Tulasi plant: ತುಳಸಿ ಗಿಡಕ್ಕೆ ನೀರು ಹಾಕುವ ಮುನ್ನ ಈ ವಸ್ತು ಸೇರಿಸಿ: ಮನೆಯಲ್ಲಿ ಸಂಪತ್ತಿನ ಲಕ್ಷ್ಮೀ ನೆಲೆಯಾಗುತ್ತಾಳೆ!

Tulasi plant: ಸನಾತನ ಧರ್ಮದಲ್ಲಿ ತುಳಸಿ ಸಸ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅದರಿಂದಲೇ ತುಳಸಿ ಗಿಡ ಇರುವಲ್ಲಿ ಲಕ್ಷ್ಮಿ ದೇವಿಯು ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ಅದರಲ್ಲೂ ತುಳಸಿ ( tulasi plant) ತುಳಸಿ ಗಿಡಕ್ಕೆ ಪೂಜೆಯನ್ನು ಮಾಡುವಾಗ ಹೇಗೆ ವಿಧಿ – ವಿಧಾನಗಳ ಪ್ರಕಾರ ಪೂಜೆಯನ್ನು ಮಾಡುತ್ತೇವೆಯೋ ಹಾಗೆ ತುಳಸಿಗೆ ನೀರನ್ನು ಅರ್ಪಿಸುವಾಗ ಕೂಡ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

ಹೌದು, ಯಾಕೆಂದರೆ ತುಳಸಿ ಗಿಡಕ್ಕೆ ನೀರು ಹಾಕುವ ಮುನ್ನ ಈ ವಸ್ತು ಸೇರಿಸಿದರೆ ಮನೆಯಲ್ಲಿ ಸಂಪತ್ತಿನ ಲಕ್ಷ್ಮೀ ನೆಲೆಯಾಗುತ್ತಾಳೆ ಎಂಬ ನಂಬಿಕೆ ಇದೆ. ಮುಖ್ಯವಾಗಿ ಪ್ರತಿದಿನ ಬೆಳಿಗ್ಗೆ ಎದ್ದ ನಂತರ ಸ್ನಾನ ಮಾಡಿ ತುಳಸಿಗೆ ನೀರನ್ನು ಅರ್ಪಿಸಲಾಗುತ್ತದೆ. ತುಳಸಿಗೆ ನೀರನ್ನು ಅರ್ಪಿಸುವುದರಿಂದ ದಿನವು ಮಂಗಳಕರವಾಗಿರುತ್ತದೆ ಮತ್ತು ಜೀವನದಲ್ಲಿ ತೊಂದರೆಗಳಿಂದ ಪರಿಹಾರವನ್ನು ನೀಡುತ್ತದೆ ಎಂದು ನಂಬಲಾಗಿದೆ.
ತುಳಸಿಗೆ ನೀರನ್ನು ಅರ್ಪಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ. ಅಷ್ಟೇ ಅಲ್ಲದೆ ಆರ್ಥಿಕ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. ಅಂತೆಯೇ ಪ್ರತಿದಿನ ತುಳಸಿಗೆ ನೀರನ್ನು ಅರ್ಪಿಸುವ ಮೊದಲು, ಆ ನೀರಿಗೆ ಕೊಂಚ ಶ್ರೀಗಂಧವನ್ನು ಬೆರೆಸಬೇಕು. ಹೀಗೆ ಮಾಡಿದರೆ ಆರ್ಥಿಕ ಲಾಭವನ್ನು ತರುತ್ತದೆ. ಅಂದರೆ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯು ಆಶೀರ್ವಾದ ನೀಡುತ್ತಾಳೆ ಎಂದರ್ಥ.