Home News HD Kumaraswamy: ನನ್ನ ಬಳಿ ಇರುವ ಈ ದಾಖಲೆ ಕೊಟ್ಟರೆ 6 ಸಚಿವರ ರಾಜೀನಾಮೆ ಗ್ಯಾರಂಟಿ:...

HD Kumaraswamy: ನನ್ನ ಬಳಿ ಇರುವ ಈ ದಾಖಲೆ ಕೊಟ್ಟರೆ 6 ಸಚಿವರ ರಾಜೀನಾಮೆ ಗ್ಯಾರಂಟಿ: ಹೆಚ್‌ಡಿ ಕುಮಾರಸ್ವಾಮಿ

H D Kumaraswamy
Photo Credit: The Economic Times

Hindu neighbor gifts plot of land

Hindu neighbour gifts land to Muslim journalist

HD Kumaraswamy: ನನ್ನ ಬಳಿ ಇರುವ ಈ ದಾಖಲೆ ಕೊಟ್ಟರೆ 6 ಸಚಿವರ ರಾಜೀನಾಮೆ ಗ್ಯಾರಂಟಿ ಎಂದು ಹೆಚ್‌ಡಿಕೆ ಖಡಕ್ ಆಗಿ ಮಾತನಾಡಿದ್ದಾರೆ. ಹಾಗಿದ್ರೆ ಆ ದಾಖಲೆ ಮುನ್ನಲೆಗೆ ಬರುತ್ತಾ ಅನ್ನೋದು ಕಾದು ನೋಡಬೇಕಿದೆ.

ಹೌದು, ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮಾಧ್ಯಮಗಳ ಜೊತೆ ಮಾತನಾಡಿ, ದೇವೇಗೌಡರ (HD Devegowda) ಕಣ್ಣಲ್ಲಿ ನೀರು ಹಾಕಿಸಿದವರು ಈಗ ಅನುಭವಿಸುತ್ತಿದ್ದಾರೆ. ಎಲ್ಲರೂ ನಾಶ ಆಗುತ್ತಾರೆ. ಈಗ ಅದೇ ಆಗುತ್ತಿದೆ ಎಂದು ಸಿದ್ದರಾಮಯ್ಯ (Siddaramaiah) ಕಾಂಗ್ರೆಸ್ ಸರ್ಕಾರಕ್ಕೆ ಕುಮಾರಸ್ವಾಮಿ ಶಾಪ ಹಾಕಿದ್ದಾರೆ.

ಇನ್ನು ನನ್ನನ್ನು ಜೈಲಿಗೆ ಕಳುಹಿಸಲು ಸರ್ಕಾರ ಹುನ್ನಾರ ನಡೆಸಿದೆ. 12 ವರ್ಷದ ಹಳೆಯ ಕೇಸಲ್ಲಿ ನನ್ನನು ಜೈಲಿಗೆ ಕಳುಹಿಸೋಕೆ ಸಾಧ್ಯವಿಲ್ಲ. ರಾಜೀನಾಮೆ ನೀಡುವ ಸ್ಥಿತಿ ಬಂದರೆ ನಾನೇ ಕೊಡುತ್ತೇನೆ ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಐಟಿ ಮುಖ್ಯಸ್ಥ ಎಡಿಜಿಪಿ ಚಂದ್ರಶೇಖರ್ ಮಾನ್ಯತಾ ಟೆಕ್ ಪಾರ್ಕ್ ಬಳಿ 38 ಫ್ಲೋರ್ ಮನೆ ಕಟ್ಟುತ್ತಿದ್ದಾರೆ. ಈ ಹಿಂದೆ ಚಂದ್ರಶೇಖರ್ ಮೇಲೆ ಎಫ್‌ಐಆರ್ ಆಗಿದೆ. ಅವರ ವಿರುದ್ಧ ಸೂಕ್ತ ತನಿಖೆ ಮಾಡಬೇಕು ಎಂದು ಸವಾಲು ಹಾಕಿದ ಅವರು ಕೇಂದ್ರದ ಗೃಹ ಕಾರ್ಯದರ್ಶಿಗೂ ದೂರು ನೀಡುವುದಾಗಿ ವಾರ್ನಿಂಗ್ ನೀಡಿದ್ದಾರೆ.