Dakshina Kannada (ಪುತ್ತಿಲ): ಹೊಸ ಮನೆಗೆಂದು ತಂದಿದ್ದ ದಾರಂದ ಬಿದ್ದು ಬಾಲಕಿ ಸಾವು

Share the Article

Dakshina Kannada (ಪುತ್ತಿಲ): ಹೊಸಮನೆಗೆಂದು ತಂದಿದ್ದ ದಾರಂದವೊಂದು ಬಿದ್ದು ಬಾಲಕಿಯೋರ್ವಳು ಮೃತಪಟ್ಟ ಘಟನೆಯೊಂದು ಪುತ್ತಿಲ ಗ್ರಾಮದ ಕುಂಡಡ್ಕ ಸಮೀಪದ ಕೇರ್ಯಾ ಕೊನಲೆಯಲ್ಲಿ ನಡೆದಿದೆ.

ಅಲ್ಪಿಯಾ (6) ಎಂಬುವವಳೇ ಮೃತ ಬಾಲಕಿ. ಈಕೆ ಕೊನಲೆ ನಿವಾಸಿ ಹಾರೀಸ್‌ ಮುಸ್ಲಿಯಾರ್‌ ಮತ್ತು ಅಸ್ಮಾ ದಂಪತಿಯ ಪುತ್ರಿ. ಈಕೆ ಕೇರ್ಯಾ ಸರಕಾರಿ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದಳು.

ಬಾಲಕಿಯ ತಂದೆ ನೂತನ ಮನೆಯೊಂದನ್ನು ಕುಂಡಡ್ಕದಲ್ಲಿ ಕಟ್ಟಲಾಗುತ್ತಿದ್ದು, ಈ ಮನೆಯ ಮುಖ್ಯ ದ್ವಾರಕ್ಕೆಂದು ದಾರಂದವನ್ನು ಜೋಡಿಸಲಿತ್ತು. ಹಾಗಾಗಿ ಮನೆಯ ಪಕ್ಕದಲ್ಲಿ ದಾರಂದವನ್ನು ಇಟ್ಟಿದ್ದರು. ಆದರೆ ಬಾಲಕಿ ಆಟವಾಡುತ್ತಿದ್ದ ಸಂದರ್ಭದಲ್ಲಿ ದಾರಂದ ಆಕೆಯ ತಲೆಯ ಮೇಲೆ ಬಿದ್ದಿದ್ದು, ಗಂಭೀರ ಗಾಯವಾಗಿತ್ತು. ಕೂಡಲೇ ಬಾಲಕಿಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಆಕೆ ಮೃತ ಹೊಂದಿರುವುದಾಗಿ ತಿಳಿದು ಬಂದಿದೆ.

Leave A Reply