Rathan Tata Love Story: ಎಲ್ಲದ್ರಲ್ಲೂ ಸಕ್ಸಸ್ ಕಂಡಿದ್ದ ರತನ್ ಟಾಟಾ ಲವ್ ಅಲ್ಲಿ ಮಾತ್ರ ಫೇಲ್.. !! ಲಫ್ ಬ್ರೇಕಪ್ ಆಗಲು ಕಾರಣ ಭಾರತ- ಚೀನಾ ಯುದ್ಧ !! ಅಂದು ಆಗಿದ್ದೇನು?

Rathan Tata Love Story: ಭಾರತದ ಖ್ಯಾತ ಕೈಗಾರಿಕೋದ್ಯಮಿ ಮತ್ತು ಸಮಾಜಸೇವಕ ರತನ್ ಟಾಟಾ ನಿಧನಕ್ಕೆ ಇಡೀ ದೇಶ ಕಂಬನಿ ಮಿಡಿದಿದೆ. ಭಾರತೀಯರನ್ನು ನೇರವಾಗಿ ನಾಟಿದ ಮರಣ ಇದಾಗಿದೆ. ರತನ್ ಟಾಟಾ ಕೇವಲ ಕೈಗಾರಿಕೋದ್ಯಮಿಯಾಗಿರಲಿಲ್ಲ, ಬದಲಾಗಿ ಅವರು ಟಾಟಾ ಗ್ರೂಪ್‌ಗೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟ ವ್ಯಕ್ತಿಯಾಗಿದ್ದಾರೆ. ಹೀಗೆ ಎಲ್ಲದರಲ್ಲೂ ಸಕ್ಸಸ್ ಕಂಡ ರತನ್ ಟಾಟಾ ತಮ್ಮ ಲವ್ ನಲ್ಲಿ ಮಾತ್ರ ಫೇಲ್ ಆಗಿದ್ದರು. ಅದೂ ಕೂಡ ಅವರ ಲವ್ ಬ್ರೇಕಪ್ ಎ ಕಾರಣ ಭಾರತ- ಚೀನಾ ಯುದ್ಧ ಅನ್ನೋದೆ ಅಚ್ಚರಿ ಸಂಗತಿ. ಹಾಗಿದ್ರೆ ಅವರ ಪ್ರಿಯತಮೆ ಯಾರು? ಲವ್ ಯಾಕೆ ಫೇಲ್ ಆಯ್ತು?

 

ರತನ್ ಟಾಟಾ(Rathan Tata) ಯೌವನದಲ್ಲಿ ಎಲ್ಲರಂತೆ ಪ್ರೀತಿಯಲ್ಲಿ ಬಿದ್ದಿದ್ದರು. ರತನ್ ಅವರು ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಕೆಲಸ ಮಾಡುತ್ತಿರುವಾಗ ಯುವತಿಯೊಬ್ಬರನ್ನು ಭೇಟಿಯಾಗಿದ್ದರು. ಬಳಿಕ ಭೇಟಿ ಸ್ನೇಹಕ್ಕೆ ತಿರುಗಿ ಹಾಗೆಯೇ ಪ್ರೇಮವಾಗಿ ಬದಲಾಯಿತು. ಇದೇ ವೇಳೆ ರತನ್ ಅವರಿಗೆ ಅಮೆರಿಕದಲ್ಲೇ ನೆಲೆಸಬೇಕೆ ಅಥವಾ ಸ್ವದೇಶಕ್ಕೆ ಮರಳಬೇಕೆ ಎಂಬ ಪ್ರಶ್ನೆ ಬಲವಾಗಿ ಕಾಡುತ್ತಿತ್ತು. ಇದೇ ವೇಳೆ ರತನ್ ಟಾಟಾ ಅವರ ಅಜ್ಜಿ ನವಾಜಬಾಯಿ ಅವರ ಆರೋಗ್ಯ ಸ್ಥಿತಿ ಗಂಭೀರವಾಯಿತು. ಕೂಡಲೇ ರತನ್ ಅವರು ದೇಶಕ್ಕೆ ಮರಳಿದರು.

ಈ ಸಮಯದಲ್ಲಿ ತನ್ನ ಗೆಳತಿ ಕೂಡ ಶೀಘ್ರದಲ್ಲೇ ಭಾರತಕ್ಕೆ ಬರುತ್ತಾಳೆ ಮತ್ತು ತಾವಿಬ್ಬರೂ ಇಲ್ಲೇ ಮದುವೆಯಾಗುತ್ತಾರೆ ಎಂದು ಅವರು ಭಾವಿಸಿದ್ದರು. ದುರಾದೃಷ್ಟವಶಾತ್ ಭಾರತ ಮತ್ತು ಚೀನಾ ನಡುವೆ 1962 ರ ಯುದ್ಧ ಪ್ರಾರಂಭವಾಯಿತು ಮತ್ತು ಅವರ ಗೆಳತಿಯ ಕುಟುಂಬವು ಭಾರತಕ್ಕೆ ಬರಲು ನಿರಾಕರಿಸಿತು. ಹೀಗಾಗಿ, ಸನ್ನಿವೇಶಗಳಿಂದಾಗಿ ಅವರ ಪ್ರೇಮಕಥೆ ಅಲ್ಲಿಗೇ ಅಂತ್ಯವಾಯಿತು.

ಇದೇ ದುಃಖದಲ್ಲಿ ರತನ್ ಬೇರೆ ಮದುವೆಯಾಗಲು ಇಚ್ಚಿಸಲಿಲ್ಲ. ಬದಲಾಗಿ ತಮ್ಮ ಜೀವನವನ್ನು ದೇಶಕ್ಕಾಗಿ ಜನರ ಸೇವೆಗಾಗಿ ಮುಡಿಪಾಗಿಸುತ್ತೇನೆ ಎಂದು ಹಗಲು ರಾತ್ರಿ ಎನ್ನದೆ ದುಡಿದರು. ಅದರ ಪ್ರತಿಫಲವಾಗಿ ಇಂದು ಟಾಟಾ ಗ್ರೂಪ್ ದೇಶದಲ್ಲಿ ದೊಡ್ಡ ಹೆಮ್ಮರವಾಗಿ ಬೆಳೆದು ನಿಂತಿದೆ.

Leave A Reply

Your email address will not be published.