Tata Trust: ಟಾಟಾ ಟ್ರಸ್ಟ್‌ ಅಧ್ಯಕ್ಷರಾಗಿ ನೋಯೆಲ್ ಟಾಟಾ ಆಯ್ಕೆ! ಇವರ ಹಿನ್ನಲೆ ಏನು?!

Tata Trust: ಈಗಾಗಲೇ ರತನ್ ಟಾಟಾ ಮೃತ ಪಟ್ಟಿದ್ದು ಅವರು ಕಟ್ಟಿ ಬೆಳೆಸಿದ ಟಾಟಾ ಟ್ರಸ್ಟ್‌ (Tata Trust) ಅಧ್ಯಕ್ಷ ಸ್ಥಾನವನ್ನು ಇಂದು ತುಂಬಲಾಗಿದೆ. ಹೌದು, ರತನ್ ಟಾಟಾ (Ratan Tata) ಅವರ ಮಲಸಹೋದರ ಹಾಗೂ ಟ್ರೆಂಟ್ ಅಧ್ಯಕ್ಷ ನೋಯೆಲ್ ಟಾಟಾ (Noel Tata) ಅವರನ್ನು ಟಾಟಾ ಟ್ರಸ್ಟ್‌ (Tata Trust) ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

67 ವರ್ಷದ ನೋಯೆಲ್ ಈಗಾಗಲೇ ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್‌ನ ಟ್ರಸ್ಟಿಯಾಗಿದ್ದಾರೆ, ಇದು ಟಾಟಾ ಸನ್ಸ್‌ನಲ್ಲಿ 66% ಪಾಲನ್ನು ಹೊಂದಿದೆ. 2019ರಲ್ಲಿ ಸರ್ ರತನ್ ಟಾಟಾ ಟ್ರಸ್ಟ್‌ನ ಟ್ರಸ್ಟಿಯಾಗಿ ಸೇರಿಕೊಂಡಿದ್ದ ಇವರು 2022ರಲ್ಲಿ ಸರ್ ದೊರಾಬ್ಜಿ ಟ್ರಸ್ಟ್ ಮಂಡಳಿಗೂ ನೇಮಕಗೊಂಡಿದ್ದರು.

ಇನ್ನು ನೋಯಲ್ ಇವರ ಹಿನ್ನಲೆ ಬಗ್ಗೆ ಹೇಳುವುದಾದರೆ ರತನ್‌ ಟಾಟಾ ಅವರ ತಂದೆ ನೇವಲ್ ಎರಡು ಮದುವೆಯಾಗಿದ್ದರು. ಮೊದಲ ಪತ್ನಿ ಸೂನಿ ಕಮಿಶರಿಯಟ್, ಎರಡನೇ ಪತ್ನಿ ಸ್ವಿಟ್ಜರ್ಲೆಂಡ್‌ನ ಉದ್ಯಮಿ ಸಿಮೋನ್ ಡ್ಯುನೊಯರ್‌. ನೇವಲ್ ಮತ್ತು ಸೂನಿ ದಂಪತಿಗೆ ರತನ್‌ ಮತ್ತು ಜಿಮ್ಮಿ ಟಾಟಾ ಜನಿಸಿದರು. 1940 ರದಶಕದಲ್ಲಿ ನೇವಲ್ ಮತ್ತು ಸೂನಿ ದಂಪತಿ ಬೇರ್ಪಟ್ಟಿದ್ದರು. ಬೇರ್ಪಟ್ಟ ನಂತರ ಸಿಮೋನ್ ಡ್ಯುನೊಯರ್‌ ಅವರನ್ನು 1955 ರಲ್ಲಿ ನೇವಲ್ ವಿವಾಹವಾದರು. ಈ ದಂಪತಿಯ ಪುತ್ರನೇ ನೋಯೆಲ್ ಟಾಟಾ.

ಟಾಟಾ ಟ್ರಸ್ಟ್‌ನ ಉತ್ತರಾಧಿಕಾರಿಯಾಗಿ ನೋಯೆಲ್ ಟಾಟಾ ಅವರನ್ನೇ ಆಯ್ಕೆ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಈಗ ಅಧಿಕೃತವಾಗಿ ಹೆಸರು ಘೋಷಣೆಯಾಗಿದೆ. ನೋಯೆಲ್ ಅವರನ್ನು ಆಯ್ಕೆ ಮಾಡುವ ಮೂಲಕ ಟಾಟಾ ಕುಟುಂಬದ ಸದಸ್ಯರ ಬಳಿಯೇ ಅಧಿಕಾರ ಉಳಿಸಿದಂತೆ ಆಗುತ್ತದೆ.

ನೋಯೆಲ್ ಅವರು ಸಸೆಕ್ಸ್ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ. 2003 ರಲ್ಲಿ ಟೈಟಾನ್ ಇಂಡಸ್ಟ್ರೀಸ್ ಮತ್ತು ವೋಲ್ಟಾಸ್‌ನ ನಿರ್ದೇಶಕರಾಗಿ ನೋಯೆಲ್‌ ಆಯ್ಕೆ ಆಗಿದ್ದರು.

1 Comment
  1. Üsküdar Tuvalet açma says

    Üsküdar Tuvalet açma Kanalizasyon tıkanıklığını kırmadan açmaları çok etkileyiciydi. Tavsiye ederim. https://sustalks.com/blogs/7253/%C3%9Csk%C3%BCdar-T%C4%B1kan%C4%B1kl%C4%B1k-A%C3%A7ma

Leave A Reply

Your email address will not be published.