Ink stain: ಸ್ಕೂಲ್ ಯೂನಿಫಾರ್ಮ್ನಲ್ಲಿ ಇಂಕ್ ಕಲೆ ಇದ್ರೆ ಈ ರೀತಿ ಕ್ಲೀನ್ ಮಾಡಿ!
Ink stain: ಸ್ಕೂಲ್ ಯೂನಿಫಾರ್ಮ್ನಲ್ಲಿ ಇಂಕ್ ಕಲೆ (Ink stain) ಆಗೋದು ಸಹಜ. ಹಾಗಂತ ಈ ಕಲೆಯನ್ನು ತೆಗೆಯಲು ನೀವು ಹರ ಸಾಹಸ ಪಡಬೇಕಿಲ್ಲ. ಹೌದು, ಬಿಳಿ ಬಟ್ಟೆಯಲ್ಲಿ ಇಂಕ್ ಕಲೆ ಆಗಿದ್ದರೆ, ಈಗ ಅದನ್ನು ತೆಗೆಯಲು ಬಹಳ ಸುಲಭ ಮಾರ್ಗ ಇಲ್ಲಿ ತಿಳಿಸಲಾಗಿದೆ.
ಮುಖ್ಯವಾಗಿ ಶಾಯಿ ಅಥವಾ ಬಾಲ್ ಪಾಯಿಂಟ್ ಪೆನ್ನ ಕಲೆಗಳು ಶರ್ಟ್ಗಳ ಮೇಲೆ ಬಿದ್ದಲ್ಲಿ, ಈ ರೀತಿ ಕ್ಲೀನ್ ಮಾಡಬಹದು. ಇದಕ್ಕಾಗಿ ನಿಮಗೆ ಸ್ವಲ್ಪ ಡೆಟಾಲ್ ಮತ್ತು ಹತ್ತಿ ಇದ್ದರೆ ಸಾಕು. ನೀವು ಹತ್ತಿಯಲ್ಲಿ ಸ್ವಲ್ಪ ಡೆಟಾಲ್ ತೆಗೆದುಕೊಂಡು ಶಾಯಿ ಕಲೆ ಇರುವ ಸ್ಥಳವನ್ನು ಚೆನ್ನಾಗಿ ಉಜ್ಜಿ. ಮೊದಲಿಗೆ ಅದು ಸ್ವಲ್ಪ ನೀಲಿ ಬಣ್ಣಕ್ಕೆ ತಿರುಗುತ್ತದೆ, ಆದರೆ ನಂತರ ಪೆನ್ ಅಥವಾ ಶಾಯಿ ಕಲೆ ಸುಲಭವಾಗಿ ಹೊರಬರುತ್ತದೆ.
ಇನ್ನು ಆಲ್ಕೋಹಾಲ್ ಅಥವಾ ಹ್ಯಾಂಡ್ ಸ್ಯಾನಿಟೈಸರ್ನೊಂದಿಗೆ ಸಹ ನೀವು ಪೆನ್ ಅಥವಾ ಶಾಯಿ ಕಲೆಗಳನ್ನು ತೆಗೆದುಹಾಕಬಹುದು. ಅದಕ್ಕಾಗಿ ಶಾಯಿ ಕಲೆ ಇರುವ ಭಾಗದ ಕೆಳಗೆ ಪೇಪರ್ ಟವಲ್ ಇರಿಸಿ. ಹತ್ತಿ ಅಥವಾ ಬಟ್ಟೆಯನ್ನು ಬಳಸಿ, ಕಲೆಯ ಮೇಲೆ ರಬ್ಬಿಂಗ್ ಆಲ್ಕೋಹಾಲ್ ಅಥವಾ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಹಚ್ಚಿರಿ. ಶಾಯಿ ಹೊರಬರುವುದು ನಿಲ್ಲುವವರೆಗೆ ನಿಧಾನವಾಗಿ ಉಜ್ಜಿ ಮತ್ತು ನಂತರ ತಣ್ಣೀರಿನಿಂದ ತೊಳೆಯಿರಿ ಆಗ ಇಂಕ್ ಕಲೆ ಮಾಯವಾಗುತ್ತೆ.