Crop survey checking: ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ಆಗಿದೆಯೇ ಎಂದು ಈ ರೀತಿ ಚೆಕ್ ಮಾಡಿ!

Share the Article

Crop survey checking: ರೈತರು ಬೆಳೆದ ಬೆಳೆಗಳ ಸಮೀಕ್ಷೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಮುಂಗಾರು ಹಂಗಾಮಿನ 2024 ರ ರೈತರ ಬೆಳೆ ಸಮೀಕ್ಷೆ ಆ್ಯಪ್ ಮುಕ್ತಾಯವಾಗಿದ್ದು, ಖಾಸಗಿ ನಿವಾಸಿಗಳ ಬೆಳೆ ಸಮೀಕ್ಷೆ ಸಹ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ.

ಹೌದು, 2024ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಆದ್ದರಿಂದ ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ಮಾಡಲಾಗಿದ್ದರೇ ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ಆಗಿದೆಯೇ ಇಲ್ಲವೇ ಎಂದು ಹೀಗೆ ಚೆಕ್ ಮಾಡಬಹುದು.

Crop survey checking-ನಿಮ್ಮದು ಬೆಳೆ ಸಮೀಕ್ಷೆ ಆಗಿದೆಯೇ ಇಲ್ಲವೇ ಎಂದು ನೋಡುವ ವಿಧಾನ ಇಲ್ಲಿದೆ.

1)ಮೊದಲಿಗೆ ಈ ಲಿಂಕ್ ಮೇಲೆ (bele darshak app) https://play.google.com/store/apps/details?id=com.crop.offcskharif_2021&hl=en_IN&pli=1 ಕ್ಲಿಕ್ ಮಾಡಿ bele darshak app ನ್ನು ಡೌನ್ಲೋಡ್‌ ಮಾಡಿಕೊಳ್ಳಿ.

2)ನಂತರ ನಿಮಗೆ ಅದರಲ್ಲಿ ವರ್ಷ, ಋತು, ಜಿಲ್ಲೆ, ತಾಲೂಕು, ಹೋಬಳಿ,ಗ್ರಾಮ ಕೇಳುತ್ತದೆ ಅದನ್ನೂ ಹಾಕಿ ಮುಂದುವರೆಯಿರಿ.

3)ನಂತರ ನಿಮ್ಮ ಸರ್ವೆ ನಂಬರ್‌ ಹಾಕಿ ವಿವರ ಪಡೆಯಿರಿ ಮೇಲೆ ಕ್ಲಿಕ್‌ ಮಾಡಿ.

4) ನಂತರ ನಿಮಗೆ ನಿಮ್ಮ ಸರ್ವೇ ನಂಬರಿನ ಹಿಸ್ಸಾ ನಂಬರ್ ಬರುತ್ತವೆ ಅದನ್ನು ಆಯ್ಕೆ ಮಾಡಿಕೊಳ್ಳಿ.

5)ಇದಾದ ಮೇಲೆ ಜಮೀನಿನ ಯಜಮಾನ ರ ವಿವರ ಆಯ್ಕೆ ಮಾಡಿ ಮುಂದರೆವರೆಯಿರಿ.

6)ನಂತರ ಸಮೀಕ್ಷೆ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್‌ ಮಾಡಿ ಮುಂದೆವರೆಯಿರಿ. ಕ್ಲಿಕ್‌ ಮಾಡಿದ ಮೇಲೆ ನಿಮಗೆ ಅಲ್ಲಿ ಸಮೀಕ್ಷೆಗಾರರ ಹೆಸರು, ಮೊಬೈಲ್‌ ಸಂಖ್ಯೆ, ಸಮೀಕ್ಷೆಯ ದಿನಾಂಕ ಕಾಣುತ್ತದೆ ಅದರ ಕೆಳಗಡೆ ಇರುವ ಮೊಬೈಲ್‌ ನಂಬರ್‌ ಮೇಲೆ ಕ್ಲಿಕ್‌ ಮಾಡಿ ಆಗ ನಿಮಗೆ ತಿಳಿ ಹಸಿರು ಬಣ್ಣದ ಬದಲಾವಣೆ ಕಾಣುತ್ತದೆ.

7)ನಂತರ ನಿಮಗೆ ಅದರ ಕೆಳಗಡೆ ಕಾಣುವ ಬೆಳೆ ವಿವರ ವೀಕ್ಷಿಸಿ ಮೇಲೆ ಕ್ಲಿಕ್‌ ಮಾಡಿ.

8)ಆಗ ನಿಮಗೆ ರೈತನ ಹೆಸರು, ಸರ್ವೇ ನಂಬರ್‌, ಮೊಬೈಲ್‌ ನಂ, ಅದರ ಕೆಳಗಡೆ ಬೆಳೆ ಹೆಸರು , ವಿಸ್ತೀರ್ಣ, ವರ್ಗ, ನೀರಾವರಿ ವಿಧ, ಷರ್‌, ಫೋಟೋ ವೀಕ್ಷಿಸಿ, ಋತು ಎಂಬ ಆಯ್ಕೆಗಳು ಕಾಣಿಸುತ್ತವೆ.

9)ಅಲ್ಲಿ ನಿಮಗೆ ಕಾಣುವ ಬೆಳೆಯ ಹೆಸರು ಏನು ನಮೂದಾಗಿದೆ ಎಂದು ತಿಳಿಯುತ್ತದೆ. ಹಾಗೂ ನಿಮ್ಮ ಬೆಳೆಯ ಪೋಟೋ ಸಹ ತಾವು ಅಲ್ಲಿ ನೋಡಬಹುದು.

10)ನೀವು ದಾಖಲಿಸಿದ ಬೆಳೆಯಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದರೆ ನೀವು ಅಲ್ಲೇ ಕೆಳಗಡೆ ಇರುವ ಆಕ್ಷೇಪಣೆ ಸಲ್ಲಿಸಿ ಇರುವ ಆಯ್ಕೆಯನ್ನು ಆಯ್ಕೆ ಮಾಡಿ ಆಕ್ಷೇಪಣೆ ಸಲ್ಲಿಸಬಹುದು.

ಒಂದು ವೇಳೆ ಬೆಳೆ ಸಮೀಕ್ಷೆ ಮಾಡದೇ ಇದ್ದಲ್ಲಿ ಈ ಕೆಳಗಿನ ಯಾವುದೇ ಸೌಲಭ್ಯ ರೈತರಿಗೆ ದೊರೆಯುವುದಿಲ್ಲ.

1)ಬೆಳೆ ಹಾನಿ ಪರಿಹಾರ ಸಿಗುವುದಿಲ್ಲ .

2)ಬೆಳೆ ವಿಮೆ ಕಟ್ಟಲು ಬರುವುದಿಲ್ಲ.

3)ಕೃಷಿ, ತೋಟಗಾರಿಕೆ ಇಲಾಖೆಯ ಸೌಲಭ್ಯಗಳು ಇರುವಿದಿಲ್ಲ .

4)ಸಹಕಾರಿ ಸಂಘದ ಮತ್ತು ರಾಷ್ಟ್ರೀಕೃತ ಬ್ಯಾಂಕಗಳ ಸಾಲ ಸಿಗುವುದಿಲ್ಲ.

5)ಮಳೆ ಹಾನಿ ಪರಿಹಾರ ಸಿಗುವುದಿಲ್ಲ.

6)ಪ್ರವಾಹ ಮತ್ತು ಬರಗಾಲದ ಪರಿಹಾರ ಸಿಗುವುದಿಲ್ಲ.

7)ಪಹಣಿಗೆ/RTC ಬೆಳೆ ದಾಖಲು ಆಗುವುದಿಲ್ಲ.

8)ಕನಿಷ್ಠ ಬೆಂಬಲ ಬೆಲೆ ದರ ಸಿಗುವುದಿಲ್ಲ.

Leave A Reply