FIR: ಚುನಾವಣಾ ಬಾಂಡ್ ಸುಲಿಗೆ ಪ್ರಕರಣ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ನಳಿನ್ ಕುಮಾರ್ ಕಟೀಲ್, ಬಿ.ವೈ.ವಿಜಯೇಂದ್ರ- ಇತರರ ವಿರುದ್ದ FIR !

FIR: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಇಡಿ, ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಇತರರ ವಿರುದ್ದ ಎಫ್ಐಆರ್ ದಾಖಲಾಗಿದೆ. ರಾಜ್ಯ ಮತ್ತು ರಾಜಕಾರಣದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆದಿವೆ. ಮೊನ್ನೆ ಸಿದ್ದರಾಮಯ್ಯನವರ ಮೇಲೆ ಮೂಢ ಕೇಸಿನಲ್ಲಿ ಎಫ್ಐಆರ್ ದಾಖಲಾದ ಬೆನ್ನಲ್ಲೇ ಸಾಲು ಸಾಲು ಬಿಜೆಪಿ ನಾಯಕರುಗಳ ಮೇಲೆ ದಾಖಲಾಗಿದೆ.

ಆದರ್ಶ್ ಅಯ್ಯರ್ ಸಲ್ಲಿಸಿದ್ದ ಖಾಸಗಿ ದೂರು ಸಂಬಂಧ ಎಫ್ಐಆರ್ ದಾಖಲಾಗಿದೆ. 42ನೇ ಎಸಿಎಂಎಂ ಕೋರ್ಟ್ ದೂರಿನ ಪ್ರತಿ ಮತ್ತು ದಾಖಲೆ ಠಾಣೆಗೆ ಕಳುಹಿಸಲು ಸೂಚಿಸಿ ಆದೇಶ ನೀಡಿತ್ತು. 42ನೇ ಎಸಿಎಂಎಂ ಜಡ್ಜ್ ನಿನ್ನೆ ಎಫ್ ಐ ಆರ್ ದಾಖಲಿಸಲು ಸೂಚನೆ ನೀಡಿದ್ರು. ಈ ಸಂಬಂಧಿತ ಆರ್ಡರ್ ಅನ್ನು ಬೆಂಗಳೂರಿನ ತಿಲಕನಗರ ಠಾಣೆಗೆ ಕಳಿಸುವಂತೆ ಜಡ್ಜ್ ಸೂಚನೆ ನೀಡಿದ್ರು.
ಈಗ ರಾಜ್ಯ ಮತ್ತು ಕೇಂದ್ರದ ಬಿಜೆಪಿ ನಾಯಕರುಗಳ ಮೇಲೆ ಎಫ್ಐಆರ್ ಆಗಿದೆ. ಎ1 ಆರೋಪಿಯಾಗಿ ನಿರ್ಮಲ ಸೀತಾರಾಮನ್, ಎ2 ಇಡಿ ಆಫೀಸರ್ಸ್, ಎ3 ನ್ಯಾಷನಲ್ ಜನತಾ ಪಾರ್ಟಿ ಅಫೀಸ್ , ಎ4 ನಳೀನ್ ಕುಮಾರ್ ಕಟೀಲ್,
ಎ5 ಬಿವೈ ವಿಜಯೇಂದ್ರ, ಎ6 ರಾಜ್ಯ ಬಿಜೆಪಿ ಕಚೇರಿಯಲ್ಲಿ ಕಾರ್ಯ ನಿರ್ವಹಣೆ ಮಾಡುವವರ ಮೇಲೆ ತನಿಖೆಗೆ ಆದೇಶಿಸಲಾಗಿದೆ.
ಐಪಿಸಿ 384, ಐಪಿಸಿ 120 ಬಿ, ಐಪಿಸಿ 34 ಅಡಿ ಎಫ್ ಐ ಆರ್ ದಾಖಲಾದ ಬ್ರೇಕಿಂಗ್ ಮಾಹಿತಿ ಬರುತ್ತಿದೆ.
ಐಪಿಸಿ 34 – ಸಮಾನ ಉದ್ದೇಶ, ಐಪಿಸಿ 384 – ಸುಲಿಗೆ, 120 b- ಒಳಸಂಚು ಮಾಡಿದ ಕಾರಣಕ್ಕಾಗಿ FIR ದಾಖಲಾಗಿದೆ.