Alcohol: ಮದ್ಯಪಾನ ಮಾಡೋ ಮುನ್ನ ಈ ಮಾಹಿತಿ ತಿಳಿಯಿರಿ: ಸಮಯ ಮೀರಿದ ಮೇಲೆ ಪಶ್ಚಾತಾಪ ಪಡೋದು ತಪ್ಪುತ್ತೆ?!

Share the Article

 

Alcohol: ಮದ್ಯ ಪ್ರಿಯರಿಗೆ ಶಾಕಿಂಗ್ ಮಾಹಿತಿ ಇಲ್ಲಿದೆ. ಇದನ್ನು ತಿಳಿದರೆ ನೀವು ಖಂಡಿತಾ ಇನ್ಮುಂದೆ ಮದ್ಯಪಾನ ಮಾಡಲ್ಲ. ಹೌದು, ಅಮೇರಿಕನ್ ಅಸೋಸಿಯೇಷನ್ ಆಫ್ ಕ್ಯಾನ್ಸರ್ ರಿಸರ್ಚ್ ವರದಿಯ ಪ್ರಕಾರ, ಆಲೋಹಾಲ್ ಸೇವನೆಗೆ ಸಂಬಂಧಿಸಿದ ಆರು ರೀತಿಯ ಕ್ಯಾನ್ಸ‌ರ್ ಗಳಿವೆ. ಇದು ತಲೆ, ಕುತ್ತಿಗೆ, ಅನ್ನನಾಳ, ಸ್ತನ, ಕೊಲೊರೆಕ್ಟಲ್, ಯಕೃತ್ತು ಮತ್ತು ಹೊಟ್ಟೆಯ ಕ್ಯಾನ್ಸ‌ರ್ ನ್ನು ತರುತ್ತದೆ ಎಂದು ತಿಳಿದು ಬಂದಿದೆ.

ಈಗಾಗಲೇ ಅಮೆರಿಕದಲ್ಲಿ ಶೇ.5.4ರಷ್ಟು ಕ್ಯಾನ್ಸರ್ ಗಳು ಆಲ್ಕೋಹಾಲ್ (Alcohol) ಸೇವನೆಯಿಂದ ಉಂಟಾಗುತ್ತದೆ ಎಂದು ತಿಳಿದು ಬಂದಿದೆ. ಮುಖ್ಯವಾಗಿ ಆಲ್ಕೋಹಾಲ್ ಸೇವನೆಯಿಂದ ಡಿಎನ್ ಎಗೆ ಹಾನಿಯಾಗುತ್ತದೆ. ಇದುಪೋಷಕಾಂಶಗಳನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಮತ್ತು ಹಾರ್ಮೋನುಗಳ ಸಮತೋಲನವನ್ನು ಬದಲಾಯಿಸುತ್ತೆ.

ಇನ್ನು ಪ್ರೌಢಾವಸ್ಥೆಯಲ್ಲಿ ಮದ್ಯಪಾನ ಮಾಡುವುದರಿಂದ ವೃದ್ದಾಪ್ಯದಲ್ಲಿ ಕ್ಯಾನ್ಸರ್ ಬರುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವರದಿಯಲ್ಲಿ ತಿಳಿದು ಬಂದಿದೆ. ಇದರ ಹೊರತು ಒಂದು ವೇಳೆ ಗರ್ಭಿಣಿಯಾಗಿರುವಾಗ ಕುಡಿಯುವ ಮಹಿಳೆಯರು ನವಜಾತ ಶಿಶುಗಳಲ್ಲಿ ಅಭಿವೃದ್ಧಿಪಡಿಸುವ ಲ್ಯುಕೇಮಿಯಾ ದಿಂದ ಸಮಸ್ಯೆ ತರುತ್ತದೆ.

ಒಟ್ಟಿನಲ್ಲಿ ಅಮೇರಿಕನ್ ಅಸೋಸಿಯೇಷನ್ ಆಫ್ ಕ್ಯಾನ್ಸರ್ ರಿಸರ್ಚ್ ವರದಿಯ ಪ್ರಕಾರ, ಆರು ರೀತಿಯ ಕ್ಯಾನ್ಸರ್ ಗಳು ತಲೆ, ಕುತ್ತಿಗೆ, ಅನ್ನನಾಳ, ಸ್ತನ, ಕೊಲೊರೆಕ್ಟಲ್, ಯಕೃತ್ತು ಮತ್ತು ಹೊಟ್ಟೆಯ ಭಾಗವನ್ನು ಆವರಿಸುತ್ತೆ ಎಂದು ತಿಳಿದು ಬಂದಿದೆ.

Leave A Reply