Anna bhagya: ಬಿಪಿಎಲ್‌ ಪಡಿತರಿಗೆ ಇನ್ನು ಮುಂದೆ ಅನ್ನಭಾಗ್ಯದ ಹಣ ಸಿಗಲ್ಲ: ಹಾಗಾದರೆ ಏನು ಸಿಗುತ್ತೆ?

Annabhagya Scheme: ಬಿಪಿಎಲ್‌ ಕಾರ್ಡ್‌(BPL Card) ಹೊಂದಿರುವ ಫಲಾನುಭವಿಗಳಿಗೆ ರಾಜ್ಯ ಸರ್ಕಾರ(State govt) ಸಿಹಿ ಸುದ್ದಿ ನೀಡಿದೆ. ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ(Rice) ಬದಲು ನಗದು ರೂಪದಲ್ಲಿ 170 ರೂ ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಫಲಾನುಭವಿಗಳಿಗೆ ಹಣ(Money) ಸಿಗುವುದಿಲ್ಲ. ಅದರ ಬದಲಾಗಿ ಇದೇ ಅಕ್ಟೋಬರ್‌ ತಿಂಗಳಿಂದ ದಿನಸಿ ಕಿಟ್ ನೀಡಲಾಗುತ್ತದೆ. ಅದರಲ್ಲಿ ಅಡುಗೆ ಎಣ್ಣೆ(Oil), ಬೇಳೆ(Daal), ಸಕ್ಕರೆ(Sugar), ಉಪ್ಪು(Salt) ನೀಡುವ ಯೋಜನೆಯನ್ನು ರಾಜ್ಯ ಸರಕಾರ ಪ್ಲ್ಯಾನ್‌ ಮಾಡಿದೆ.

ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಅನ್ನಭಾಗ್ಯದ ಗ್ಯಾರಂಟಿಯಡಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ನೀಡುವುದಾಗಿ ಘೋಷಿಸಿತ್ತು. ಅಷ್ಟು ಪ್ರಮಾಣದ ಅಕ್ಕಿ ಲಭ್ಯವಾಗದ ಹಿನ್ನೆಲೆ, ಐದು ಕೆ.ಜಿ ಅಕ್ಕಿ ಜತೆಗೆ, ಉಳಿದ ಐದು ಕೆ.ಜಿಯ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕುತ್ತಿತ್ತು. ಇದೀಗ ಹಣದ ಬದಲು ದಿನಸಿ ನೀಡುವ ಯೋಜನೆ ಜಾರಿಗೆ ತರಲು ಸರ್ಕಾರ ತಯಾರಿ ನಡೆಸಿದೆ.

ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತೀ ಸದಸ್ಯರಿಗೆ ಕೆಜಿಗೆ 34 ರು. ನಂತೆ 5 ಕೆಜಿ ಅಕ್ಕಿಗೆ 170 ರು. ಹಣ ಸಂದಾಯ ಮಾಡುತ್ತಿತ್ತು. ಸರಕಾರಕ್ಕೆ ಬಿಪಿಎಲ್‌, ಅಂತ್ಯೋದಯ ಕಾರ್ಡ್ ದಾರರರಿಗೆ ದಿನಸಿ ಕಿಟ್ ವಿತರಿಸಲು 443 ಕೋಟಿ ರು. ಅಗತ್ಯವಿದೆ. ಒಂದು ಕೆಜಿ ಗುಣಮಟ್ಟದ ಎಣ್ಣೆಗೆ 140 ರು. ದರ ಬೀಳುತ್ತದೆ, ಇನ್ನು 1 ಕೆಜಿ ತೊಗರಿ ಬೇಳೆಗೆ 170 ರು. ಆದರೆ ಸಕ್ಕರೆ ಕೆಜಿಗೆ 40 ರು. ಮತ್ತು ಪ್ಯಾಕೇಟ್‌ ಉಪ್ಪು 5 ರು. ಸೇರಿ ಒಟ್ಟು 355 ರು. ಅಗತ್ಯವಿದೆ. ಪ್ರತಿ ತಿಂಗಳು 1.25 ಕೋಟಿ ಕಾರ್ಡ್ ಎಂದರೆ ಒಂದು ಕುಟುಂಬಕ್ಕೆ 355 ರು. ವೆಚ್ಚದ ದಿನಸಿ ಕಿಟ್ ವಿತರಿಸಬೇಕಾಗುತ್ತದೆ. ಹಾಗಾಗಿ ಸರಕಾರ ತಿಂಗಳಿಗೆ 443 ಕೋಟಿ ರು. ವ್ಯಯಿಸಲು ಹಣ ಕ್ರೂಡೀಕರಿಸಬೇಕಾಗಿದೆ.

ವರ್ಷಕ್ಕೆ ಅಂದಾಜು 5,316 ಕೋಟಿ ರು. ಸರ್ಕಾರದ ಬೊಕ್ಕಸಕ್ಕೆ ಹೊರೆ ಬೀಳಲಿದೆ. ಅಂತ್ಯೋದಯ ಕಾರ್ಡ್‌ನಲ್ಲಿ ಒಂದು ಕುಟುಂಬದಲ್ಲಿ 4 ಮಂದಿಯಿದ್ದರೆ 370 ರು., ಐದು ಸದಸ್ಯರಿದ್ದರೆ 510 ರು.. ಆರು ಆದರೆ 850 ರು. ಎಂದು ಲೆಕ್ಕ ಹಾಕಲಾಗುತ್ತಿದೆ. ಈ ಯೋಜನೆಯಡಿ ಸದ್ಯ ಪ್ರತಿ ತಿಂಗಳು ಬಿಪಿಎಲ್, ಅಂತ್ಯೋದಯ, ಎಪಿಎಲ್ ಸೇರಿ ಒಟ್ಟು 1 ಕೋಟಿ ಕಾರ್ಡ್‌ಗಳಿಗೆ 4,50,500 ಕೋಟಿ ರು. ಜಮೆ ಮಾಡಲಾಗುತ್ತಿದೆ.

Leave A Reply

Your email address will not be published.