Home News Theft: ಅಸ್ಸಾಂ ಕಾರ್ಮಿಕರಿಂದ ಮನೆ ದರೋಡೆ: ಪ್ರಕರಣ ಮುಚ್ಚಿ ಹಾಕಿದ ಮಾಲೀಕ! ಹಿಂದಿನ ಉದ್ದೇಶ ಏನು?

Theft: ಅಸ್ಸಾಂ ಕಾರ್ಮಿಕರಿಂದ ಮನೆ ದರೋಡೆ: ಪ್ರಕರಣ ಮುಚ್ಚಿ ಹಾಕಿದ ಮಾಲೀಕ! ಹಿಂದಿನ ಉದ್ದೇಶ ಏನು?

Hindu neighbor gifts plot of land

Hindu neighbour gifts land to Muslim journalist

Theft: ಕೊಡಗಿನ ಸಿದ್ದಾಪುರ ಪೊಲೀಸ್ ಠಾಣಾ(Police) ವ್ಯಾಪ್ತಿಗೆ ಒಳಪಡುವ ಪಳ್ಳಕೆರೆ ಎಸ್ಟೇಟ್ ನಲ್ಲಿ(Coffee estate) ಅಸ್ಸಾಂ(Assam) ಮೂಲದ ವಲಸಿಗರಿಂದ ಖಾಯಂ ಕಾರ್ಮಿಕರೊಬ್ಬರ(Worker) ಮನೆ ಕಳ್ಳತನ ನಡೆದಿದ್ದು, ಸ್ಥಳೀಯ ಪೊಲೀಸ್ ಠಾಣೆಗೂ ಮಾಹಿತಿ ನೀಡದೆ ಪ್ರಕರಣವನ್ನು ಮುಚ್ಚಿಹಾಕಲಾಗಿದೆ ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಸ್ಥಳೀಯರ ಮಾಹಿತಿ ಪ್ರಕಾರ ಇತ್ತೀಚೆಗೆ ಮನೆ ದರೋಡೆ(Theft) ಮಾಡಿದ ಅಸ್ಸಾಂ ಮೂಲದ ವಲಸಿಗರನ್ನು ತೋಟದ ಕಚೇರಿಯಲ್ಲೇ ವಿಚಾರಣೆ ನಡೆಸಿದ ಬಳಿಕ ಯಾವುದೇ ಪ್ರಕರಣ ದಾಖಲಿಸದೆ.

ಪ್ರತಿಷ್ಠೆಯ ಕಾರಣದಿಂದ ಸದ್ದಿಲ್ಲದೆ ಅಸ್ಸಾಮಿಗೆ ಕಳುಹಿಸಲಾಗಿದೆ ಎನ್ನಲಾಗಿದೆ.
ತೋಟದ ಖಾಯಂ ಕಾರ್ಮಿಕರು ಕೆಲಸಕ್ಕೆ ತೆರಳಿದ್ದ ಸಂದರ್ಭ ಮನೆಯ ಬೀಗ ತೆಗೆದು ಗಾಡ್ರೇಜ್ ಬೀರುವಿನಲ್ಲಿದ್ದ ನಗದನ್ನು ದರೋಡೆ ಮಾಡಿರುವ ಪ್ರಕರಣ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ. ಹಲವು ದಿನಗಳಿಂದ ದಿನಗೂಲಿ ಮಾಡಿ ಇಟ್ಟಿದ ನಗದು ಕಳುವಾಗಿದ್ದರೂ ಕೂಡ ಮನೆಯವರು ಈ ಬಗ್ಗೆ ಮಾಹಿತಿ ನೀಡದೆ ಇರುವುದು ತೋಟ ಕಾರ್ಮಿಕರನ್ನು ಅಲ್ಲಿನ ಸಿಬ್ಬಂದಿಗಳು ಬೆದರಿಸಿ ಇಟ್ಟಿದ್ದಾರೆಯೇ ಎಂಬ ಅನುಮಾನಕ್ಕೂ ಎಡೆಮಾಡಿಕೊಟ್ಟಿದೆ.

ಎಸ್ಟೇಟ್ ನಲ್ಲಿ ನಡೆದಿರುವ ಘಟನೆ ಬಗ್ಗೆ ಯಾರೂ ಕೂಡಾ ಹೊರಗೆ ತುಟಿಕ್ ಪಿಟಿಕ್ ಎನ್ನಬಾರದೆಂದು ಮೇಲಿಂದ ಅಪ್ಪಣೆಯಾಗಿದೆ ಎಂಬ ಮಾಹಿತಿಯೂ ಇದೆ. ಯಾವುದೇ ಕ್ರಮ ಕೈಗೊಳ್ಳದೇ (ಪ್ರಕರಣ ದಾಖಲಿಸದೆ) ಹೀಗೆ ವಲಸಿಗರನ್ನು ಕಳುಹಿಸಿದ್ರೆ ಮುಂದೇ ಇಲ್ಲೇ ಉಳಿದಿರುವ ವಲಸಿಗರು ನಿರ್ಭೀತಿಯಿಂದ ಇನ್ನಷ್ಟು ಅಪರಾಧಗಳನ್ನು ಎಸಗಿ ಪರಾರಿಯಾದರು ಅಚ್ಚರಿ ಪಡಬೇಕಾಗಿಲ್ಲ. ಈಗಾಗಲೇ ಜಿಲ್ಲೆಯ ನಾನಾ ಕಡೆಗಳಲ್ಲಿ ಇಂತಹ ದರೋಡೆ ಸೇರಿದಂತೆ ವಿವಿಧ ಅಪರಾಧವನ್ನು ಅಸ್ಸಾಂರೆಂದು ಹೇಳಿಕೊಳ್ಳುವ ಆಕ್ರಮ ವಲಸಿಗರು ಮಾಡಿ ಪೊಲೀಸ್ ಅತಿಥಿಯಾಗಿರುವ ಉದಾಹರಣೆಗಳಿವೆ.

ಹೀಗಾಗಿ ದೊಡ್ಡಮಟ್ಟದ ಅನಾಹುತ ಸಂಭವಿಸುವ ಮೊದಲೇ ಅಸ್ಸಾಂ ವಲಸಿಗರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಈ ಪ್ರಕರಣವನ್ನು ಜಿಲ್ಲಾ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುತ್ತದೆಯೇ ಎಂಬುವುದನ್ನು ಕಾದುನೋಡಬೇಕಿದೆ.