Soil and bacteria: ನಮ್ಮ ಕಾಲಡಿಯಲ್ಲಿರುವ ಮಣ್ಣನ್ನು ನಿರ್ಲಕ್ಷಿಸದಿರಿ: ಬೇರಿಗೂ-ಮಣ್ಣಿಗೂ ಇರುವ ಸಂಬಂಧ ಏನು?

Soil and bacteria: “ಗಿಡವೊಂದರ ಬೇರುಗಳು(Root) ಮಣ್ಣೊಳಗೆ(Soil) ಮುನ್ನುಗ್ಗುತ್ತಿದ್ದಂತೆ ಅಥವಾ ಇಳಿಯುತ್ತಿದ್ದಂತೆ, ಮಣ್ಣಲ್ಲಿ ಸುಪ್ತಾವಸ್ಥೆಯಲ್ಲಿರುವ ಕೋಟ್ಯಾಂತರ ಬ್ಯಾಕ್ಟೀರಿಯಾಗಳು(Bacteria) ಚೈತನ್ಯ ಪಡೆಯುತ್ತವೆ. ಕ್ರಿಯಾಶೀಲರಾಗುತ್ತವೆ” ಎನ್ನುತ್ತಾರೆ George Monbiot ಕೃಷಿ ತಜ್ಞರು.

ನಮಗೆ ಕಗ್ಗತ್ತಲಾಗಿರುವ ನಮ್ಮ ಕಾಲಡಿಯ ಮಣ್ಣನ್ನು ಮತ್ತು ಮಣ್ಣಲ್ಲಿರುವ ಜೀವಿಗಣಗಳನ್ನು ನಾವು ನಿರ್ಲ್ಯಕ್ಷಿಸುವಂತೆಯೇ ಇಲ್ಲ. ಬೆಳಕಿಲ್ಲದ ಈ ಕತ್ತಲುಲೋಕದಲ್ಲಿ ನಿರಂತರವಾಗಿ ಬಹುಬಗೆಯ ಕೌತುಕಗಳು ನಡೆಯುತ್ತಲೇ ಇವೆ. ಮಣ್ಣಲ್ಲಿನ ಜೀವಿಗಣಗಳು ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿರುತ್ತವೆ. ಈ ನಿರಂತರ ಚಟುವಟಿಕೆಗಳನ್ನು ಆಳವಾಗಿ ಗಮನಿಸುತ್ತಿದ್ದಂತೆಯೇ, ಮಣ್ಣೊಳಗೆ ನಡೆಯುವ ಚಟುವಟಿಕೆಗಳು ಮತ್ತು ಅವುಗಳಿಂದಾಗುವ ಬೆಳವಣಿಗೆಗಳು ನಮ್ಮನ್ನು ಬೆರಗುಗೊಳಿಸುತ್ತವೆ. ನಮ್ಮಲ್ಲಿ ಇನ್ನಷ್ಟು ಕುತೂಹಲ ಸೃಷ್ಟಿಸುತ್ತವೆ.

ಮಾನವರಾದ ನಮ್ಮನ್ನೂ ಒಳಗೊಂಡಂತೆ ಈ ಭೂಮಿಯ ಮೇಲಿರುವ ಸಕಲ ಜೀವಿಗಣಗಳು ಬದುಕುರುವುದು – ಬಾಳುತ್ತಿರುವುದೂ ಸಹ ಈ ಮಣ್ಣೊಳಗಿನ ಜೀವಿಗಣಗಳ ಕೃಪೆಯಿಂದಲೇ, ಇವುಗಳು ನಿರಂತರವಾಗಿ ಮಾಡುತ್ತಿರುವ ಚಟುವಟಿಕೆಗಳಿಂದಲೇ.

 

Leave A Reply

Your email address will not be published.