Gas Stove : ಮನೆಯ ಗ್ಯಾಸ್ ಸ್ಟವ್ ನಲ್ಲಿ ಎಷ್ಟು ಒಲೆ ಇರಬೇಕು? ಶಾಸ್ತ್ರ ಹೇಳೋದೇನು? 2, 3 ಒಲೆ ಇರೋರಂತೂ ತಪ್ಪದೇ ನೋಡಿ
Gas Stove: ಇಂದು ಕಟ್ಟಿಗೆಯಿಂದ ಉರಿಸುವ ಒಲೆಗಳ ಸ್ಥಾನವನ್ನು ಎಲ್ಲರ ಮನೆಯಲ್ಲೂ ಗ್ಯಾಸ್ ಸ್ಟವ್(Gas stove) ಆವರಿಸಿಕೊಂಡುಬಿಟ್ಟಿವೆ. ಎಲ್ಲೋ ಕೆಲವೊಬ್ಬರ ಮನೆಯಲ್ಲಿ, ಹಳ್ಳಿಗಳಲ್ಲಿ ಎರಡೂ ರೀತಿ ಒಲೆ ಬಳಸುವುದನ್ನು ನೋಡಬಹುದು. ಆದರೆ ಹೆಚ್ಚು ಇಂದು ಬಳಕೆಯಾಗುವುದು ಗ್ಯಾಸ್ ಸ್ಟವ್ ಗಳೆ. ಹಾಗಾದರೆ ಈ ಸ್ಟವ್ ಗಳಲ್ಲಿ ಎಷ್ಟು ಒಲೆಗಳಿರಬೇಕು? ಎಷ್ಟಿದ್ದರೆ ಶ್ರೇಷ್ಠ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
ಗ್ಯಾಸ್ ಸ್ಟವ್ ಗಳಲ್ಲಿ ಮೊದಲು 2 ಒಲೆಗಳಿದ್ದವು. ಆರಂಭದಲ್ಲಿ ಹೆಚ್ಚಿನ ಮನೆಗಳಲ್ಲಿ ಇದೇ ಸ್ಟವ್ ಬಳಕೆಯಾಗುತ್ತಿತ್ತು. ಇಂದೂ ಕೂಡ ಅನೇಕ ಮನೆಯಲ್ಲಿ 2 ಒಲೆಗಳಿರುವ ಸ್ಟವ್ ಬಳಕೆಯಾಗುತ್ತಿವೆ. ನಂತರದಲ್ಲಿ 3 ಒಲೆಗಳಿರುವ ಸ್ಟವ್ ಬಳಕೆಗೆ ಬಂದಿತು. ಹಲವರ ಮನೆಯಲ್ಲಿ ಈ ರೀತಿ ಸ್ಟವ್ ಕಾಣಬಹುದು. ಆದರೆ ನಾವು ಮನೆಗಳಲ್ಲಿ ಶಾಸ್ತ್ರದ ಪ್ರಕಾರ 4 ಒಲೆಗಳ ಸ್ಟವ್ ಬಳಸಬೇಕು.
ಹೌದು, ನಮ್ಮ ಶಾಸ್ತ್ರವು ಮನೆಯಲ್ಲಿ 4 ಒಲೆಗಳ ಸ್ಟವ್ ಬಳಸಿದರೆ ಶ್ರೇಷ್ಠವೆಂದು ಹೇಳುತ್ತದೆ. ಯಾಕೆ 4 ಒಲೆಗಳೇ ಇರಬೇಕು ಎಂದು ನೀವು ಕೇಳಿದರೆ 4 ಎಂಬುದು ಪೂರ್ಣವಾದ ಸಂಕೇತವಾಗಿದೆ. ಅದು ಸಂಪತ್ತಿನ ಸಂಕೇತವಾಗಿದೆ. ಹೀಗಾಗಿ 4 ಒಲೆಗಳನ್ನು ಬಳಸುವ ಕುಟುಂಬವು ಅಭಿವೃದ್ಧಿಯನ್ನು, ಸುಖ, ಶಾಂತಿ, ನೆಮ್ಮದಿಯನ್ನು ಕಾಣುತ್ತದೆ.