Bengaluru: ಬೆಂಗಳೂರಲ್ಲಿ ಯೂಟ್ಯೂಬರ್‌ ಅಟ್ಟಹಾಸ: ಸಿಕ್ಕ ಸಿಕ್ಕ ಅಂಗಡಿಗಳಿಗೆ ನುಗ್ಗಿ ವಂಚನೆ!

Bengaluru: ಸಿಲಿಕಾನ್‌ ಸಿಟಿಯಲ್ಲಿ ಎಲ್ಲಿ ನೋಡಿದರು ಯೂಟ್ಯೂಬರ್‌ ಗಳು.  ಊಟ ತಿಂಡಿ ಟ್ರಾವೆಲ್ ಶಾಪಿಂಗ್ಅಂತಾ ಕ್ಯಾಮರಾ ಹಿಡ್ಕೊಂಡು ಅಲೆದಾಡುತ್ತಾರೆ. ಆದ್ರೆ ಇಲ್ಲೊಬ್ಬ ಯೂಟ್ಯೂಬರ್‌ ಕ್ಯಾಮರಾ ವನ್ನೇ ಬಂಡವಾಳ ಮಾಡಿಕೊಂಡು, ಸುಮಾರು 50ಕ್ಕೂ ಹೆಚ್ಚು ಬೇಕರಿ ಮಾಲೀಕರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದಾನೆ.

ಹೌದು, ಬೊಮ್ಮನಹಳ್ಳಿ ಶಫಿ ಎಂಬ ಯುಟ್ಯೂಬರ್‌ ನಗರದಲ್ಲಿರುವ (Bengaluru) ಹಲವು ಬೇಕರಿ ಮಾಲೀಕರಿಗೆ ಸ್ವಚ್ಛತೆಯಿಲ್ಲ, ಮೆಂಟೈನೆನ್ಸ್‌ ಇಲ್ಲ ಎಂದು ಬೆದರಿಕೆ ಹಾಕಿದ್ದು,ಬೇಕರಿ ಒಳಗೆ ನುಗ್ಗಿ ವೀಡಿಯೋ ಚಿತ್ರೀಕರಣ ಮಾಡಿಕೊಂಡು ಲೈಸೆನ್ಸ್‌ ರದ್ದು ಮಾಡಿಸ್ತೇನೆ ಅಂತ ಬೆದರಿಕೆ ಹಾಕುತ್ತಿದ್ದ ಎಂದು ತಿಳಿದುಬಂದಿದೆ.

ಇದೇ ರೀತಿ ಈತ ಹುಳಿಮಾವು ಬಳಿಯ ಅಕ್ಷಯ್ ನಗರದ ಡಿಎಲ್‌ಎಫ್ ಬಳಿಯ ಬೇಕರಿಗಳಲ್ಲಿ ಪತ್ರಕರ್ತ ಅಂತ ಹೇಳಿಕೊಂಡು ಬೇಕರಿ ಮಾಲೀಕರಿಂದ 10,000 ರೂ. ಆನ್ಲೈನ್ ಪೇಮೆಂಟ್ ಮಾಡಿಸಿಕೊಂಡಿದ್ದಾನೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅದಲ್ಲದೆ ಈತ ʻಪ್ರಜಾಪರʼ ಯೂಟ್ಯೂಬ್ ಚಾನಲ್‌ ಅಂತ ಹೇಳಿಕೊಂಡು ಧಮ್ಕಿ ಹಾಕಿದ್ದಾನೆ. ಇದೇ ವೇಳೆ ಹಣಕ್ಕೆ ಡಿಮ್ಯಾಂಡ್‌ ಮಾಡುವಾಗ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಇದೀಗ ಬೇಕರಿ ಮಾಲೀಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಹುಳಿಮಾವು ಪೋಲಿಸರು ಆರೋಪಿಯನ್ನ ಬಂಧಿಸಿದ್ದಾರೆ.

Leave A Reply

Your email address will not be published.