Crop insurance amount: 2023-24 ರ ಬೆಳೆ ವಿಮೆ ಹಣ ಬಿಡುಗಡೆ: ನಿಮಗೂ ಬಂದಿದೆಯೇ? ಈ ರೀತಿ ಮೊಬೈಲ್ ನಲ್ಲಿ ಚೆಕ್ ಮಾಡಿ!

Crop insurance amount: 2023-24 ರ ಬೆಳೆ ವಿಮೆ ಹಣ ಬಿಡುಗಡೆ ಮಾಡಲಾಗಿದ್ದು, ನಿಮಗೂ ಬೆಳೆ ವಿಮೆ ಹಣ (Crop insurance amount) ಬಂದಿದೆಯೇ ಎಂದು ಮನೆಯಲ್ಲೇ ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಬಹುದು.

ಹೌದು, ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಅಡಿಯಲ್ಲಿ ವಿಮೆ ಮಾಡಿಸಿದ ರೈತರಿಗೆ ಯಾವ ಬೆಳೆಗೆ ಎಷ್ಟು ವಿಮೆ ಜಮೆಯಾಗಲಿದೇ ಮತ್ತು ಬೆಳೆ ವಿಮೆ ಹಣ ಜಮೆ ಆಗಿದೆಯೋ, ಇಲ್ಲವೋ ಎಂದು ಈ ರೀತಿ ತಿಳಿಯಬಹುದು.

ಅದಕ್ಕಾಗಿ ನೀವು ರಾಜ್ಯ ಸರಕಾರದ ಸಂರಕ್ಷಣೆ (Samrakshane.karnataka.gov.in) ವೆಬ್ ಸೈಟ್ ಭೇಟಿ ಮಾಡಿ ರೈತರು ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ/ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು 2023-24ರ ಯಾವೆಲ್ಲ ಬೆಳೆಗಳಿಗೆ ವಿಮೆ ಜಮೆ ಮಾಡಲಾಗಿದೆ ಎಂದು ತಿಳಿದುಕೊಳ್ಳಬಹುದು.

Crop insurance status-ನಿಮ್ಮ ಬೆಳೆ ವಿಮೆಗೆ ಹಣ ಎಷ್ಟು ಜಮೆ ಆಗಲಿದೆ ಎಂದು ಚೆಕ್ ಮಾಡಿಕೊಳ್ಳುವ ವಿಧಾನ:

Samrakshane.karnataka.gov.in ವೆಬ್ಸೈಟ್‌ ಭೇಟಿ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಮುಂಗಾರು ಹಂಗಾಮಿಗೆ ಯಾವೆಲ್ಲ ಬೆಳೆಗಳಿಗೆ ವಿಮೆ ಮಾಡಿಸಲಾಗಿದೆ ಎಂದು ತಿಳಿದುಕೊಳ್ಳಬಹುದು. ಬೆಳೆಗೆ ಎಷ್ಟು ವಿಮೆ ಪ್ರಿಮಿಯಂ ಪಾವತಿ ಮಾಡಲಾಗಿದೆ ಸಂಪೂರ್ಣ ವಿವರ ಪಡೆಯಬಹುದು.

ವಿಧಾನ 1:ರೈತರು ತಮ್ಮ ಮೊಬೈಲ್‌ ನಲ್ಲಿ ಮೊದಲಿಗೆ ಈ KHARIF CROP INSURANCE ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಅಧಿಕೃತ ಬೆಳೆ ವಿಮೆಯ ಸಂರಕ್ಷಣೆ ಜಾಲತಾಣವನ್ನು ಪ್ರವೇಶ ಮಾಡಬೇಕು. ಬಳಿಕ ಮುಖಪುಟದಲ್ಲಿ ಮೊದಲಿಗೆ ನೀವು “ವರ್ಷ/year:2023-24 “ ಹಾಗೂ ಋತು: ಮುಂಗಾರು/kharif” ಎಂದು ಆಯ್ಕೆ ಮಾಡಿಕೊಂಡು “ಮುಂದೆ/go” ಎಂದು ಕೆಳಗೆ ಕಾಣುವ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ.

ವಿಧಾನ 2: ನಂತರ ಈ ಪೇಜಿನ ಕೆಳಗೆ “Farmers”ಕಾಲಂ ನಲ್ಲಿ ಕಾಣುವ “primium calculator/ಪ್ರಿಮಿಯಂ ಲೆಕ್ಕಾಚಾರ ಬಟನ್‌ ಮೇಲೆ ಕ್ಲಿಕ್‌ ಮಾಡಿ.

 

ವಿಧಾನ 3: ನಂತರ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ/ಗ್ರಾಮಗಳನ್ನು ಆಯ್ಕೆ ಮಾಡಿದ ಮೇಲೆ ಪ್ರಿಮಿಯಂ ವಿವರದ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ಆ ಗ್ರಾಮದಲ್ಲಿ ಬೆಳೆ ವಿಮೆಗೆ ಆಯ್ಕೆಯಾದ ಬೆಳೆ ಮತ್ತು ಅದರ ಪ್ರಿಮಿಯಂ ಮೊತ್ತದ ವಿವರವನ್ನು ಕಾಣಬಹುದು.

Leave A Reply

Your email address will not be published.