Siddaramaiah: ‘ಮುಡಾ’ ಬೆನ್ನಲ್ಲೇ ಸಿದ್ದರಾಮಯ್ಯನ ಹಳೆಯ ವಿಡಿಯೋ ಲೀಕ್ – ಸಿಎಂ ನೈತಿಕತೆ ಬಗ್ಗೆ ಪ್ರಶ್ನಿಸಿ ರಾಜ್ಯಾದ್ಯಂತ ಜನರ ಆಕ್ರೋಶ !!

Share the Article

CM Siddaramaiah: ಮುಖ್ಯಮಂತ್ರಿಗಳ ಪತ್ನಿ ಪಾರ್ವತಿ(Parvati Siddaramaiah) ಅವರು ಮುಡಾ ಸೈಟ್‌(Muda Site) ಗಳನ್ನು ವಾಪಸ್‌ ಮಾಡಲು ತೀರ್ಮಾನಿಸಿದ್ದಾರೆ. ತನ್ನ ಹೆಂಡತಿ ಪತ್ರ ಬರೆದದ್ದು ತನಗೇ ಗೊತ್ತೇ ಇಲ್ಲ ಎಂಬಂತೆ ಸಿದ್ದರಾಮಯ್ಯ ತಾವೂ ಕೂಡ ಪೋಸ್ಟ್ ಹಾಕಿ, ಹೆಂಡತಿಯ ನಡೆಯನ್ನು ಸ್ವಾಗತಿಸಿ ರಾಜ್ಯದ ಜನರ ಟೀಕೆಗೆ ಗುರಿಯಾಗಿದ್ದರು ಅಲ್ಲದೆ ತಾವು ತಪ್ಪೇ ಮಾಡಿಲ್ಲ ಅನ್ನೋದನ್ನು ಮತ್ತೆ ಮತ್ತೆ ಸಮರ್ಥಿಸಿದ್ದರು. ಈ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅವರ ಪತ್ನಿ ಸೈಟ್ ಹಿಂದಿರುಗಿಸಿದ್ದಕ್ಕೆ ಸಿದ್ದರಾಮಯ್ಯ ಅವರು ಸೈಟ್ ವಾಪಸ್ ಕೊಟ್ರೆ ತಪ್ಪು ಮಾಡಿದ್ದೇವೆ ಎಂದರ್ಥನಾ? ಮನ ನೊಂದು ಹೆಂಡತಿ ಹೀಗೆ ಮಾಡಿದ್ಧಾಳೆ ಎಂದು ಸಮರ್ಥಿಸಿದ್ದರು. ಆದರೆ ಈ ಬೆನ್ನಲ್ಲೇ ಮಾಜಿ ಸಿಎಂ ಯಡಿಯೂರಪ್ಪ ಪ್ರಕರಣದಲ್ಲಿ ಹಿಂದೆ ಸಿದ್ದರಾಮಯ್ಯ ಆಡಿದ್ದ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ಲಾಗುತ್ತಿದ್ದು, ನಿಮ್ಮ ರಾಜೀನಾಮೆ ಯಾವಾಗ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಹೌದು, 2011ರಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಯಡಿಯೂರಪ್ಪ(BS Yadiyurappa) ಅಂದು ಮುಖ್ಯಮಂತ್ರಿಯಾಗಿದ್ದ ಅವರ ವಿರುದ್ಧ ಭೂ ಹಗರಣದ ಆರೋಪ ಕೇಳಿಬಂದಿತ್ತು. ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಯಡಿಯೂರಪ್ಪ ನಿವೇಶನಗಳನ್ನು ವಾಪಸ್‌‍ ಪಡೆಯುವುದಾಗಿ ಹೇಳಿದ್ದರು. ಆಗ ಸಿದ್ದರಾಮಯ್ಯನವರು ಹೇಳಿದ್ದ ಮಾತು ವೈರಲ್ಲಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಚೇರಿಯಲ್ಲಿ ಬಿಡುಗಡೆ ಮಾಡಿ, ಸಿದ್ದರಾಮಯ್ಯ ನವರೇ ನೀವು ಯಾವಾಗ ರಾಜೀನಾಮೆ ಕೊಡುತ್ತೀರಿ ಎಂದು ವಿಡಿಯೋ ಮೂಲಕ ಟಾಂಗ್‌ ನೀಡಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಸಿದ್ದರಾಮಯ್ಯನವರು ಮಕ್ಕಳಿಗೆ ನೀಡಿದ್ದ ನಿವೇಶನವನ್ನು ಯಡಿಯೂರಪ್ಪ ವಾಪಸ್‌‍ ಕೊಡುವುದಾಗಿ ಹೇಳಿದ್ದಾರೆ. ಹಣವನ್ನು ಪಡೆದುಕೊಂಡಿದ್ದಾರೆ. ಅವರು ತಪ್ಪು ಮಾಡಿಲ್ಲ ಎಂದರೆ ನಿವೇಶನವನ್ನು ಏಕೆ ವಾಪಸ್‌‍ ಕೊಡಬೇಕಿತ್ತು. ಇದು ಕಾನೂನು ಬಾಹಿರವಲ್ಲವೇ? ತಪ್ಪು ಮಾಡಿದ್ದರಿಂದಲೇ ಸೈಟ್‌ ವಾಪಸ್‌‍ ಕೊಟ್ಟಿದ್ದಾರೆ ಎಂದರ್ಥವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ ಸರ್ಕಾರ ಸಂವಿಧಾನದ ಚೌಕಟ್ಟಿನ ಒಳಗೆ ಕೆಲಸ ಮಾಡುತ್ತಿದೆಯೋ ಇಲ್ಲವೋ ಎನ್ನುವುದನ್ನು ನೋಡುವ ಉಸ್ತುವಾರಿ ರಾಜ್ಯಪಾಲರಿಗೆ ಇರುತ್ತಿದೆ. ಸರ್ಕಾರ ತಪ್ಪು ಮಾಡಿದರೆ, ಆ ಸರ್ಕಾರವನ್ನು ಎಚ್ಚರಿಸುವ, ಬುದ್ಧಿ ಹೇಳುವಂತಹ ಹಾಗೂ ಕ್ರಮ ತೆಗೆದುಕೊಳ್ಳುವ ಅಧಿಕಾರ ರಾಜ್ಯಪಾಲರಿಗೆ ಇರುತ್ತದೆ. ರಾಜ್ಯಪಾಲರು ಅಧಿಕರವನ್ನು ಚಲಾಯಿಸಿದಾಗ, ಇದು ರಾಜಕೀಯ ಪ್ರೇರಿತ, ದುರುದ್ದೇಶ ಹಾಗೂ ಪ್ರಿಪ್ಲಾನ್ಡ್‌, ವಿರೋಧ ಪಕ್ಷದವರು ಮಾಡಿಸುತ್ತಿದ್ದಾರೆ ಎಂದರೆ ಜನ ನಂಬುವುದಿಲ್ಲ ಎಂದು ಹೇಳಿರುವುದು ಅದರಲ್ಲಿ ದಾಖಲಾಗಿದೆ.

ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯ ಆಡಿರುವ ಮಾತು ವೈರಲ್‌ ಆಗಿ ನೀವು ನಿಮ ಮಾತಿಗೆ ಬದ್ಧರಾಗಿದ್ದರೆ ಮೊದಲು ಗೌರವಯುತವಾಗಿ ನಿಮ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.

 

Leave A Reply