Fashion show: ಪ್ಯಾಕಿಂಗ್ ಟೇಪ್‌ ಸುತ್ತಿಕೊಂಡು ಬಂದ ಚೆಲುವೆ: ಈ ಬಳುಕುವ ಬಳ್ಳಿ ಹಾಕಿದ ಡ್ರೆಸ್ ನೋಡಿ!

Share the Article

Fashion show: ಗಿಗಿ ಹದೀದ್ ತೆಳ್ಳಗೆ ಬೆಳ್ಳಗೆ ಮೈಮಾಟದ ಮಾದಕ ಮದನಾರಿ. ಅಮೆರಿಕಾ(America) ಮೂಲದ ರೂಪದರ್ಶಿ(Model) ಆಗಿರುವ ಇವಳು ಫ್ಯಾಶನ್ ಲೋಕಕ್ಕೆ(Fashion world) ಕಾಲಿಟ್ಟಿದ್ದು ತನ್ನ 2ನೇ ವರ್ಷಕ್ಕೆ. ಸದ್ಯಕ್ಕೆ ಈಕೆ ತನ್ನ ವಿಭಿನ್ನ ಡ್ರೆಸ್(Dress) ಹಾಕಿದ ಬಗ್ಗೆ ಭಾರಿ ಸುದ್ದಿಯಲ್ಲಿದ್ದಾಳೆ.

ಇತ್ತೀಚೆಗೆ ನಡೆದ ಪ್ಯಾರೀಸ್ ಫ್ಯಾಶನ್ ವೀಕ್ ನಲ್ಲಿ ಭಾಗಿಯಾಗಿ ರನ್ ವೇನಲ್ಲಿ ಬಳುಕುತ್ತಾ ಬೆಕ್ಕಿನ ನಡಿಗೆಯಿಂದ ವಿಶೇಷ ಉಡುಪಿನಲ್ಲಿ ಕಂಡು ನೋಡುಗರ ಹುಬ್ಬನ್ನು ಏರಿಸುವಂತೆ ಮಾಡಿದ್ದಳು. ಫ್ಯಾಶನ್ ಪ್ರೀಯರ ಕಣ್ಣು ಕುಕ್ಕುವಂತೆ ಇವಳು ತುಂಡುಡುಗೆಯಂತೆ ಮೈಗೆ ಸುತ್ತಿಕೊಂಡಿದ್ದ DHL ಕಂಪೆನಿಯ ಪ್ಯಾಕಿಂಗ್ ಟೇಪ್(Packing Tape) ಕಾರಣವಾಗಿತ್ತು. ಕೆಂಪು ಹಾಗು ಹಳದಿ ಬಣ್ಣದ ಟೇಪ್ ಅನ್ನು ಸ್ಟ್ರಿಪ್ ಲೆಸ್ ಮಿನಿ ಡ್ರೆಸ್ ನಂತೆ ಧರಿಸಿದ್ದು ದೊಡ್ಡ ಸುದ್ದಿ ಮಾಡಿತು.

ಮೈ ಚಳಿಯನ್ನೇ ಬಿಟ್ಟು ರನ್ ವೇನಲ್ಲಿ ತಳುಕುಬಳುಕಿನೊಂದಿಗೆ ಹೆಜ್ಜೆ ಹಾಕಿದ ಗಿಗಿ ಹದೀದ್ ದೇಹ ಸಿರಿಯ ಅದ್ಭುತ ಮೈಮಾಟಕ್ಕೆ ಕೇವಲ ಪ್ರತ್ಯಕ್ಷದರ್ಶಿಗಳು ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕೂಡಾ ಫಿದಾ ಆಗಿದ್ದಾರೆ. DHL ಕಂಪೆನಿಗೂ ಇದರಿಂದ ಒಳ್ಳೆಯ ಪ್ರಚಾರ, ಬ್ರಾಂಡಿಂಗ್ ಆಗಿದ್ದರಿಂದ ಗಿಗಿ ಹದೀದ್ ಗೆ ‌ 9ಮಿಲಿಯನ್ ಡಾಲರ್ಸ್ಗಳನ್ನು ಉಡುಗೊರೆಯಾಗಿ ನೀಡಿದೆ.

Leave A Reply