Home News food app: ಫುಡ್ ಡೆಲಿವರಿ ದುಬಾರಿ ಆಪ್ ಗಳು ಇನ್ಮುಂದೆ ಬಂದ್! ಸರ್ಕಾರದಿಂದ ರೆಡಿ ಆಗಿದೆ...

food app: ಫುಡ್ ಡೆಲಿವರಿ ದುಬಾರಿ ಆಪ್ ಗಳು ಇನ್ಮುಂದೆ ಬಂದ್! ಸರ್ಕಾರದಿಂದ ರೆಡಿ ಆಗಿದೆ ಹೊಸ ಪ್ಲಾನ್ !

Hindu neighbor gifts plot of land

Hindu neighbour gifts land to Muslim journalist

food app: ಆಧುನಿಕ ಯುಗದಲ್ಲಿ ದುಡ್ಡು ಒಂದಿದ್ರೆ ಎಲ್ಲಾನು ಸಿಗುತ್ತೆ ಅನ್ನೋ ಮನಸ್ಥಿತಿ ಎಲ್ಲರಿಗೂ ಗಟ್ಟಿಯಾಗಿದೆ. ಇದೇ ಕಾರಣಕ್ಕೆ ಹಲವು ಫುಡ್ ಡೆಲಿವರಿ ಆಪ್ ಗಳು (food app) ಹುಟ್ಟಿಕೊಂಡು ಮನಸೋ ಇಚ್ಛೆ ಜನರನ್ನು ಫುಡ್ ಡೆಲಿವರಿ ನೆಪದಲ್ಲಿ ಕೊಳ್ಳೆ ಹೊಡೆಯುತ್ತಿದೆ ಎಂದರೆ ತಪ್ಪಾಗಲಾರದು. 

ಹೌದು, ನಗರದ ಹೋಟೆಲ್​ನಲ್ಲಿ ಸಿಗುವ 60 ರೂಪಾಯಿ ಊಟಕ್ಕೆ ಆನ್ಲೈನ್​ನಲ್ಲಿ 120 ರೂಪಾಯಿ ಕೊಡಬೇಕು. ತಾವು ಇದ್ದಲ್ಲಿಗೆ ಆಹಾರ ತಂದು ಕೊಡ್ತಾರೆ ಎಂಬ ಕಾರಣಕ್ಕೆ ಜನ ಕೂಡ ಡಬ್ಬಲ್ ಹಣ ಕೊಡೋದಕ್ಕೆ ರೆಡಿ ಇರ್ತಾರೆ. ಹೋಗ್ಲಿ ಈ ಹಣ ಹೋಟೆಲ್​ನವರಿಗೆ ಸಿಗುತ್ತಾ ಇಲ್ಲ. ಆದರೆ ಹೋಟೆಲ್ನಿಂದ ಗ್ರಾಹಕರಿಗೆ ತಂದು ಕೊಡಲು ಮಧ್ಯೆ ಕೆಲಸ ಮಾಡುವ ಫುಡ್ ಡೆಲಿವರಿ ಆಪ್​ಗಳು ಹಣ ಗಳಿಸುತ್ತಿದೆ. ಇತ್ತ ಗ್ರಾಹಕರಿಂದ, ಅತ್ತ ಹೋಟೆಲ್​ಗಳಿಂದ ಒನ್ ಟು ಡಬ್ಬಲ್ ಹಣ ವಸೂಲು ಮಾಡಿ ಕೋಟಿ ಕೋಟಿ ಗಳಿಸುತ್ತಿವೆ. ಆದರೆ ಇನ್ಮುಂದೆ ಇವರ ಪ್ಲಾನ್ ವರ್ಕ್ ಆಗಲ್ಲ ಯಾಕಂದ್ರೆ ಜನರಿಗೆ ಅನುಕೂಲವಾಗಲೆಂದೇ ಕೇಂದ್ರ ಸರ್ಕರವೇ ONDC ಸೇವೆ ಕೊಡೋದಕ್ಕೆ ಮುಂದಾಗಿದೆ.

ಹೌದು, ONDC ಅಂದ್ರೆ ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ ಅನ್ನೊ ಈ ಆಪ್ ಇನ್ಮುಂದೆ ಫುಡ್ ಡೆಲಿವರಿ ಕ್ಷೇತ್ರಕ್ಕೆ ಕಾಲಿಡಲಿದ್ದು, ಕೇಂದ್ರ ಸರ್ಕಾರದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯಿಂದ ಭಾರತದಲ್ಲಿ ಈ ಸೇವೆ ಆರಂಭಗೊಂಡಿದೆ. ಹೋಟೆಲ್ ಮಾಲೀಕರು ಕೂಡ ಈ ಆಪ್ ಸರ್ವೀಸ್ ಜೊತೆ ಟೈ ಅಪ್ ಆಗಲು ಆಸಕ್ತರಗಿದ್ದಾರೆ. ಈಗಾಗಲೇ ಟ್ರಯಲ್ ಅಂಡ್ ಎರರ್ ಹಾದಿಯಲ್ಲಿ ಸಾಕಷ್ಟು ಹೋಟೆಲ್​ಗಳಲ್ಲಿ ಸೇವೆ ಕೂಡ ಆರಂಭಗೊಂಡಿದೆ. ಮಾರ್ಜಿನಲ್ ರೇಟ್ನಲ್ಲಿ ಗ್ರಾಹಕರಿಗೆ ಸೇವೆ ಕೊಡಲು ಈ ONDC ಬರ್ತಿದೆ ಎನ್ನಲಾಗಿದೆ. ಇದರಿಂದ ಗ್ರಾಹಕರ ಜೇಬಿಗೂ ಹಗುರವಾಗಲಿದ್ದು, ಒಟ್ನಲ್ಲಿ ಸ್ವಿಗ್ಗಿ, ಝೋಮೆಟೋ ಅಂತ ಫುಡ್ ಡೆಲಿವರಿ ಆಪ್ಗಳಿಗೆ ಚೆಕ್ ಮೆಟ್ ಇಡಲು ಕೇಂದ್ರ ಸರ್ಕಾರ ಫುಲ್ ರೆಡಿಯಾಗಿದೆ.