Pro Bhagavan: ‘ಹಿಂದೂ’ ಎಂಬುದು ಧರ್ಮವಲ್ಲ, ಅದಕ್ಕೆ ಮೆಟ್ಟಲ್ಲಿ ಹೊಡೆಯಿರಿ – ಸಾಹಿತಿ ಪ್ರೊ. ಭಗವಾನ್ ಶಾಕಿಂಗ್ ಹೇಳಿಕೆ !!

Share the Article

Pro Bhagavan: ದೇವಸ್ಥಾನಗಳನ್ನು ಕಟ್ಟುವುದು ಶೂದ್ರರು. ಆದರೆ ದೇವಸ್ಥಾನದ ಒಳಗೆ ಇರೋರು ಬ್ರಾಹ್ಮಣರು. ಹೀಗಾಗಿ ಮಾನ ಮಾರ್ಯಾದೆ ಇದ್ದರೆ ಶೂದ್ರರು ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಬೇಕು. ಹಿಂದೂ ಧರ್ಮ (Hindu Religion) ನಮ್ಮದಲ್ಲ. ಅದು ನಮಗೆ ಬೇಕಾಗಿಲ್ಲ. ಶೂದ್ರರನ್ನು ನಿಂದಿಸಿರುವ ಹಿಂದೂ ಧರ್ಮವನ್ನು ಎಕ್ಕಡದಲ್ಲಿ ಹೊಡೆಯಬೇಕು ಎಂದು ಸಾಹಿತಿ ಪ್ರೊ.ಕೆ. ಎಸ್ ಭಗವಾನ್ (pro KS Bhagawan) ಹೇಳಿದ್ದಾರೆ.

ಮೈಸೂರಿನಲ್ಲಿ (Mysore news) ನಡೆದ ಮಹಿಷ ದಸರಾದಲ್ಲಿ (mahisha Dasara) ಮಾತನಾಡಿದ ಸಾಹಿತಿ, ಚಿಂತಕ ಪ್ರೊ.ಕೆ ಎಸ್.ಭಗವಾನ್ ಅವರು ಶೂದ್ರರು ವೇಶ್ಯೆ ಮಕ್ಕಳೆಂದು ಹೇಳುವ ಧರ್ಮಕ್ಕೆ ಎಕ್ಕಡದಲ್ಲಿ ಹೊಡೆಯಬೇಕು. ಶೂದ್ರರು ಎಂಬ ಗುಲಾಮರನ್ನು ಎಚ್ಚರಿಸಬೇಕು. ಯಾರು ಹೀನನೂ ಆಗಿದ್ದಾನೆ, ಅವನು ಹಿಂದೂ. ಯಾರೂ ಹಿಂದೂ ಆಗಬಾರದು. ಜ್ಞಾನದ ಹಸಿವು ಇಲ್ಲದ ಕಾರಣ ಹಲವರು ಗುಲಾಮರಾಗಿದ್ದಾರೆ. ಹಿಂದೂ ಅಂದರೆ ಹಿಂದಕ್ಕೆ ಹೋಗುವ ಜನ. ಹಿಂದೂ ಅಂದರೆ ಬ್ರಾಹ್ಮಣ ಧರ್ಮ ಎಂದರ್ಥ. ಹಿಂದುಗಳು ಜನರನ್ನು ಮುಂದಕ್ಕೆ ಹೋಗಲು ಬಿಡುವುದಿಲ್ಲ. ಗಂಡಸರನ್ನು ಮಾತ್ರ ಬ್ರಾಹ್ಮಣರು ಅಂತಾರೆ. ಹೆಂಗಸರನ್ನು ಬ್ರಾಹ್ಮಣರು ಅನ್ನಲ್ಲ ಅವರನ್ನು ಶೂದ್ರರು ಅಂತಾರೆ ಎಂದು ಅವರು ನುಡಿದರು.

ಅಲ್ಲದೆ ದೇವಸ್ಥಾನ ಕಟ್ಟಿದ ಶೂದ್ರರನ್ನೇ ದೇವಸ್ಥಾನದೊಳಗೆ ಬಿಟ್ಟುಕೊಳ್ಳುವುದಿಲ್ಲ. ಶೂದ್ರರು ದೇವಸ್ಥಾನಗಳಿಗೆ ಹೋಗೋದನ್ನು ನಿಲ್ಲಸಬೇಕು. 50 ವರ್ಷ ಆಯ್ತು ನಾನು ದೇವಸ್ಥಾನಕ್ಕೆ ಹೋಗಿ. ದೇವಸ್ಥಾಕ್ಕೆ ಹೋದರೆ ಏನು ಆಗಲ್ಲ. ನೀವು ಹುಂಡಿಗೆ ದುಡ್ಡು ಹಾಕ್ತೀರಾ, ತೆಂಗಿನಕಾಯಿ ಹೊಡೆದು ಅರ್ಧ ಕಾಯಿ ಇಟ್ಟುಕೊಂಡು ಇನ್ನರ್ಧ ಕೊಡ್ತಾರೆ ಅಷ್ಟೇ. ಶೂದ್ರರಿಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗಬಾರದು. ಮನುಸ್ಮೃತಿಯಲ್ಲಿ ಶೂದ್ರರು ಅಂದರೆ ವೇಶ್ಯೆಗೆ ಹುಟ್ಟಿದವನು ಅಂತಿದೆ. ಮನುಸ್ಮೃತಿಯಲ್ಲಿ ಹೇಳಿರುವಂತೆ ನಾವು ಶೂದ್ರರೆಂದು ಒಪ್ಪಿಕೊಳ್ಳಬೇಕು ಎಂದು ಪ್ರಶ್ನಿಸಿದರು.

ಬಳಿಕ ಮಾತನಾಡಿದ ಅವರು ಎಲ್ಲರೂ ಬುದ್ಧ ಗುರುಗಳನ್ನು ನಂಬಿ. ನಾನು ಹೇಳಿದ್ದನ್ನು ನಂಬಿ ಎಂದು ಗೌತಮ ಬುದ್ಧ ಹೇಳಿಲ್ಲ. ನಾನು ಹೇಳಿದ್ದು ಕೇಳದಿದ್ದರೆ ಸ್ವರ್ಗ ಸಿಗಲ್ಲವೆಂದು ಏಸು ಹೇಳುತ್ತಾರೆ. ನನ್ನ ಮಾತು ಕೇಳದಿದ್ದರೆ ಮೋಕ್ಷ ಸಿಗಲ್ಲವೆಂದು ಪ್ರವಾದಿ ಹೇಳುತ್ತಾರೆ. ನಾನು ಹೇಳಿದ್ದನ್ನು ಕೇಳದಿದ್ದರೆ ನರಕಕ್ಕೆ ಹೋಗುತ್ತೀರೆಂದು ಕೃಷ್ಣ ಹೇಳುತ್ತಾನೆ. ಶೂದ್ರರು ವೇಶ್ಯೆಗೆ ಹುಟ್ಟಿದವರೆಂದು ಹೇಳುವ ಧರ್ಮದಲ್ಲಿ ಇರಬಾರದು. ನಾವು ಬೌದ್ಧ ಧರ್ಮಕ್ಕೆ ಹೋಗಬೇಕು ಎಂದು ಪ್ರೊಫೆಸರ್ ಭಗವಾನ್ ತಿಳಿಸಿದರು.

Leave A Reply