Chaitra Kundapura: ಬಿಗ್ ಬಾಸ್ ಎಂಟ್ರಿ ಪ್ರೋಮೋ ಔಟ್- ಪ್ರೋಮೋದಲ್ಲಿ ಅಚ್ಚರಿ ವಿಚಾರವೊಂದನ್ನು ಹಂಚಿಕೊಂಡ ಚೈತ್ರಾ ಕುಂದಾಪುರ !!

Share the Article

Chaitra Kundapura: ಬಾಸ್ ಸರ್ಧಿಗಳ (Bigg Boss Contestant) ಹೆಸರು ಅನೌನ್ಸ್ ಆಗುತ್ತಿದೆ. ರಾಜಾ ರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿಯೇ ಸ್ಪರ್ಧಿಗಳ ಹೆಸರು ಅನೌನ್ಸ್ ಆಗುತ್ತಿದೆ. ಅಚ್ಚರಿ ಏನಂದ್ರೆ ಈ ಸಲ ಬಿಗ್ ಬಾಸ್(Bigg Boss), ನಾಡಿನ ಜನ ಊಹೆ ಕೂಡ ಮಾಡಿರದಂತ ವ್ಯಕ್ತಿಗಳನ್ನು ಕಂಟೆಸ್ಟೆಂಟ್ ಆಗಿ ಸೆಲೆಕ್ಟ್ ಮಾಡಿದೆ. ಅಂತೆಯೇ ವಿವಾದಗಳಿಂದಲೇ ಸುದ್ದಿಯಾದ ಚೈತ್ರ ಕುಂದಾಪುರ ಕೂಡ ದೊಡ್ಮನೆಗೆ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಅವರು ಬಿಗ್ ಬಾಸ್ ಪ್ರೋಮೋದಲ್ಲಿ ಅಚ್ಚರಿ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

ಹೌದು, ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಚೈತ್ರಾ ಕುಂದಾಪುರ(Chaitra Kundapura), ತಾನು ಸಾಮಾನ್ಯ ಹಾಲು ಮಾರುವನ ಮಗಳು. ಹಾಲು ಮಾರುವನ ಮಗಳು ಚೈತ್ರ, ಮುಂದೆ ಚೈತ್ರಾ ಕುಂದಾಪುರ ಆಗಿದ್ದೇಗೆ ಎಂಬ ವಿಷಯವನ್ನು ಬಿಗ್‌ಬಾಸ್‌ನಲ್ಲಿ ಅನಾವರಣಗೊಳಿಸುವ ಸುಳಿವನ್ನು ಪ್ರೋಮೋದಲ್ಲಿ ನೀಡಿದ್ದಾರೆ. ಅಷ್ಟೇ ಅಲ್ಲದೇ ತುಂಬಾ ಮೇಲಕ್ಕೂ ಹೋಗಿದ್ದೀನಿ. ಕೆಳಕ್ಕೂ ಬಿದ್ದಿದ್ದೀನಿ. ಕೇಸ್, ಕೋರ್ಟ್, ಕಾನೂನು ಎಲ್ಲವನ್ನೂ ಎದುರಿಸುತ್ತಿದ್ದೇನೆ. ಆದರೆ ಇವೆಲ್ಲವೂ ನನ್ನನ್ನು ಕುಗ್ಗಿಸುವುದಿಲ್ಲ ಎಂದು ಹೇಳಿದ್ದಾರೆ.

ಅಂದಹಾಗೆ ಉದ್ಯಮಿಯೊಬ್ಬರಿಗೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ ವಂಚಿಸಿರುವ ಆರೋಪ ಚೈತ್ರಾ ಕುಂದಾಪುರ ಮೇಲಿದೆ. ಇದೀಗ ಚೈತ್ರಾ ಕುಂದಾಪುರ ಬಿಗ್‌ಬಾಸ್ ಗೆ ಹೋಗುತ್ತಿರುವ ವಿಷಯ ಕೇಳಿ ಜನರು ಥ್ರಿಲ್ ಆಗಿದ್ದಾರೆ. ಈ ಹಿಂದೆ ಇದೇ ರೀತಿ ನೆಗೆಟಿವ್ ಇಮೇಜ್‌ ಜೊತೆಯಲ್ಲಿ ಬಿಗ್‌ಬಾಸ್‌ಗೆ ಹೋಗಿದ್ದ ಡ್ರೋಣ್ ಪ್ರತಾಪ್ ಫೈನಲ್‌ವರೆಗೂ ಬಂದು ಸಂಪೂರ್ಣವಾಗಿ ತಮ್ಮ ವ್ಯಕ್ತಿತ್ವವನ್ನು ಬದಲಿಸಿಕೊಂಡಿದ್ದರು. ಇದೇ ರೀತಿಯಲ್ಲಿ ಚೈತ್ರಾ ಕುಂದಾಪುರ ನಿಜವಾಗಲೂ ಯಾರು ಎಂಬುವುದು ಬಿಗ್‌ಬಾಸ್ ಮನೆಯಲ್ಲಿ ಗೊತ್ತಾಗುತ್ತೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಇದೀಗ ಬಿಗ್‌ಬಾಸ್ ಮನೆ ಮುಂದೆ ನಿಂತಿರುವ ಚೈತ್ರಾ ಕುಂದಾಪುರ, ಸ್ವರ್ಗ ಅಥವಾ ನರಕದ ಮನೆ ಸೇರ್ತಾರ ಅನ್ನೋದರ ಕುತೂಹಲ ಮನೆಮಾಡಿದೆ.

Leave A Reply