Coffee serve: ಸುಳ್ಯ, ಪುತ್ತೂರಿನಲ್ಲೂ ಕಾಫಿ ಬೆಳೆಯಬಹುದು: ಮಡಿಕೇರಿ ಕಾಫಿ ಮಂಡಳಿಯಿಂದ ಸರ್ವೆ

Coffee serve: ದ.ಕ. ಜಿಲ್ಲೆ ಕಾಫಿ ಬೆಳೆಯಬಹುದಾದ(Coffee planters) ಪ್ರದೇಶ ಎಂದು ದೃಡೀಕರಿಸಿ, ಕಾಫಿ ಬೋರ್ಡ್ ನ(coffee board) ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಲು ಕೇಂದ್ರ ಸರಕಾರದ+Central govt) ಕಾಫಿ ಮಂಡಳಿಗೆ ಅಧ್ಯಯನ ವರದಿ(Study report) ಒಪ್ಪಿಸಲು ಮಡಿಕೇರಿ(Madikeri) ಕಾಫಿ ಮಂಡಳಿಯ ಹಿರಿಯ ಅಧಿಕಾರಿಗಳನ್ನೊಳಗೊಂಡ ತಂಡ ಸುಳ್ಯ(Sulia) ಹಾಗೂ ಪುತ್ತೂರು(Puttur) ತಾಲೂಕಿನ ಕಾಫಿ ಬೆಳೆಗಾರರ ತೋಟ ವೀಕ್ಷಣೆ ಮಾಡಿದೆ.

 

ಅಡಿಕೆಗೆ ವಿವಿಧ ರೀತಿಯ ಹೊಸ ರೋಗಗಳು ಕಾಣಿಸಿಗೊಂಡಿದ್ದು, ಅಡಿಕೆ ಬೆಳೆಗಾರರು ಕಂಗಾಲಾಗುತ್ತಿರುವ ಈ ಸಂದರ್ಭದಲ್ಲಿ,ಇಂದಿನ ಸಭೆಯಲ್ಲಿ ಅಧಿಕಾರಿಗಳು ಅಡಿಕೆ ತೋಟದಲ್ಲಿ , ರಬ್ಬರ್ ಮಧ್ಯೆ ಕಾಫಿ ಬೆಳೆಸುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವಂತೆ ಅನಿಸಿದೆ. ನಿನ್ನೆ ಸುಳ್ಯದಲ್ಲಿ ಸಮಾಲೋಚನೆ ಬಳಿಕ ತೋಟ ವೀಕ್ಷಣೆ ಮಾಡಿದ್ದರು.

ಮೊದಲು ಇಲ್ಲಿಯ ಅಡಿಕೆ ತೋಟದೊಳಗೆ ಕಾಫಿ ಬೆಳೆಯುವುದನ್ನು ನೋಡಿದಾಗ ಅಧಿಕಾರಿಗಳಿಗಿದ್ದ ಒಂದು ಮನಸ್ಥಿತಿ ಬದಲಾವಣೆ ಆಗಿತ್ತು. ಮುಂದೆ ಕಾಫಿ ಬೆಳೆಯಬೇಕೆಂಬ ಯೋಚನೆಯಲ್ಲಿ ಬಂದ ಕೃಷಿಕರಿಗೆ ನಿರಾಸೆ ಆಗಲಿಲ್ಲ. ಬದಲಾಗಿ ಇಲ್ಲಿಯ ಕಾರ್ಮಿಕರಿಗೆ ತರಬೇತಿ ಕೊಡಿಸುವ ಭರವಸೆ ಅಧಿಕಾರಿಗಳಿಂದ ಬಂದಿದೆ. ಅದೇ ರೀತಿ ಆಸಕ್ತ ಕೃಷಿಕರಿಗೆ ಚಟ್ಟಳ್ಳಿಯ ಸಂಶೋಧನಾ ಕೇಂದ್ರದಲ್ಲಿ ಇಲ್ಲಿಯ ಕೃಷಿಕರಿಗೆ ಅನುಕೂಲಕರ ದಿನಗಳಲ್ಲಿ ಮಾಹಿತಿ ಕಾರ್ಯಾಗಾರವನ್ನೂ ಎರ್ಪಡಿಸಲು ಬರುವಂತೆ ಆಹ್ವಾನ ನೀಡಿದ್ದಾರೆ.

ಗಿಡಗಳನ್ನು ಒದಗಿಸುವುದು, ಸುಣ್ಣದ ಗುಣಮಟ್ಟ, ಮಣ್ಣು ಪರೀಕ್ಷೆಯನ್ನೂ ಮಾಡಲು ಸಿದ್ದರಿದ್ದಾರೆ. ಇಲ್ಲಿಯ ಕೃಷಿಕರಿಗೆ ಆವಶ್ಯಕತೆ ಇದ್ದಾಗ ಎಷ್ಟು ಸಲ ಬೇಕಾದರೂ ಬರಲೊಪ್ಪಿದ್ದಾರೆ. ಇಲ್ಲಿಯ ಕಾಫಿ ಬೀಜ, ಮಣ್ಣನ್ನು ಪರೀಕ್ಷೆಗಾಗಿ ಸಂಗ್ರಹಿಸಿ,
ಕೊನೆಯಲ್ಲಿ ಹೊರಡಲನುವಾದಾಗ ದ.ಕ. ಕೃಷಿಕರಿಗೆ ಅನುಕೂಲವಾಗುವ ವರದಿಯನ್ನು ಒಪ್ಪಿಸುವ ಭರವಸೆಯನ್ನು ನೀಡಿದಾಗ ತಂಡವನ್ನು ಸಂತೋಷದಿಂದ ಕೃಷಿಕರು ಬೀಳ್ಕೊಟ್ಟರು.

ಸಮಾಲೋಚನೆ ಸಭೆಯಲ್ಲಿ, N.R.C.C ಹಾಗೂ CPCRI ಯ ನಿವೃತ್ತ ವಿಜ್ಞಾನಿ ಡಾ.ಯದುಕುಮಾರ್, ಮುಂಬೈ ವಿ.ವಿಯ ವಿಶ್ರಾಂತ ಪ್ರೊಫೆಸರ್ ಹಾಗೂ ವಿಭಾಗ ಮುಖ್ಯಸ್ಥ ಡಾ.ತಾಳ್ತಜೆ ವಸಂತಕುಮಾರ,
ಕಾಳುಮೆಣಸಿನ ಸಾಧಕರಾದ ಸುರೇಶ ಬಲ್ನಾಡ್, ಅಜಿತ್ ಪ್ರಸಾದ್, ಅರವಿಂದ ಮುಳ್ಳಂಕೊಚ್ಚಿ, ಸುಳ್ಯ ರೈತ ಉತ್ಪಾದಕ ಸಂಘದ ಜಯರಾಮ, ನೀರಾವರಿ ತಂತ್ರಜ್ಞಾನ ಅಳವಡಿಸಿಕೊಂಡ ಅನಂತರಾಮ ಪೆರುವಾಯಿ, ಉಪ್ಪಿನಂಗಡಿಯ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ವಿ.ಪ್ರಸಾದ, ನಿವೃತ್ತ ಜಿಲ್ಲಾ ಅರಣ್ಯಸಂರಕ್ಷಣಾಧಿಕಾರಿ ಸದಾಶಿವ ಭಟ್, ಉಧ್ಯಮಿ ಸೈಮನ್, ಅರೇಬಿಕಾ(ಚಂದ್ರಿಕಾ) ಬೆಳೆಗಾರ ಪುಷ್ಪರಾಜ್, ‘ಸಮೃದ್ಧಿ’ತಂಡ, ಜೈನ್ ಇರಿಗೇಷನ್ ನ ಅಭಿಜಿತ್, ಸೇರಿದಂತೆ 60 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

4 ಅಧಿಕಾರಿಗಳನ್ನೊಳಗೊಂಡ ತಂಡ ಮಧ್ಯಾಹ್ನ 12 ರಿಂದ ಸಾಯಂಕಾಲ 4.30 ರ ವರೇಗೆ ಉಪ್ಪಿನಂಗಡಿಯ ಚಂದ್ರಶೇಖರ ತಾಳ್ತಜೆ ಯವರ ಕೃಷಿಕ್ಷೇತ್ರದಲ್ಲಿ ಕೃಷಿಕರೊಂದಿಗೆ, ಕ್ಷೇತ್ರ ವೀಕ್ಷಣೆ ಹಾಗೂ ಸಮಾಲೋಚನೆ ನಡೆಸಿತು. ಎರಡು ದಿನಗಳ ಈ ಸರ್ವೇ ಕಾರ್ಯಕ್ಕೆ ಅಧಿಕಾರಿಗಳಿಗೆ ಪ್ರೇರಣೆ ನೀಡಿದವರು ಮಡಿಕೇರಿ ಕಾಫಿಬೆಳೆಗಾರರಾದ ಬೆಂಗಳೂರಿನ ಅನಂತರಾಜ್ ಗೌಡ.

1 Comment
Leave A Reply

Your email address will not be published.