Home News Shiruru Landslide: ಶಿರೂರು ಭೂಕುಸಿತ: ಅರ್ಜುನ್ ಮೃತದೇಹ ಮೆರವಣಿಗೆ! ಈಶ್ವರ್ ಮಲ್ಪೆಗೆ ಕೃತಜ್ಞತೆ

Shiruru Landslide: ಶಿರೂರು ಭೂಕುಸಿತ: ಅರ್ಜುನ್ ಮೃತದೇಹ ಮೆರವಣಿಗೆ! ಈಶ್ವರ್ ಮಲ್ಪೆಗೆ ಕೃತಜ್ಞತೆ

Hindu neighbor gifts plot of land

Hindu neighbour gifts land to Muslim journalist

Shirur Landslide: ಶಿರೂರು ಭೂ ಕುಸಿತದ (Shirur Landslide) ಪರಿಣಾಮ ಗಂಗಾವಳಿ ನದಿಯಾಳದಲ್ಲಿ (Gangavali River) ಬಿದ್ದ ಟ್ರಕ್‌ ಜೊತೆಗೆ ಅರ್ಜುನ್ ಸೇರಿದಂತೆ ಹಲವರುನಾಪತ್ತೆ ಆಗಿದ್ದು, ಇದೀಗ ನಾಪತ್ತೆಯಾಗಿದ್ದ ಕೇರಳದ ಲಾರಿ ಚಾಲಕ ಅರ್ಜುನ್ ಮೃತದೇಹ ಕೊನೆಗೂ ಪತ್ತೆಯಾಗಿದೆ.

ಹೌದು, ಮೃತಪಟ್ಟ ಕೇರಳ ಕಲ್ಲಿಕೋಟೆ ಮೂಲದ ಅರ್ಜುನ್ ಮೃತದೇಹ 73 ದಿನಗಳ ಪತ್ತೆಯಾಗಿದೆ. ಸದ್ಯ ಅರ್ಜುನ್ ಮೃತದೇಹ ಡಿಎನ್‌ಎ ವರದಿ ಸಾಬೀತಾಗಿ ಶುಕ್ರವಾರ ತಡರಾತ್ರಿ ಅವರ ಮೃತದೇಹ ಕೇರಳದ ಕಲ್ಲಿಕೋಟೆಯ ಮನೆಗೆ ರವಾನೆಯಾಗುತ್ತಿರುವ ಸಂದರ್ಭ ಗಡಿಭಾಗ ತಲಪಾಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ಜನಸ್ತೋಮ ಸೇರಿ ಅರ್ಜುನ್ ಮೃತದೇಹದ ಅಂತಿಮ ದರ್ಶನ ಪಡೆದುಕೊಂಡರು.

ಮಾಹಿತಿ ಪ್ರಕಾರ, ಶುಕ್ರವಾರ ಸಂಜೆ ಅಂಕೋಲಾದಿಂದ ಫ್ರೀಝರ್ ಆ್ಯಂಬುಲೆನ್ಸ್‌ನಲ್ಲಿ ಅರ್ಜುನ್ ಅಂತಿಮ ಯಾತ್ರೆ ನಡೆದಿದೆ. ಕರ್ನಾಟಕ ಕೇರಳದ ತಲಪಾಡಿಯ ಗಡಿಭಾಗ ತಲುಪುವಾಗ ತಡರಾತ್ರಿ 2ಗಂಟೆಯಾಗಿತ್ತು. ಈ ವೇಳೆ ಮಂಜೇಶ್ವರ ಮತ್ತು ಕಾಸರಗೋಡು ವಿಧಾನಸಭಾ ಕ್ಷೇತ್ರದ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯರನ್ನು ಒಳಗೊಂಡಂತೆ ಹೆಚ್ಚಿನ ಸಂಖ್ಯೆಯಲ್ಲಿ ಕೇರಳ ನಿವಾಸಿಗಳು ಆಗಮಿಸಿದ್ದರು.

ಇನ್ನು ಟೋಲ್ ಬೂತ್‌ ದಾಟಿದ ಬಳಿಕ ಮೃತದೇಹವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು. ಎಲ್ಲರೂ ಅಂತಿಮ ದರ್ಶನ ಪಡೆದುಕೊಂಡು ಗೌರವ ಸಲ್ಲಿಸಿದರು. ಇನ್ನು ಇದೇ ವೇಳೆ ಆ್ಯಂಬುಲೆನ್ಸ್ ನಲ್ಲಿದ್ದ ಸಮಾಜಸೇವಕ, ಅರ್ಜುನನಿಗಾಗಿ ಜೀವದ ಹಂಗು ತೊರೆದು ನದಿಯಾಳಕ್ಕೆ ಮುಳುಗಿ ಮೃತದೇಹವನ್ನು ಹುಡುಕಾಡಿದ ಮುಳುಗು ತಜ್ಞ ಈಶ್ವ‌ರ್ ಮಲ್ಪೆ ಅವರಿಗೂ ಗಡಿಭಾಗದ ಜನತೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.