Children death: ಮೂವರು ಮಕ್ಕಳು ನೀರುಪಾಲು: ಮುಗಿಲು ಮುಟ್ಟಿದ ಆಕ್ರಂದನ

Share the Article

Children death: ಕೆರೆಯಲ್ಲಿ ಈಜಲು ಹೋಗಿ ಮೂವರ ಮಕ್ಕಳು ದಾರುಣ ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುಮತಿ ಗ್ರಾಮದಲ್ಲಿ ನಡೆದಿದೆ.

ಸಾಗರ್( 14) ಗುರು( 14) ಮತ್ತು ವಿನಯ್ (11) ಮೃತ ದುರ್ದೈವಿಗಳು. ಸಾವನ್ನಪ್ಪಿದ ಎಲ್ಲಾ ಮಕ್ಕಳು ಕುಮತಿ ಗ್ರಾಮದವರು. ದಸರಾ ರಜೆ ಹಿನ್ನೆಲೆ ಮಕ್ಕಳು ಈಜಲು ಕೆರೆಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಮಕ್ಕಳನ್ನು ಳೆದುಕೊಂಡ ಪೊಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಕಾನಾಹೊಸಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

Leave A Reply