Tirupati Devotees Claim: ತಿರುಪತಿ ಲಡ್ಡು ಪ್ರಕರಣದ ನಂತರ ಇದೀಗ ಪ್ರಸಾದದಲ್ಲಿ ಹುಳುಗಳು ಪತ್ತೆ- ಭಕ್ತರ ಆರೋಪ

Tirupati Devotees Claim: ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಇರುವ ಅಂಶದ ಕುರಿತು ಆರೋಪದ ಬೆನ್ನಹಿಂದೆಯೇ ಇದೀಗ ಇನ್ನೊಂದು ಆರೋಪ ಕೇಳಿ ಬಂದಿದೆ. ತಿರುಪತಿಯ ಪ್ರಸಾದದಲ್ಲಿ ಹುಳುಗಳು ದೊರಕಿವೆ ಎಂದು ಭಕ್ತರೊಬ್ಬರು ಆರೋಪ ಮಾಡಿದ್ದಾರೆ. ಆದರೆ ತಿರುಮಲ ತಿರುಪತಿ ದೇವಾಸ್ಥಾನಮ್‌ (ಟಿಟಿಡಿ) ಈ ಆರೋಪವನ್ನು ತಳ್ಳಿ ಹಾಕಿದ್ದು, ಇದು ಸ್ವೀಕಾರಾರ್ಹವಲ್ಲ ಮತ್ತು ಟಿಟಿಡಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಭಕ್ತರೊಬ್ಬರು ಹೇಳಿದ್ದಾರೆ.

ತಿಮ್ಮಪ್ಪನ ದರ್ಶನಕ್ಕೆಂದು ನಾನು ವಾರಂಗಲ್‌ನಿಂದ ಹೋಗಿದ್ದು, ಮೊಸರನ್ನ ಊಟ ಮಾಡುವ ಸಮಯದಲ್ಲಿ ಊಟದಲ್ಲಿ ಹುಳು ಸಿಕ್ಕಿದ್ದು, ಈ ವಿಚಾರವನ್ನು ಸಿಬ್ಬಂದಿಗೆ ತಿಳಿಸಿದೆ. ಆದರೆ ಅವರು ಇದು ಕೆಲವೊಮ್ಮೆ ಸಂಭವಿಸುತ್ತದೆ, ಸರಕಾರ ಬದಲಾದರೂ ಈ ಸಮಸ್ಯೆಗಳು ಹಾಗೆಯೇ ಉಳಿದಿವೆ ಎಂದು ಹೇಳಿರುವುದಾಗಿ ಸಿಬ್ಬಂದಿಯೊಬ್ಬರು ಹೇಳಿದ್ದರು.

ಊಟ ಮಾಡುವಾಗ ಸುಮಾರು 1.30 ರಂದು ಈ ಘಟನೆ ನಡೆದಿದೆ ಎಂದು ಭಕ್ತರು ಹೇಳಿದ್ದು, ಜೊತೆಗೆ ದೇವಾಲಯದ ಸಿಬ್ಬಂದಿ ತಮಗೆ ನಿಂದಿಸಲು ಮತ್ತು ಬೆದರಿಸಲು ಪ್ರಯತ್ನಿಸಿದರು ಎಂದು ಭಕ್ತರು ಆರೋಪ ಮಾಡಿದ್ದಾರೆ.

2 Comments
  1. Kaliteli takipçi says

    Kaliteli takipçi Google SEO çalışmaları sayesinde marka bilinirliğimiz arttı. http://royalelektrik.com/esenyurt-elektrikci/

  2. qltpelzrx says

    Jennifer lopez. San pedro. Ithaca college. Mackinac island. Altruism. Maki. https://djoker2.g-u.su Джокер 2024

Leave A Reply

Your email address will not be published.