Karnataka Government : ಈ 14 ಮಾನದಂಡಗಳಲ್ಲಿ ಒಂದರಲ್ಲಾದರೂ ನೀವಿದ್ದರೆ ರದ್ಧಾಗುತ್ತೆ ನಿಮ್ಮ BPL ಕಾರ್ಡ್ !!

Karnataka Government: ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರಿಗೆ ಇದ್ದಕ್ಕಿದ್ದಂತೆ ದೊಡ್ಡ ಆಘಾತ ನೀಡಲು ಮುಂದಾಗಿದೆ. ಆದರೆ ಸರ್ಕಾರದ ಈ ನಿಯಮ BPL ಕಾರ್ಡ್ ಹೊಂದಿರುವ ಎಲ್ಲರಿಗೂ ಶಾಕ್ ನೀಡಲ್ಲ. ಯಾರು BPL ಕಾರ್ಡ್ ಪಡೆಯಲು ಅರ್ಹರಲ್ಲದಿದ್ದರೂ ಯಾರು ಕಾರ್ಡ್ ಹೊಂದಿದ್ದಾರೋ ಅವರಿಗೆ ಮಾತ್ರ ಅಘಾತ ಕಟ್ಟಿಟ್ಟ ಬುತ್ತಿ.

ಸದ್ಯ ರಾಜ್ಯದ 80% ರಷ್ಟು ಜನರ ಬಳಿ ಬಿಪಿಎಲ್ ಕಾರ್ಡ್ (BPL Card) ಇದ್ದು ಕೂಡಲೇ ಅನರ್ಹರನ್ನು ಪತ್ತೆ ಹಚ್ಚಿ ಎಂದು ರಾಜ್ಯ ಸರ್ಕಾರ (Karnataka Government) ಆದೇಶ ಪ್ರಕಟಿಸಿದೆ. ಅಂದಹಾಗೆ ಇದೀಗ 10,97,621 ಬಿಪಿಎಲ್ ಕಾರ್ಡ್ ಹಾಗೂ 10,54,368 ಅಂತ್ಯೋದಯ ಕಾರ್ಡ್‌ಗಳನ್ನು ಅಕ್ರಮವಾಗಿ ಪಡೆದುಕೊಳ್ಳಲಾಗಿದೆ ಅನ್ನೋದು ಇ ಆಡಳಿಕ ಕೇಂದ್ರದಿಂದ ಪಡೆದಿರುವ ಡೇಟಾದಲ್ಲಿ ಬಹಿರಂಗವಾಗಿದೆ. ಮುಂದಿನ 10 ದಿನಗಳಲ್ಲಿ ಬರೋಬ್ಬರಿ 22 ಲಕ್ಷ ಪಡಿತರ ಚೀಟಿಗಳು ರದ್ದಾಗಲಿದೆ. ಇದರ ಜೊತೆಗೆ ಅಕ್ರಮವಾಗಿ ಪಡೆದಿರುವ ಕಾರ್ಡ್‌ಗಳು ಪತ್ತೆಯಾದರೆ ಈ ಕಾರ್ಡ್ ಕೂಡ ರದ್ದಾಗಲಿದೆ. ಹೀಗಾಗಿ 14 ಮಾನದಂಡಗಳನ್ನು ಅಹಾರ ಇಲಾಖೆ ಪಟ್ಟಿ ಮಾಡಿದೆ. ಈ 14 ಮಾನದಂಡಗಳಲ್ಲಿ ಒಂದ್ರಲ್ಲಾದರೂ ನೀವಿದ್ದರೆ ನಿಮ್ಮ BPL ಕಾರ್ಡ್ ರದ್ಧಾಗೋದು ಪಕ್ಕವಾಗಿದೆ.

ಮಾನದಂಡಗಳೇನು?
ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿದಲ್ಲಿ, ಆದಾಯ ತೆರಿಗೆ ಪಾವತಿ ಮಾಡಿದ್ದರೆ, ನಿಗದಿಗಿಂತ ಹೆಚ್ಚು ಜಮೀನು ಹೊಂದಿದ್ದರೆ, ನಗರಗಳಲ್ಲಿ 1000 ಚದರಡಿಯ ಪಕ್ಕಾ ಮನೆ ಇದ್ದಲ್ಲಿ, ಪ್ರತಿ ತಿಂಗಳು 150 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದಲ್ಲಿ, ವೈಟ್ ಬೋರ್ಡ್‌ 4 ಚಕ್ರದ ವಾಹನ ಇದ್ದು ಬಿಪಿಎಲ್‌ ಕಾರ್ಡ್‌ ಮಾಡಿಸಿದವರ ಕಾರ್ಡ್‌ ರದ್ದಾಗಲಿದೆ.

ಅಲ್ಲದೆ 100 ಸಿಸಿ ಮೇಲ್ಪಟ್ಟ ದಿಚಕ್ರ ವಾಹನ, ತೆರಿಗೆ ಪಾವತಿದಾರರು, 7.5 ಏಕರೆ ಭೂಮಿಗಿಂತ ಮೇಲ್ಪಟ್ಟವರು, ಕಾಲೇಜು ನೌಕರರು, ಗುತ್ತಿಗೆದಾರರು, ಕೈಗಾರಿಕೋದ್ಯಮ, ಉದ್ಯಮ, ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಹೊಂದಿರುವವರ ಬಿಪಿಎಲ್, ಅಂತ್ಯೋದಯ ಕಾರ್ಡ್ ರದ್ದು ಮಾಡಲಾಗುತ್ತದೆ.

Leave A Reply

Your email address will not be published.