MUDA Scam: ಸಿಎಂ ಪತ್ನಿ ಮುಡಾ ನಿವೇಶನ ವಾಪಾಸ್ಸ್‌! ಇಡಿಗೆ ಕಾನೂನಿನಲ್ಲಿ ಲಗಾಮು ಹಾಕುವ ಅವಕಾಶ ಇದೆಯಾ? – ಕಾನೂನು ಸಚಿವರು ಏನಂದ್ರು?

MUDA Scam: ಸಿಎಂ(CM Siddaramaiah) ಪತ್ನಿ ಪಾರ್ವತಿ ಪತ್ರವೊಂದನ್ನು(Letter) ರವಾನಿಸಿ ನಿವೇಶನಗಳನ್ನ ವಾಪಾಸ್(Site Return) ನೀಡಿದ್ದಾರೆ. ಪತ್ರದ ಕೆಲ ವಿವರ ನೋಡಿದರೆ ಅಪಪ್ರಚಾರದಿಂದ ನಿಜವಾಗ್ಲು ಒಬ್ಬ ಗೃಹಿಣಿಗೆ ಆಗುವ ಆಘಾತವನ್ನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ‌ ದೃಷ್ಟಿಯಿಂದ ಇಂತಹ ಅಪಪ್ರಚಾರ, ರಾಜಕೀಯ(Political) ದುರುದ್ದೇಶದ ಸಂದರ್ಭದಲ್ಲಿ ಈ ರೀತಿಯ ಸ್ಪಂದನೆ‌ ಮೆಚ್ಚುವಂತಹದ್ದು. ಸೂಕ್ತವಾದ ನಿರ್ಣಯ ಇದು ಎಂದು ಕಾನೂನು ಸಚಿವ(Law Minister) ಹೆಚ್.ಕೆ.ಪಾಟೀಲ್(H K Patil) ಪ್ರತಿಕ್ರಿಯೆ ನೀಡಿದ್ದಾರೆ.

ನಿವೇಶನ ಪಡೆದಿದ್ದಾರೆ ಎಂಬುದಕ್ಕೆ ವಿರಾಮ ಇದು. ಕಾನೂನಾತ್ಮಕವಾಗಿ ಈ ಪ್ರಕರಣವನ್ನು ದಿನೇ ದಿನೇ ರಾಜಕೀಯಗೊಳಿಸಲಾಗ್ತಿದೆ. ಇಡಿಯವ್ರು ಸುಮೋಟೊ ಕೇಸ್ ದಾಖಲಿಸಿ ಮುಂದುವರೆಯುತ್ತಿದ್ದಾರೆ. ಒಂದು ವೇಳೆ ಸತ್ಯವಾಗಿದ್ದರೆ ಕೇಂದ್ರ, ಇಡಿ ಈ ಪ್ರಮಾಣದಲ್ಲಿ ರಾಜಕೀಯ ಮಾಡಬಾರದು. ಕೇಸ್ ಕೊಟ್ಟಾಗ ಕೇಸ್ ದಾಖಲು ಬೇರೆ, ಆದರೆ ಸುಮೊಟೋ ಕೇಸ್ ದಾಖಲು ಮಾಡಿದ್ರೆ ಇದು ದುರುದ್ದೇಶದ ರಾಜಕಾರಣ. ಇಂತಹ ಕ್ರಮಗಳಿಗೆ ಜನಾಕ್ರೋಶವನ್ನ ಕೇಂದ್ರ ಸರ್ಕಾರ ಎದುರಿಸಬೇಕಾಗುತ್ತೆ ಎಂದು ಕೇಂದ್ರ ಸರ್ಕಾರಕ್ಕೆ ಸಚಿವ ಹೆಚ್.ಕೆ.ಪಾಟೀಲ್ ಎಚ್ಚರಿಕೆ ನೀಡಿದರು.

ತನಿಖೆಯನ್ನು ಎದುರಿಸಬೇಕು. ಆದರೆ ಇಡಿ ದಶಕದ ಪ್ರಕರಣವನ್ನ ದಾಖಲು ಮಾಡಿಕೊಂಡಿದೆ. ಕಾನೂನುನ್ನ ತಮಗೆ ಬೇಕಾದಾಗಿ ಬಳಿಸಿಕೊಳ್ಳುವುದು ಸಮಂಜಸವಲ್ಲ. ಇದನ್ನು ದೇಶದ ಜನ ಗಮನಿಸುತ್ತಿದೆ. ಸೈಟ್ ವಾಪಸ್ ಕೊಟ್ಟಿರುವುದು ಸಿಎಂ ಅವರಿಗೂ ಅಚ್ಚರಿ ತಂದಿರುವ ಸುದ್ದಿನೇ. ಒಬ್ಬ ಗೃಹಿಣಿ ತನ್ನ ಮಾನಸಿಕ ಸ್ಥಿತಿಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಯಜಮಾನರನ್ನ ಅಪಮಾನ ಮಾಡುತ್ತಿರುವುದಕ್ಕೆ ಪ್ರಕ್ರಿಯಿಸಿದ್ದಾರೆ. ಪಾರ್ವತಿಯವರ ಮನಸ್ಸಿಗೂ ಘಾಸಿಯಾಗಿದೆ. ಸಿಎಂ ಘನತೆ, ಗೌರವಕ್ಕೆ ಧಕ್ಕೆ ತರುವುತ್ತಿರುವುದಕ್ಕಾಗಿ ಸೈಟ್ ವಾಪಸ್ ಕೊಟ್ಟಿದ್ದಾರೆ ಎಂದರು.

ಎಲ್ಲಿ ಮನಿ ಲಾಂಡ್ರಿಂಗ್ ಆಗಿದೆ, ಯಾರು ಮನಿ ಲಾಂಡ್ರಿಂಗ್ ಮಾಡಿದ್ದಾರೆ? ಕಾನೂನನ್ನ‌ ಮನಸ್ಸಿಗೆ ಬಂದಂತೆ ಬಳಸಿಕೊಳ್ತೀವಿ ಅಂದ್ರೆ ದೇಶದ ಜನ, ನ್ಯಾಯಾಂಗ ಗಮನಿಸುತ್ತವೆ. ಕೇಂದ್ರದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಈ ದ್ವೇಷದ ರಾಜಕೀಯ ಮಾಡಲಾಗ್ತಿದೆ. ಸಿಎಂ ಬಡವರ ಪರ ಕೆಲಸ ಮಾಡುತ್ತಿದ್ದಾರೆ. ಪಂಚ ಗ್ಯಾರಂಟಿಗಳ ಜಾರಿ‌ ಮಾಡಿದ್ದಾರೆ. ಬಡತನ ರೇಖೆಗಿಂತ ಕಡಿಮೆ ಇರುವವರನ್ನು ಮೇಲೆ ಎತ್ತಿದ್ದಾರೆ. ಆರ್ಥಿಕ ಶಿಸ್ತಿಗೆ ಸಿಎಂ ಹೆಸರಾಗಿದ್ದಾರೆ. ಅಲ್ಲದೆ14 ಬಜೆಟ್ ಮಂಡನೆ ಮಾಡಿದ್ದಾರೆ. ಇದನ್ನು ಸಹಿಸದ ಬಿಜೆಪಿ ಗೂಬೆ ಕೂರಿಸುವ ಕೆಲಸ ಆಗಿದೆ. ರಾಜಭವನ ದುರ್ಬಳಕೆ ಆಗಿದೆ. ಸತ್ಯ ಏನಿದೆ ಅಂತ ಜನರಿಗೆ ಗೊತ್ತಾಗಿದೆ. ಅನಾರೋಗ್ಯ ರಾಜಕೀಯ ರಾಜ್ಯದಲ್ಲಿ ನಡೆದಿದೆ. ಸಿದ್ದರಾಮಯ್ಯ ತನಿಖೆಗೆ ಸ್ವಾಗತ ಮಾಡಿದ್ದಾರೆ ಎಂದರು.

ಇನ್ನು ಇಡಿಗೆ ಲಗಾಮು ಹಾಕುವ ವಿಚಾರವಾಗಿ ಮಾತನಾಡಿದ ಅವರು, ಇವತ್ತು ಸಿಎಂ ಭೇಟಿಯಾಗುತ್ತಿದ್ದೇನೆ. ಕಾನೂನಿನಲ್ಲಿ ಲಗಾಮು ಹಾಕುವ ಅವಕಾಶ ಇರುತ್ತೆ. ಅದನ್ನು ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ. ಕಾನೂನು ಹೋರಾಟ ಮಾಡಬೇಕಾದ ಸಂದರ್ಭ ಇದು. ಸಿಎಂ ಜೊತೆಗೆ ಚರ್ಚೆ ಮಾಡಿ ನಿರ್ಧಾರ ‌ಮಾಡುತ್ತೇವೆ. ಹೈಕಮಾಂಡ್ ಸಿಎಂ ಜೊತೆಗಿದೆ. ಶಾಸಕರು, ಸಚಿವರು ಜೊತೆಗಿದ್ದಾರೆ. ಜನರು ಕೂಡ ಸಿಎಂ ಜೊತೆಗಿದ್ದಾರೆ. ಸಿಎಂ ವಿರುದ್ಧ ದ್ವೇಷದ ರಾಜಕೀಯ ಹೈಕಮಾಂಡ್ ಗಮನಕ್ಕೆ ಇದೆ.
ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೋಡುವ ಪ್ರಮೇಯ ಇಲ್ಲ ಎಂದು ಹೇಳಿದರು.

Leave A Reply

Your email address will not be published.