Bigg Boss Kannada-11: ಇದ್ದಕ್ಕಿದ್ದಂತೆ ಮನೆಯ ಎಲ್ಲಾ ಸ್ಪರ್ಧಿಗಳನ್ನೂ ನಾಮಿನೇಟ್ ಮಾಡಿದ ಬಿಗ್ ಬಾಸ್ !! ಕಾರಣ ಕೇಳಿ ಸ್ಪರ್ಧಿಗಳೇ ಶಾಕ್

Bigg Boss Kannada-11: ಬಿಗ್ ಬಾಸ್ ಸೀಸನ್ 11 (Bigg Boss kannada 11) ಎರಡನೇ ವಾರ ಕಾಲಿಟ್ಟಿದೆ. ಆದರೆ ಈ ಬೆನ್ನಲ್ಲೇ ಬಿಗ್ ಬಾಸ್ ತನ್ನ ಸ್ಪರ್ಧಿಗಳಿಗೆ ಬಿಗ್ ಶಾಕ್ ನೀಡಿದೆ. ಅದೇನೆಂದರೆ ಬಿಗ್ ಬಾಸ್ ಇದ್ದಕ್ಕಿದ್ದಂತೆ ಮನೆಯ ಎಲ್ಲಾ ಸ್ಪರ್ಧಿಗಳನ್ನು ಒಮ್ಮೆಗೇ ನಾಮಿನೇಟ್ ಮಾಡಿದೆ. ಇಷ್ಟೇ ಅಲ್ಲದೆ ಇದಕ್ಕೆ ಕಾರಣವನ್ನೂ ನೀಡಿದೆ. ಈ ಕಾರಣ ಕೇಳಿ ಮನೆಯ ಎಲ್ಲಾ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ.

ಹೌದು, ಬಿಗ್ ಬಾಸ್ ರೂಲ್ಸ್ ಅಂದರೆ ರೂಲ್ಸ್. ಅದನ್ನು ಯಾರೂ ಬ್ರೇಕ್ ಮಾಡೋ ಹಾಗಿಲ್ಲ. ಆದರೀಗ ಸ್ಪರ್ಧಿಗಳು ರೂಲ್ಸ್ ಬ್ರೇಕ್ ಮಾಡಿ ದೊಡ್ಡ ಶಿಕ್ಷೆಗೆ ಗುರಿಯಾಗಿದ್ದಾರೆ. ಅಂದಹಾಗೆ ದೊಡ್ಮನೆಯಲ್ಲಿ ಒಮ್ಮೆ ರೂಲ್ಸ್ ಬ್ರೇಕ್ ಮಾಡಿದರೆ ಅದರ ಎಫೆಕ್ಟ್ ಆ ಸ್ಪರ್ಧಿಗೆ ಮಾತ್ರವಲ್ಲ, ಇಡೀ ಮನೆ ಅನುಭವಿಸಬೇಕಾಗುತ್ತದೆ. ಇದು ಮೊದಲ ವಾರದಲ್ಲಿಯೇ ಸ್ಪರ್ಧಿಗಳಿಗೆ ಅನುಭವ ಆಗಿತ್ತು. ಆದರೆ, ಇನ್ನೂ ಮನೆಯ ಸದಸ್ಯರು ಬಿಗ್ ಬಾಸ್ ನಿಯಮವನ್ನು ಸೀರಿಯೆಸ್ ಆಗಿ ತೆಗೆದುಕೊಂಡಿಲ್ಲ ಅನಿಸುತ್ತೆ.
ಯಾಕೆಂದರೆ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್‌ಗೆ ತಯಾರಿ ಮಾಡಿಕೊಳ್ಳುವಾಗ ಪರದೆಯನ್ನು ಇಳಿಸಲಾಗುತ್ತದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆಗ ಸ್ಪರ್ಧಿಗಳು ಅದನ್ನು ತೆಗೆದು ಅಥವಾ ಇಣುಕಿ ನೋಡುವಂತಿಲ್ಲ. ಆದರೆ, ಇದೀಗ ಇದನ್ನು ಕೆಲ ಸ್ಪರ್ಧಿಗಳು ಕದ್ದು ಮುಚ್ಚಿ ನೋಡಿದ್ದಾರೆ. ಮೊದಲಿಗೆ ಇಣುಕಿ ಬಂದ ಮಾನಸ ಅವರು, ಶಿಶಿರ್ ಬಳಿ ಬೆಲ್ಟ್ ಕಟ್ಟಿಕೊಂಡು ಓಡೋ ಥರ ಇದೆ ಎಂದಿದ್ದಾರೆ.
ಇದು ಬಿಗ್ ಬಾಸ್ ಗಮನಕ್ಕೆ ಬಂದಿದ್ದು, ಎಲ್ಲ ಸ್ಪರ್ಧಿಗಳಿಗೆ ಕಠಿಣ ಶಿಕ್ಷೆ ನೀಡಿದ್ದಾರೆ. ಲೈನ್ಸ್ ಡೌನ್ ಆಗಿದ್ದಾಗ, ಅದರಿಂದ ಆಚೆಗೆ ಇಣುಕಿ ನೋಡಬಾರದು ಎಂಬುದು ಈ ಮನೆಯ ತುಂಬ ಮುಖ್ಯವಾದ ನಿಯಮ. ಈಗಷ್ಟೇ ಈ ನಿಯಮ ಉಲ್ಲಂಘಿಸಿದ್ದಾರೆ. ಈ ಕ್ಷಣದಿಂದ ಮನೆಯ ಎಲ್ಲಾ ಸದಸ್ಯರನ್ನು ಬಿಗ್ ಬಾಸ್ ನಾಮಿನೇಟ್ ಮಾಡುತ್ತಿದ್ದಾರೆ’’ ಎಂದು ಹೇಳಿದ್ದಾರೆ. ಇದರಿಂದ ಮನೆಯ ಎಲ್ಲಾ ಸ್ಪರ್ಧಿಗಳು ಅಘಾತಕ್ಕೆ ಒಳಗಾಗಿದ್ದಾರೆ.