China: ಛೀ..ಥೂ.. ಗಲೀಜು, ರಸ್ತೆಯುದ್ದಕ್ಕೂ ಸುರಿಯಿತು ‘ಮಲ’ದ ಮಳೆ !! ಯಪ್ಪಾ.. ಏನಿದು ಅಸಹ್ಯ?!

China : ಮೀನೀನ ಮಳೆ, ಬೆಂಕಿ ಮಳೆ, ಆಲಿಕಲ್ಲಿನ ಮಳೆ ಬಗ್ಗೆ ಎಲ್ಲಾ ನೀವು ಕೇಳಿದ್ದೀರಿ. ಈ ಕುರಿತು ವಿಡಿಯೋ ಕೂಡ ನೋಡಿದ್ದೀರಿ. ಆದರೀಗ ‘ಮಲ’ದ ಮಳೆ ಸುರಿದಿದೆ. ಯಪ್ಪಾ.. ಛೀ.. ಥೂ ಇದೇನಿದು ಗಲೀಜು ಎಂದು ಅನ್ಕೊಳ್ಳತಿದ್ದೀರಾ? ಯಸ್, ಇದು ಗಲೀಜೆ. ಆದರೆ ಇದುನಡೆದದ್ದು ನಮ್ಮ ಭಾರತದಲ್ಲಲ್ಲಾ. ನಮ್ಮ ನೆರೆಯ ಚೀನಾದಲ್ಲಿ.

ಹೌದು, ಸೆಪ್ಟೆಂಬರ್ 24 ರಂದು ಚೀನಾ(China)ದ ನಾನಿಂಗ್‌ನಲ್ಲಿ ಒಳಚರಂಡಿಯ ಪೈಪ್‌ ಒಂದು ಒಡೆದು ಭಾರೀ ಸ್ಫೋಟ ಸಂಭವಿಸಿ, ಆಕಾಶದೆತ್ತರಕ್ಕೆ ಚಿಮ್ಮಿ, ನಗರವಿಡೀ ಮಲದ ಮಳೆಯೇ ಸುರಿದಿರುವ ವಿಲಕ್ಷಣ ಘಟನೆಯೊಂದು ನಡೆದಿದೆ. ಈ ಘಟನೆಯಿಂದಾಗಿ ನಗರವಿಡೀ ಗಬ್ಬು ನಾರಿದೆ.

ಘಟನೆಯ ವಿಡಿಯೋ ಸಿಸಿಟಿವಿ ಹಾಗೂ ವಾಹನಗಳ ಡ್ಯಾಶ್‌ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಹೊಸ ಹೊಸ ಆವಿಷ್ಕಾರಗಳಿಗೆ ಹೆಸರುವಾಸಿಯಾಗಿರುವ ಚೀನಾದಲ್ಲಿ ಈ ರೀತಿಯಾಗಿ ಎಕ್ಸ್‌ಪರಿಮೆಂಟ್‌ ವಿಫಲವಾಗಿರುವುದಕ್ಕೆ ನೆಟ್ಟಿಗರು ಗೇಲಿ ಮಾಡಿದ್ದಾರೆ.

ಒಳಚರಂಡಿ ಪೈಪ್ಗಳ ದುರಸ್ಥಿಯ ಭಾಗವಾಗಿ ಸ್ಥಳೀಯ ಇಂಜಿನಿಯರ್ಗಳು ಒತ್ತಡ ಪರೀಕ್ಷೆ ನಡೆಸುವ ವೇಳೆ ಈ ಘಟನೆ ಸಂಭವಿಸಿದೆ. ಘಟನೆಯ ನಂತರ ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ ಎಂದು ʼದಿ ಸನ್ʼ ವರದಿ ಮಾಡಿದೆ.

ವೈರಲ್ ವಿಡಿಯೋದಲ್ಲಿ ಡೊಡ್ಡ ಸ್ಫೋಟ ಸಂಭವಿಸಿ, ಇಡೀ ನಗರ ಹಳದಿ-ಕಂದು ಬಣ್ಣದ ಮಳೆಯಿಂದ ಕೊಳಕಾಗುವುದು ಕಂಡುಬಂದಿದೆ. ವಾಹನ ಸವಾರರು, ಪಾದಾಚಾರಿಗಳು ತಲೆಯಿಂದ ಕಾಲಿನವರೆಗೆ ಮಾನವ ಮಲವನ್ನು ಮೆತ್ತಿಕೊಂಡ ಸ್ಥಿತಿಯಲ್ಲಿ ಹಾಗೂ ದುರ್ವಾಸನೆ ಬೀರುವ ಮಾರ್ಗದಲ್ಲಿಯೇ ಸಂಚರಿಸಿದ್ದಾರೆ. ಅಲ್ಲದೆ ಈ ಭೀಕರ ಘಟನೆಯಲ್ಲಿ, ಹಲವಾರು ವಾಹನಗಳಿಗೆ ಹಾನಿಯಾಗಿದೆ. ಆದರೆ ಯಾವುದೇ ಸಾವುನೋವುಗಳು ಅಥವಾ ಗಾಯಗಳು ವರದಿಯಾಗಿಲ್ಲ.

 

Leave A Reply

Your email address will not be published.