Deposit scheme: ಎಸ್‌ಬಿಐ ಗ್ರಾಹಕರಿಗೆ ಬಂಪರ್ ಸ್ಕೀಮ್: ಪ್ರತಿ ತಿಂಗಳು ಸಿಗುತ್ತೆ ಕೈ ತುಂಬಾ ಹಣ!

Deposit scheme: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಬಂಪರ್ ಸ್ಕೀಮ್ (Deposit scheme) ಒಂದನ್ನು ಪರಿಚಯ ಮಾಡಿದೆ. ಹೌದು, ಈ ಬ್ಯಾಂಕ್ ನಲ್ಲಿ ಎಸ್‌ಬಿಐ ಟರ್ಮ್ ಡೆಪಾಸಿಟ್ ಹೊರತಾಗಿಯೂ ಕೆಲವು ಸ್ಪೆಷಲ್ ಡೆಪಾಸಿಟ್ ಸ್ಕೀಂಗಳನ್ನು ಪರಿಚಯಿಸಿದೆ. ಈ ಸ್ಪೆಷಲ್ ಸ್ಕೀಂಗಳಲ್ಲಿ ಹಣ ಡೆಪಾಸಿಟ್ ಮಾಡೋದರಿಂದ ಉತ್ತಮ ಬಡ್ಡಿ ಗ್ರಾಹಕರಿಗೆ ಸಿಗುತ್ತದೆ. ಇಲ್ಲಿ ಹಣ ಡೆಪಾಸಿಟ್ ಮಾಡಿದರೆ ಪ್ರತಿ ತಿಂಗಳು ಕೈ ತುಂಬಾ ಹಣ ನಿಮ್ಮ ಖಾತೆಗೆ ಜಮೆ ಆಗುತ್ತಿರುತ್ತದೆ.

ಈ ಹೊಸ ಸ್ಕೀಮ್ ಯಾವುದೆಂದರೆ, ಅದುವೇ ಎಸ್‌ಬಿಐ ಆನ್ಯುಟಿ ಡೆಪಾಸಿಟ್ ಸ್ಕೀಂ (SBI annuity deposit scheme). ಹೌದು, ಆನ್ಯುಟಿ ಡೆಪಾಸಿಟ್ ಎಂಬ ಹೊಸ ಸ್ಕೀಂನಲ್ಲಿ ಒಮ್ಮೆ ಹಣ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ನಿಗಧಿತ ಮೊತ್ತ ನಿಮ್ಮ ಖಾತೆಗೆ ಬೀಳುತ್ತದೆ. ಹಿರಿಯ ನಾಗರೀಕರು ತಮ್ಮ ನಿವೃತ್ತಿ ಹಣವನ್ನು ಇಲ್ಲಿ ಡೆಪಾಸಿಟಿ ಮಾಡಿ ಮಾಸಿಕವಾಗಿ ಬಡ್ಡಿಯನ್ನು ಪಿಂಚಣಿ ಪಡೆಯುತ್ತಾರೆ. ಒಂದು ವೇಳೆ ಬಡ್ಡಿ ಮೊತ್ತ ಖಾತೆಯಲ್ಲಿಯೇ ಉಳಿದರೆ ಕಾಂಪೌಂಡಿಂಗ್ ಲೆಕ್ಕ ಹಾಕಲಾಗುತ್ತದೆ. ಅದಲ್ಲದೆ ಆನ್ಯುಟಿ ಡೆಪಾಸಿಟ್ ಸ್ಕೀಂ ಅಡಿಯಲ್ಲಿ ಗ್ರಾಹಕರಿಗೆ ಯೂನಿವರ್ಸಲ್ ಪಾಸ್‌ಬುಕ್ ನೀಡಲಾಗುತ್ತದೆ. ಈ ಪಾಸ್‌ಬುಕ್ ಸಹಾಯದಿಂದ ಗ್ರಾಹಕರು ಬೇರೆ ಶಾಖೆಗಳಲ್ಲಿಯೂ ಸೇವೆಯನ್ನು ಪಡೆದುಕೊಳ್ಳಬಹುದು.
ಇನ್ನು ನೀವು ಡೆಪಾಸಿಟ್ ಮಾಡಿದ ಮೊತ್ತದ ಮೇಲೆ ಬಡ್ಡಿಯನ್ನು ನೀಡಲಾಗುತ್ತದೆ. ಈ ಎಸ್‌ಬಿಐ ಆನ್ಯುಟಿ ಡೆಪಾಸಿಟ್ ಸ್ಕೀಂ 36, 60, 84 ಮತ್ತು 120 ತಿಂಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಗ್ರಾಹಕರು ತಮಗೆ ಬೇಕಾದ ಅವಧಿಯವರೆಗೆ ಹಣ ಡೆಪಾಸಿಟ್ ಮಾಡಬಹುದಾಗಿದೆ. ಈ ಯೋಜನೆಯಲ್ಲಿ ಕನಿಷ್ಠ 1,000 ರೂ. ಡೆಪಾಸಿಟ್ ಮಾಡಬೇಕಾಗುತ್ತದೆ. ಹಣ ಡೆಪಾಸಿಟ್‌ಗೆ ಯಾವುದೇ ಗರಿಷ್ಠ ಮಿತಿ ಇಲ್ಲ. ಎಸ್‌ಬಿಐನ ಎಲ್ಲಾ ಶಾಖೆಗಳಲ್ಲಿ ಈ ಸ್ಕೀಂ ಲಭ್ಯವಿದೆ.
ಮುಖ್ಯವಾಗಿ ಹಣ ಡೆಪಾಸಿಟ್ ಮಾಡಿದ ಮುಂದಿನ ತಿಂಗಳಿನಿಂದಲೇ ಗ್ರಾಹಕರಿಗೆ ಬಡ್ಡಿ ಸಿಗುತ್ತದೆ. ತಿಂಗಳ 1ನೇ ತಾರೀಖಿನಂದು ಯಾವುದೇ ಅಡೆತಡೆಯಿಲ್ಲದೇ ಪ್ರತಿ ತಿಂಗಳು ಟಿಡಿಎಸ್ ಕಡಿತಗೊಳಿಸಿ ಸೇವಿಂಗ್ ಅಥವಾ ಕರೆಂಟ್ ಅಕೌಂಟ್‌ಗೆ ಬಡ್ಡಿಯ ಮೊತ್ತವನ್ನು ಜಮೆ ಮಾಡಲಾಗುತ್ತದೆ. ಇಲ್ಲಿ ಸಾಮಾನ್ಯ ಗ್ರಾಹಕರು ಮತ್ತು ಹಿರಿಯ ನಾಗರೀಕರಿಗೆ ಪ್ರತ್ಯೇಕ ಬಡ್ಡಿದರಗಳನ್ನು ನೀಡಲಗುತ್ತೆ.
ಇನ್ನು ಆನ್ಯುಟಿ ಡೆಪಾಸಿಟ್ ಸ್ಕೀಂ ಗ್ರಾಹಕರಿಗೆ ಅವಶ್ಯಕೆ ಇದ್ರೆ ನಿಮ್ಮ ಮೊತ್ತದ ಶೇ.75ರಷ್ಟು ಹಣವನ್ನು ಓವರ್ ಡ್ರಾಫ್ಟ್ ಅಥವಾ ಲೋನ್ ನೀಡುತ್ತದೆ. ಠೇವಣಿದಾರರು ಬಯಸಿದ್ರೆ ಅವಧಿಗೂ ಮುನ್ನವೇ ಸ್ಕೀಂನಿಂದ ಹೊರಬರಬಹುದು. ಈ ಯೋಜನೆ ಅಡಿಯಲ್ಲಿ 15 ಲಕ್ಷ ರೂ.ವರೆಗಿನ ಠೇವಣಿಗಳಿಗೂ ಪೂರ್ವ ಪಾವತಿ ಮಾಡಬಹುದು. ಎಫ್‌ಡಿಯಲ್ಲಿ ವಿಧಿಸಲಾಗುವ ಅದೇ ದರದಲ್ಲಿ ಪ್ರೀ-ಮೆಚ್ಯೂರ್ ಪೆನಾಲ್ಟಿಯನ್ನು ಸಹ ಪಾವತಿಸಬೇಕಾಗುತ್ತದೆ. ಇನ್ನು ಬಡ್ಡಿದರಗಳು ನೀವು ಆಯ್ಕೆ ಮಾಡಿಕೊಳ್ಳುವ ಅವಧಿ ಮೇಲೆ ನಿರ್ಧರಿತವಾಗಲಿದೆ.