BBK Season 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಎಂಟ್ರಿ ನೀಡಿದ ಧನರಾಜ್‌ ಆಚಾರ್‌; ಉಳಿದ ಸ್ಪರ್ಧಿಗಳ ಲಿಸ್ಟ್‌ ಇಲ್ಲಿದೆ

Share the Article

Bigg Boss Kannada Season 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಗ್ರ್ಯಾಂಡ್‌ ಓಪನಿಂಗ್‌ ಆಗಿದ್ದು, ಬಿಗ್‌ಬಾಸ್‌ ಕನ್ನಡ 11 ರ ಅಸಲಿ ಆಟ ಶುರುವಾಗಿದ್ದು, ಗೀತಾ ಸೀರಿಯಲ್‌ ಖ್ಯಾತಿಯ ನಟಿ ಭವ್ಯಾ ಗೌಡ ಬಿಗ್‌ಬಾಸ್‌ ಸ್ಪರ್ಧೆಯ ಮೊದಲನೇ ಕಂಟೆಸ್ಟೆಂಟ್‌ ಆಗಿ ಆಯ್ಕೆಯಾಗಿದ್ದು, ಬಿಗ್‌ಮನೆಗೆ ಎಂಟ್ರಿ ನೀಡಿದ್ದಾರೆ. ಇವರು ಸ್ವರ್ಗದ ಮನೆಗೆ ಎಂಟ್ರಿ ನೀಡಿದ್ದಾರೆ.

ನಟಿ ಯಮುನಾ ಶ್ರೀನಿಧಿ ಅವರು ಬಿಗ್‌ಬಾಸ್‌ ಸ್ಪರ್ಧೆಯ ಎರಡನೇ ಕಂಟೆಸ್ಟೆಂಟ್‌ ಆಗಿ ಮನೆಯೊಳಗೆ ಎಂಟ್ರಿ ನೀಡಿದ್ದಾರೆ. ಸ್ವರ್ಗದ ಮನೆಗೆ ಎಂಟ್ರಿ ನೀಡಿದ್ದಾರೆ.

ಗಿಚ್ಚಿಗಿಲಿಗಿಲಿ ಮೂಲಕ ಖ್ಯಾತರಾದ ಹಾಸ್ಯ ಕಲಾವಿದ ಧನರಾಜ್‌ ಆಚಾರ್‌ ಬಿಗ್‌ಬಾಸ್‌ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಬಿಗ್‌ಮನೆಗೆ ಎಂಟ್ರಿ ನೀಡಿದ್ದಾರೆ.  ಇವರು ಸ್ವರ್ಗದ ಮನೆಗೆ ಹೋಗಿದ್ದಾರೆ.

ನಟಿ ಗೌತಮಿ ಜಾಧವ್‌ ಅವರು ಬಿಗ್‌ಬಾಸ್‌ ಸ್ಪರ್ಧೆಯ ಐದನೇ ಕಂಟೆಸ್ಟೆಂಟ್‌ ಆಗಿ ಎಂಟ್ರಿ ನೀಡಿದ್ದಾರೆ. ಜನರ ವೋಟಿನ ಆಧಾರದ ಮೇಲೆ ಸತ್ಯ ಸೀರಿಯಲ್‌ ನಟಿ ಗೌತಮಿ ಅವರು ಸ್ವರ್ಗಕ್ಕೆ ಎಂಟ್ರಿ ನೀಡಿದ್ದಾರೆ.

ಅನುಷಾ ರೈ ಅವರು ಆರನೇ ಸ್ಪರ್ಧಿಯಾಗಿ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಕ್ಕೆ ಎಂಟ್ರಿ ನೀಡಿದ್ದಾರೆ. ಇವರು ಬಿಗ್‌ಬಾಸ್‌ನ ನರಕದ ಮನೆಗೆ ಎಂಟ್ರಿ ನೀಡಿದ್ದಾರೆ. ಬಿಗ್‌ಬಾಸ್‌ ಮನೆಯ ನರಕದ ಲೋಕಕ್ಕೆ ಹೋದ ಮೊದಲ ಸ್ಪರ್ಧಿಯಾಗಿ ಅನುಷಾ ಅವರು ಆಯ್ಕೆಯಾಗಿದ್ದಾರೆ.

‘ಎಗ್ಸೈಟೆಡ್​ ಆಗಿದೀನಿ. ಸ್ವರ್ಗ-ನರಕ ಎಕ್ಸ್​ಪೀರಿಯನ್ಸ್ ಮಾಡಬೇಕು. ಸ್ವರ್ಗ ಸುಂದರವಾಗಿರುತ್ತದೆ, ನಾನು ಕೂಡ ಸುಂದರವಾಗಿದ್ದೀನಿ. ಹೀಗಾಗಿ, ಸ್ವರ್ಗ ಸೇರಬೇಕು’ ಎಂದ ಅನುಷಾ ರೈ ಅವರಿಗೆ ದೊರಕಿದ್ದು ಮಾತ್ರ ನರಕ.

ಬಿಗ್‌ಬಾಸ್‌ ಮನೆಯ ನರಕದ ಮನೆಗೆ ಹೋಗಲಿದ್ದಾರೆ ಎಂದಾಗ, ‘ನಾನು ಹಳ್ಳಿ ಹುಡುಗಿ. ನನಗೆ ಇದೆಲ್ಲ ತೊಂದರೆಯೇ ಇಲ್ಲ’ ಎಂದು ಹೇಳಿದ್ದಾರೆ  ನಟಿ.

ಧರ್ಮ ಕೀರ್ತಿರಾಜ್‌ ಅವರು ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕೆ ಏಳನೇ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ. ಸ್ವರ್ಗದ ಮನೆಗೆ ಎಂಟ್ರಿ ನೀಡಿದ್ದಾರೆ ಧರ್ಮ.

ವಕೀಲ ಜಗದೀಶ್‌ ಅವರು ಬಿಗ್‌ಬಾಸ್‌ ಮನೆಗೆ ಈ ಬಾರಿ ಏಳನೇ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ. ಬಿಗ್‌ ಬಾಸ್‌ ಮನೆಗೆ ಬಂದ ʼವಕೀಲ್‌ ಸಾಬ್‌ʼ ಅವರು ತಮ್ಮ ಉದ್ದೇಶವೇನೆಂದು ಹೇಳಿದ್ದು,  ಇವರು ವೀಕ್ಷಕರ ವೋಟಿಂಗ್‌ ಆಧಾರದಲ್ಲಿ ಎರಡು ಲಕ್ಷಕ್ಕಿಂತಲೂ ಹೆಚ್ಚು ವೋಟ್‌ ಪಡೆದ ʼವಕೀಲ್‌ ಸಾಬ್‌ʼ ಅವರು  ಬಿಗ್‌ಬಾಸ್‌ ಮನೆಯ ಸ್ವರ್ಗದ ಮನೆಗೆ  ಸ್ಪರ್ಧಿಯಾಗಿ ಹೋಗಿದ್ದಾರೆ.

ನಟ ಶಿಶಿರ್‌ ಶಾಸ್ತ್ರಿ ಎಂಟನೇ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಏನೂ ಎಕ್ಸ್‌ಪೆಕ್ಟೇಷನ್‌ ಮಾಡದೇ ಬಿಗ್‌ಬಾಸ್‌ ಮನೆಯೊಳಗೆ ಹೋಗ್ತಾ ಇದ್ದೀನಿ ಎಂದ ನಟ. ನಟ ಶಿಶಿರ್‌ ಅವರು ನರಕದ ಮನೆಗೆ ಎರಡನೇ ಸ್ಪರ್ಧಿಯಾಗಿ ಹೋಗಿದ್ದಾರೆ.

ಸೇವಂತಿ ಧಾರಾವಾಹಿ ಸೇರಿ ತೆಲುಗು ಧಾರಾವಹಿಯಲ್ಲಿ ಶಿಶಿರ್‌ ಅವರು ನಟಿಸಿದ್ದಾರೆ. ಕುಲವಧು ಸೀರಿಯಲ್‌ನಲ್ಲಿ ನಟಿಸಿದ್ದ ಶಿಶಿರ್‌ ಅವರು ಜೀ ತೆಲುಗು ವಾಹಿನಿಯ ʼಇಂತಿಗುಟ್ಟುʼ ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ.

ನಟ ತ್ರಿವಿಕ್ರಮ ಅವರು ಬಿಗ್‌ಬಾಸ್‌ ಕನ್ನಡ ಸೀಸನ್‌ 11 ರ ಒಂಭತ್ತನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ತ್ರಿವಿಕ್ರಮ್‌ ಅವರನ್ನು ಬಿಗ್‌ಬಾಸ್‌ ಕನ್ನಡ ಸೀಸನ್‌ 11 ದೊಡ್ಮನೆಯ ಸ್ವರ್ಗದ ಮನೆಗೆ ಹೋಗಿದ್ದಾರೆ.

ತ್ರಿವಿಕ್ರಮ್‌ ಅವರು ಕಿರುತೆರೆ ಹಾಗೂ ಸಿನಿಮಾರಂಗ ಎರಡರಲ್ಲೂ ಕೆಲಸ ಮಾಡಿದ್ದಾರೆ. ಪದ್ಮಾವತಿ ಸೀರಿಯಲ್‌ನಲ್ಲಿ ಸಾಮ್ರಾಟ್‌ ಆಗಿ ನಟನೆ ಮಾಡಿದ್ದಾರೆ. ಕ್ರಿಕೆಟ್‌ ಲೋಕದಲ್ಲಿ ಮಿಂಚಬೇಕೆಂಬ ಹಂಬಲ ಹೊಂದಿದ್ದ ತ್ರಿವಿಕ್ರಮ್‌ ಅವರಿಗೆ ನಂತರ ಕಾಲಿಗೆ ಬಿದ್ದ ಗಾಯದಿಂದ ಜಿಮ್‌ ಟ್ರೈನರ್‌ ಆದರು. ಸಿಸಿಎಲ್‌ನಲ್ಲಿ ಕೂಡಾ ಇವರು ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ನವರಾತ್ರಿ, ಪ್ರೇಮಬರಹ, ಸಕೂಚಿ, ರಂಗನಾಯಕಿ ಸಿನಿಮಾದಲ್ಲಿ ತ್ರಿವಿಕ್ರಮ್‌ ನಟನೆ ಮಾಡಿದ್ದಾರೆ.

ಕಿರುತೆರೆಯ ಖ್ಯಾತ ನಟಿ ಹಂಸ ಅವರು ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ 10 ನೇ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ. ಹಂಸ ಅವರು ಸ್ವರ್ಗದ ಮನೆಗೆ ಪ್ರವೇಶ ಪಡೆದಿದ್ದಾರೆ.

ತುಕಾಲಿ ಸಂತೋಷ್‌ ಅವರ ಪತ್ನಿ ಗಿಚ್ಚಿ ಗಿಲಿ ಗಿಲಿ ಖ್ಯಾತಿ ಮಾನಸ ಅವರು ಈ ಬಾರಿ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ರ 11 ನೇ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ. ಮಾನಸ ಅವರು ನರಕದ ಮನೆಗೆ ಪ್ರವೇಶ ಪಡೆದಿದ್ದಾರೆ.

ಉತ್ತರ ಕರ್ನಾಟಕದವರಾದ ಗೋಲ್ಡ್‌ ಸುರೇಶ್‌ ಅವರು ಬಿಗ್‌ಬಾಸ್‌ ಕನ್ನಡ 11  ರ 12 ನೇ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ. ವೇದಿಕೆಯಲ್ಲಿ ಇಬ್ಬರು ಗನ್‌ಮ್ಯಾನ್‌, ನಾಲ್ಕು ಮಂದಿ ಬಾಡಿಗಾರ್ಡ್‌ನ್ನು ಕೂಡಾ ಸುರೇಶ್‌ ಅವರು ಸುದೀಪ್‌ ಅವರಿಗೆ ಪರಿಚಯ ಮಾಡಿಕೊಟ್ಟರು. ಸಾಮಾನ್ಯ ಕಡು ಬಡ ರೈತನ ಮಗನೋರ್ವ ಈ ಮಟ್ಟಕ್ಕೆ ಬೆಳೆಯಬಹುದು ಎನ್ನುವುದನ್ನು ನಾನು ತೋರಿಸಿಕೊಟ್ಟಿದ್ದೀನಿ ಎಂದು ಗೋಲ್ಡ್‌ ಸುರೇಶ್‌ ಹೇಳಿದ್ದಾರೆ. ಈಗ ಸಿವಿಲ್‌ ಕಾಂಟ್ರಾಕ್ಟರ್‌ ಆಗಿ ಉದ್ಯಮ ಮಾಡಿಕೊಂಡಿದ್ದಾರೆ.

ವೀಕ್ಷಕರು 1 ಲಕ್ಷದ 28 ಸಾವಿರಕ್ಕಿಂತಲೂ ಹೆಚ್ಚು ವೋಟ್‌ ಪಡೆದ ಗೋಲ್ಡ್‌ ಸುರೇಶ್‌ ಅವರು ಬಿಗ್‌ಬಾಸ್‌ ಸೀಸನ್‌ 11 ರ ನರಕದ ಮನೆಗೆ ಎಂಟ್ರಿ ನೀಡಿದ್ದಾರೆ.

ನಟಿ ಐಶ್ವರ್ಯ ಶಿಂಡೋಗಿ ಅವರು ಬಿಗ್‌ಬಾಸ್‌ ಮನೆಯ 13ನೆಯ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ.

ಕರಾವಳಿಯ ಫೈರ್‌ ಬ್ರಾಂಡ್‌ ಚೈತ್ರಾ ಕುಂದಾಪುರ 14 ನೇ ಸ್ಪರ್ಧಿಯಾಗಿ ಬಿಬಿಕೆ ಸೀಸನ್‌ 11 ಕ್ಕೆ ಎಂಟ್ರಿ ಪಡೆದಿದ್ದಾರೆ. ವೀಕ್ಷಕರ ಹೆಚ್ಚಿನ ವೋಟ್ ಪಡೆದು ಬಿಗ್ ಬಾಸ್ ಮನೆಯ ನರಕಕ್ಕೆ ಎಂಟ್ರಿ ನೀಡಿದ್ದಾರೆ.

ನಟ ಉಗ್ರಂ ಮಂಜು ಅವರು ಬಿಗ್ ಬಾಸ್ ಮನೆಗೆ  15 ನೇ ಸ್ಪರ್ಧಿಯಾಗಿ ಎಂಟ್ರಿ ಪಡೆದಿದ್ದಾರೆ. ಸ್ವರ್ಗಕ್ಕೆ ಇವರು ಎಂಟ್ರಿ ಪಡೆದಿದ್ದಾರೆ.

ಬಿಗ್ ಬಾಸ್ ಮನೆಗೆ ನಟಿ ಮೋಕ್ಷಿತಾ ಪೈ ಅವರು 16 ನೇ ಸ್ಪರ್ಧಿಯಾಗಿ ಎಂಟ್ರಿ ಪಡೆದಿದ್ದಾರೆ. ಇವರು ನರಕಕ್ಕೆ ಪ್ರವೇಶ ಪಡೆದಿದ್ದಾರೆ.

ನಟ ರಂಜಿತ್ ಅವರು ಬಿಗ್ ಬಾಸ್ ಮನೆಯ ಕೊನೆಯ ಸ್ಪರ್ಧಿಯಾಗಿ ಅಂದರೆ 17 ನೇ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಇವರು ನರಕಕ್ಕೆ ಎಂಟ್ರಿ ಪಡೆದಿದ್ದಾರೆ.

16 ಮಂದಿ ಸ್ಪರ್ಧಿಗಳ ಪೈಕಿ, ನಾಲ್ಕು ಸ್ಪರ್ಧಿಗಳ ಹೆಸರನ್ನು ಈಗಾಗಲೇ ರಾಜಾರಾಣಿ ಶೋನ ಗ್ರ್ಯಾಂಡ್‌ ಫಿನಾಲೆಯಲ್ಲಿ ರಿವೀಲ್‌ ಮಾಡಲಾಗಿದ್ದು, ಇದರಲ್ಲಿ ಸತ್ಯ ಸೀರಿಯಲ್‌ ಗೌತಮಿ ಜಾಧವ್‌, ಲಾಯರ್‌ ಕೆ.ಎನ್‌.ಜಗದೀಶ್‌, ಹಿಂದುತ್ವದ ಫೈರ್‌ ಬ್ರ್ಯಾಂಡ್‌ ಚೈತ್ರಾ ಕುಂದಾಪುರ, ಗೋಲ್ಡ್‌ ಸುರೇಶ್‌ ಹೆಸರು ಬಂದಿದೆ.

Leave A Reply