BSNL: BSNL ನಲ್ಲಿ ಅತೀ ಕಡಿಮೆ ಬೆಲೆಗೆ ತಿಂಗಳಿಗೆ 3300 GB ಡೇಟಾ ಲಭ್ಯ!

BSNL: ಇತ್ತೀಚಿಗೆ ಬಿಎಸ್‌ಎನ್ಎಲ್ ರಿಚಾರ್ಜ್ ಆಫರ್ ಹವಾ ಭಾರಿ ಸದ್ದು ಮಾಡುತ್ತಿದ್ದು, ಜನರ ಮನಸು ಗೆಲ್ಲುವಲ್ಲಿ ಯಶಸ್ವಿ ಆಗಿದೆ. ಯಾಕೆಂದರೆ ಬಿಎಸ್ಎನ್‌ಎಲ್ ಹೊಸ ಆಫರ್‌ಗಳನ್ನು ನೀಡುವುದರ ಜೊತೆಗೆ ಹೈ ಸ್ಪೀಡ್ ಇಂಟರ್‌ನೆಟ್ ಕನೆಕ್ಷನ್ ನೀಡಲು ಬಿಎಸ್ಎನ್‌ಎಲ್ ಏರ್ ಫೈಬರ್ ಮುಂದಾಗಿದ್ದು, ನಾಲ್ಕು ಪ್ಲಾನ್‌ಗಳನ್ನು ಸಿದ್ದಪಡಿಸಿದೆ.

ಹೌದು, ಬಿಎಸ್‌ಎನ್ಎಲ್ ಏರ್‌ಫೈಬರ್ ಸರ್ವಿಸ್ ಭಾರತದ ಎಲ್ಲಾ ಪ್ರದೇಶಗಳಲ್ಲಿಯೂ ಲಭ್ಯವಿದೆ. ಹೈ ಕನೆಕ್ಟಿವಿಟಿ ಜೊತೆ ಅತ್ಯಧಿಕ ಡೇಟಾ ಗ್ರಾಹಕರಿಗೆ ನೀಡಲಾಗುತ್ತಿದೆ. ಸದ್ಯ ರೂ.499, ರೂ.699 ಮತ್ತು ರೂ.899 ಎಂಬ ಮೂರು ಬಿಎಸ್‌ಎನ್ಎಲ್ ಏರ್ ಫೈಬರ್ ಸರ್ವಿಸ್ ಪ್ಲಾನ್‌ಗಳು ಈ ಕೆಳಗಿನಂತಿವೆ .

BSNL AirFibre Basic plan

499 ರೂಪಾಯಿಯ ಬೇಸಿಕ್ ಪ್ಲಾನ್‌ನಲ್ಲಿ ಗ್ರಾಹಕರಿಗೆ 30 Mbps ಸ್ಪೀಡ್‌ನಲ್ಲಿ 3,300GB ಡೇಟಾ ಸಿಗುತ್ತದೆ. ಡೇಟಾ ಲಿಮಿಟ್ ಮುಕ್ತಾಯವಾದ ಬಳಿಕ ಸ್ಪೀಡ್ 2 Mbps ಆಗುತ್ತದೆ. ಈ ಬೇಸಿಕ್ ಪ್ಲಾನ್ ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಇದೇ ರೀಚಾರ್ಜ್ ಪ್ಲಾನ್‌ನಲ್ಲಿ ರಿಜಿಸ್ಟ್ ಸಂಖ್ಯೆಗೆ ಅನ್‌ಲಿಮಿಟೆಡ್ ಕಾಲಿಂಗ್ ಸೌಲಭ್ಯ ಸಿಗುತ್ತದೆ.

BSNL AirFibre Basic Plus plan

ಬಿಎಸ್ಎನ್ಎಲ್ ಏರ್‌ಫೈಬರ್ ಸರ್ವಿಸ್‌ ನ 699 ರೂಪಾಯಿ ಪ್ಲಾನ್‌ನಲ್ಲಿ ಗ್ರಾಹಕರಿಗೆ 40 Mbps ವೇಗದಲ್ಲಿ 3,300GB ಡೇಟಾ ಸಿಗಲಿದೆ. ಒಂದು ವೇಳೆ ಡೇಟಾ ಲಿಮಿಟ್ ಮುಕ್ತಾಯವಾಗುತ್ತಿದ್ದಂತೆ ಸ್ಪೀಡ್ 4 Mbps ಆಗುತ್ತದೆ. ಈ ಪ್ಲಾನ್‌ನಲ್ಲಿ ರಿಜಿಸ್ಟರ್ ಸಂಖ್ಯೆಗೆ ಅನ್‌ಲಿಮಿಟೆಡ್ ಕಾಲಿಂಗ್ ಆಫರ್ ಸಹ ನೀಡಲಾಗುತ್ತದೆ.

BSNL AirFibre Basic Value plan

ಬೇಸಿಕ್ ವ್ಯಾಲ್ಯೂ ಪ್ಲಾನ್ ಬೆಲೆ 899 ರೂಪಾಯಿ ಆಗಿದೆ. ಗ್ರಾಹಕರಿಗೆ 50 Mbps ವೇಗದಲ್ಲಿ 3,300GB ಡೇಟಾ ಸಿಗಲಿದೆ. ಡೇಟಾ ಲಿಮಿಟ್ ಮುಕ್ತಾಯವಾಗುತ್ತಿದ್ದಂತೆ ಸ್ಪೀಡ್ 6 Mbps ಆಗುತ್ತದೆ. ಈ ಪ್ಲಾನ್‌ನಲ್ಲಿ ರಿಜಿಸ್ಟರ್ ಸಂಖ್ಯೆಗೆ ಅನ್‌ಲಿಮಿಟೆಡ್ ಕಾಲಿಂಗ್ ಆಫರ್ ಸಹ ನೀಡಲಾಗುತ್ತದೆ.

ಬಿಎಸ್‌ಎನ್ಎಲ್ ಏರ್ ಫೈಬರ್ ಬುಕ್ ಬುಕ್ ಮಾಡೋ ವಿಧಾನ ಇಲ್ಲಿದೆ

1: ಬಿಎಸ್‌ಎನ್ಎಲ್ ಏರ್ ಫೈಬರ್ ಬುಕ್ ಮಾಡಿಕೊಳ್ಳಲು ಗೂಗಲ್ ನಲ್ಲಿ “book my fibre,” ಸರ್ಚ್ ಮಾಡಬೇಕು. ಆನಂತರ ಸಿಗುವ https://bookmyfiber.bsnl.co.in/. ಲಿಂಕ್ ಮೇಲೆ ಕ್ಲಿಕ್ ಮಾಡಿ.

2: ನಂತರ ಅಲ್ಲಿ ಕೇಳಲಾಗುವ ಮಾಹಿತಿಯನ್ನು ಎಂಟ್ರಿ ಮಾಡಬೇಕು.

3: ಅಲ್ಲಿ ನಿಮಗೆ ಬೇಕಾದ ಪ್ಲಾನ್ ಆಯ್ಕೆ ಮಾಡಿಕೊಂಡು ಅಡ್ರೆಸ್ ನಮೂದಿಸಬೇಕು. ನಂತರ ಅಲ್ಲಿ ಕೇಳುವ ಮಾಹಿತಿಯನ್ನು ನಮೂದಿಸಿದ್ರೆ ಬಿಎಸ್ಎನ್‌ಎಲ್ ಏರ್‌ಫೈಬರ್ ಸೇವೆ ಲಭ್ಯವಾಗುತ್ತೆ.

Leave A Reply

Your email address will not be published.