Fish: ಮೀನಿನ ಮುಳ್ಳು ಗಂಟಲಲ್ಲಿ ಸಿಲುಕಿಕೊಂಡ್ರೆ ಏನು ಮಾಡ್ಬೇಕು? ಇಲ್ಲಿದೆ ನೋಡಿ ಸುಲಭ ಉಪಾಯ

Fish: ಮಾಂಸಹಾರದಲ್ಲಿ ಬಹುತೇಕರಿಗೆ ಮೀನಿನ ಮೆನು ತುಂಬಾ ಇಷ್ಟ ಆಗುತ್ತೆ . ಅಂತೆಯೇ ಮೀನು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ, ಮೀನು ತಿನ್ನುವಾಗ ಬಹಳ ಎಚ್ಚರಿಕೆಯಿಂದ ತಿನ್ನಬೇಕು. ಇಲ್ಲವಾದಲ್ಲಿ ಮೀನಿನ ಮುಳ್ಳು ( Fish thorn) ಗಂಟಲಲ್ಲಿ ಸಿಲುಕಿಕೊಳ್ಳುತ್ತದೆ. ಇದರಿಂದ ತೊಂದರೆ ಆಗೋದು ಗ್ಯಾರಂಟಿ.

ಹೌದು, ಮೀನು ತಿನ್ನುವಾಗ, ಗಂಟಲಲ್ಲಿ ಸಿಕ್ಕಿಕೊಂಡ ಮುಳ್ಳನ್ನು ಬಿಡಿಸಲು ನೀರು ಕುಡಿಯುವುದು ಹಾಗೂ ಅನ್ನ ನುಂಗುವುದು ಸೇರಿದಂತೆ ಕೆಲವು ಸಲಹೆಗಳು ಕೆಲಸ ಮಾಡುವುದಿಲ್ಲ. ಯಾಕೆಂದರೆ ಮೀನಿನ ಮುಳ್ಳು ಗಂಟಲಿನಲ್ಲಿ ಸಿಲುಕಿಕೊಂಡಾಗ ಒಮ್ಮೆ ಕೈಯಿಂದ ತೆಗೆಯಲು ಪ್ರಯತ್ನಿಸಿ, ಅದು ಕೆಲಸ ಮಾಡದಿದ್ದರೆ, ಮತ್ತೆ ಮತ್ತೆ ಪ್ರಯತ್ನಿಸಬೇಡಿ. ಇದರಿಂದ ತೊಂದರೆಯಾಗುವ ಸಾಧ್ಯತೆ ಇದೆ. ಹೀಗಾಗಿ ಗಂಟಲಲ್ಲಿ ಸಿಲುಕಿಕೊಂಡಿರುವ ಮೀನಿನ ಮುಳ್ಳನ್ನು ಹೋಗಲಾಡಿಸಲು ಇದಕ್ಕಿಂತಲೂ ಕೆಲ ಸುಲಭ ಮಾರ್ಗಗಳಿವೆ.
ಒಂದು ವೇಳೆ ಮೀನಿನ ಮುಳ್ಳು ನಿಮ್ಮ ಗಂಟಲಲ್ಲಿ ಸಿಕ್ಕಿಕೊಂಡಲ್ಲಿ ಒಂದು ಚಮಚ ನಿಂಬೆ ರಸವನ್ನು ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಸೇವಿಸಿದರೆ ಮೀನಿನ ಮುಳ್ಳು ಸುಲಭವಾಗಿ ಬಿಡಿಸಿಕೊಳ್ಳುತ್ತದೆ. ಹೌದು, ನಿಂಬೆರಸ ಮತ್ತು ಆಲಿವ್ ಎಣ್ಣೆಯೊಂದಿಗೆ ಸೇವಿಸಿದಾಗ, ಗಂಟಲಿಗೆ ಸಿಲುಕಿರುವ ಮೀನಿನ ಕಡ್ಡಿ ತುಂಬಾ ಮೃದುವಾಗುತ್ತದೆ ಮತ್ತು ಗಂಟಲಿನಿಂದ ಕೆಳಗೆ ಬರುತ್ತದೆ.