಗೆ ಅಮೃತಾ ಸಾಮಾಜಿಕ ಮಾಧ್ಯಮಗಳ ಮೂಲಕ ಬಹಿರಂಗ ಪಡಿಸಿದ್ದರು.
ಜೊತೆಗೆ ಅಮೃತಾ ಅವರ ಮಾಜಿ ಡ್ರೈವರ್ ಕೂಡಾ ನಟನ ಬಳಿ ನಾನು ಕೆಲಸ ಮಾಡುವ ಸಂದರ್ಭದಲ್ಲಿ ಆತ ತನ್ನ ಹೆಂಡತಿಯೊಂದಿಗೆ ಅನುಚಿತ ವರ್ತನೆ ಮಾಡಿರುವುದನ್ನು ನಾನು ನೋಡಿದ್ದೇನೆ ಎಂಬ ಆರೋಪ ಮಾಡಿದ್ದಾರೆ.
ಹಾಗಾಗಿ ಮಹಿಳೆಯನ್ನು ಅವಮಾನ ಮಾಡಿದ್ದಕ್ಕಾಗಿ ಐಪಿಸಿ ಸೆಕ್ಷನ್ 354 ಹಾಗೂ ಇನ್ನಿತರ ಕೆಲವು ಆರೋಪದ ಹಿನ್ನೆಲೆಯಲ್ಲಿ ನಟನನ್ನು ಬಂಧನ ಮಾಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.













