Cabinet meeting: ಸಚಿವ ಸಂಪುಟ ಸಭೆ: ಸಿಎಂ ಸಿದ್ದರಾಮಯ್ಯಗೆ ಎಲ್ಲಾ ಸಚಿವರು ಬೆಂಬಲ: ಕೊರೋನಾ ಅಕ್ರಮದಲ್ಲಿ ಭಾಗಿಯಾದವರು ಕಪ್ಪು ಪಟ್ಟಿಗೆ!

Cabinet meeting: ಸಿಎಂ ಸಿದ್ದರಾಮಯ್ಯ(CM Siddaramayiah) ಜೊತೆಗೆ ಇದ್ದೇವೆ ಅಂತ ಸಚಿವರು(Ministers) ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ವಿಧಾನ ಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟ(cabinet meeting) ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯ್ತು. ಸಂಪುಟ ಸಭೆಯ ಕುರಿತು ಕಾನೂನು ಸಚಿವ ಹೆಚ್ ಕೆ ಪಾಟೀಲ್( H K Patil) ಮಾಧ್ಯಮಗಳಿಗೆ ಮಾಹಿತಿ ನೀಡಿದರು.
– ಅಕ್ರಮ ಗಣಿಗಾರಿಕೆ ಕುರಿತು ತನಿಖೆಗೆ ನೇಮಕವಾಗಿರುವ ಎಸ್ ಐಟಿ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಲಾಯ್ತು. 113 ಪ್ರಕರಣಗಳು ಇನ್ನೂ ತನಿಖೆ ಮಾಡಬೇಕಾದ ಹಿನ್ನೆಲೆ, 2014 ರಲ್ಲಿ ನೇಮಕವಾಗಿರುವ ಎಸ್ ಐ ಟಿ ತಮನಡಕ್ಕೆ ತನಿಖೆ ಮುಂದುವರೆಸಲು ಅನುಮತಿ ನೀಡಲಾಯಿತು.

– ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಗನ ಮೃಣಾಲ್ ಸಕ್ಕರೆ‌ ಕಾರ್ಖಾನೆಗೆ ಧಾರವಾಡದ 19 ಗ್ರಾಮಗಳನ್ನು ಕಬ್ಬು ಮೀಸಲು ಕ್ಷೇತ್ರವಾಗಿಸಲು ಸಂಪುಟ ಅನುಮತಿ ನೀಡಿತು.
– ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ 60 ಕ್ರಿಮಿನಲ್ ಪ್ರಕರಣಗಳ ಪೈಕಿ 43 ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಸಂಪುಟ ಸಭೆ ತಿರ್ಮಾನಿಸಿತು.
– ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಸಮವಸ್ತ್ರ ನೀಡಲು ಸಂಪುಟ ಅನುಮೋದನೆ
– ನ್ಯಾ ಕುನ್ಹಾ ವಿಚಾರಣಾ ಆಯೋಗ 7223.64 ಕೋಟಿ ಕೊರೊನಾ ವೇಳೆ ಅವ್ಯವಹಾರ ನಡೆದಿದೆ ಎಂದು ತನಿಖೆ ನಡೆಸಿ. 500 ಕೋಟಿ ರೂ ವಸೂಲಾತಿಗೆ ಆಯೋಗ ಶಿಫಾರಸು ಮಾಡಿದೆ. ಬಿಬಿಎಂಪಿಯ 4 ವಲಯಗಳ ವರದಿ ಬರಬೇಕಿದ್ದು, 53 ಸಾವಿರ ಕಡತ ಪರಿಶೀಲನೆ ಮಾಡಿದೆ. ವರದಿಯಲ್ಲಿ ಕ್ರಿಮಿನಲ್ ಅಂಶ ಇರುವುದರಿಂದ ಎಸ್ ಐ ಟಿ ಮಾಡಲು ಸಂಪುಟ ಸಭೆ ನಿರ್ಣಯ ಮಾಡಿದೆ.
– ಕೊರೊನಾ ಅಕ್ರಮದಲ್ಲಿ ಭಾಗಿಯಾದವರನ್ನು ಕಪ್ಪುಪಟ್ಟಿಗೆ ಸೇರಿಸಲು ತಿರ್ಮಾನ. ಅಕ್ರಮದಲ್ಲಿ ಭಾಗಿಯಾದ ಅಂದಿನ ಸಚಿವರು, ರಾಜಕೀಯ ನಾಯಕರನ್ನು ಸಹ ಎಸ್ ಐ ಟಿ ತನಿಖೆ ಮಾಡಲಿದೆ. ಇದರ ಜೊತೆಗೆ ಸಚಿವ ಸಂಪುಟ ಸಭೆಯ ಉಪಸಮಿತಿ ಸಹ ರಚನೆ ಮಾಡಲಿದೆ ಎಂದುಬಹೆಚ್ ಕೆ ಪಾಟೀಲ್ ಸ್ಪಷ್ಟನೆ ನೀಡಿದರು.

Leave A Reply

Your email address will not be published.