BJP ಯ ಈ 8 ಮಂದಿ ಘಟಾನುಘಟಿ ನಾಯಕರಿಗೆ ಬಿಗ್ ಶಾಕ್- ಪಕ್ಷದಿಂದ ಉಚ್ಛಾಟಿಸಿ ಆದೇಶ ಹೊರಡಿಸಿದ ಹೈಕಮಾಂಡ್!!
BJP: ಜಮ್ಮು ಕಾಶ್ಮೀರ ಮತ್ತು ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಆದರೆ ಹರಿಯಾಣ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಯಲ್ಲಿ ಬಂಡಾಯದ ಕೂಗು ಎದ್ದಿದೆ. ಇದೀಗ ತನ್ನ ಬಂಡಾಯ ನಾಯಕರ ವಿರುದ್ಧ ಬಿಜೆಪಿ ಹೈಕಮಾಂಡ್ ಕಠಿಣ ಕ್ರಮ ಕೈಗೊಂಡಿದ್ದು ಈ ಘಟಾನುಘಟಿ 8 ನಾಯಕರನ್ನು ಪಕ್ಷದಿಂದಲೇ ಉಚ್ಚಾಟಿಸಿದೆ.
ಹೌದು, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ(Hariyana Assembly election) ಬಿಜೆಪಿ ಅಭ್ಯರ್ಥಿಗಳ ವಿರುದ್ಧವೇ ಲಾಡ್ವಾ, ಅಸ್ಸಂದ್, ಗನೌರ್, ಸಫಿಡೋ, ರಾನಿಯಾ, ಮೆಹಮ್, ಗುರುಗ್ರಾಮ್ ಮತ್ತು ಹಥಿನ್ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ. ಲಾಡ್ವಾದಿಂದ ಸಂದೀಪ್ ಗರ್ಗ್, ಅಸ್ಸಂದ್‌ನಿಂದ ಜಿಲೇರಾಮ್ ಶರ್ಮಾ, ಗನ್ನೌರ್‌ನಿಂದ ದೇವೇಂದ್ರ ಕಡ್ಯಾನ್, ಸಫಿಡೋದಿಂದ ಬಚ್ಚನ್ ಸಿಂಗ್ ಆರ್ಯ, ರಾನಿಯಾದಿಂದ ರಂಜಿತ್ ಚೌತಾಲಾ, ಮೆಹಮ್‌ನಿಂದ ರಾಧಾ ಅಹ್ಲಾವತ್ ಸ್ಪರ್ಧಿಸುತ್ತಿದ್ದಾರೆ. ಅತ್ತ ಗುರುಗ್ರಾಮ್‌ನಿಂದ ನವೀನ್ ಗೋಯಲ್ ಮತ್ತು ಹಾಥಿನ್‌ನಿಂದ ಕೇಹರ್ ಸಿಂಗ್ ರಾವತ್ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಇವರನ್ನು ಪಕ್ಷದಿಂದ ಉಚ್ಛಾಟಿಸಿದೆ.
ಹರಿಯಾಣ ಬಿಜೆಪಿ(BJP) ರಾಜ್ಯಾಧ್ಯಕ್ಷ ಮೋಹನ್‌ಲಾಲ್ ಬಡೋಲಿ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪಕ್ಷದ ಕಾರ್ಯಕರ್ತರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆರು ವರ್ಷಗಳ ಕಾಲ ಪಕ್ಷದಿಂದ ಹೊರಹಾಕಿದ್ದಾರೆ.