Agriculture Scheme: ಸಮಗ್ರ ಕೃಷಿ ಪದ್ಧತಿಗಾಗಿ ಕೃಷಿ ಇಲಾಖೆಯಲ್ಲಿ 1 ಲಕ್ಷ ಸಹಾಯಧನ: ಕೂಡಲೇ ಅರ್ಜಿ ಸಲ್ಲಿಸಿ
Agriculture Scheme: ರೈತರಿಗೆ ಇಲ್ಲಿದೆ ಸಿಹಿ ಸುದ್ದಿ. ಸಮಗ್ರ ಕೃಷಿ ಅಳವಡಿಸಿಕೊಳ್ಳಲು, ರೈತರಿಗಾಗಿ ಕೃಷಿ ಇಲಾಖೆಯಿಂದ 1ಲಕ್ಷ ಸಹಾಯಧನ ನೀಡುವ ಯೋಜನೆ (Agriculture Scheme) ಒಂದು ಇದೆ.
ಯಾಕೆಂದರೆ ರೈತರು ಒಂದೇ ಬೆಳೆಯನ್ನು ಮಾಡಿ ಇಳುವರಿ ಪಡೆಯುವ ಸಮಯದಲ್ಲಿ ನಷ್ಟಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚು. ಈ ಹಿನ್ನಲೆ ಕರ್ನಾಟಕ ರಾಜ್ಯ ಕೃಷಿ ಇಲಾಖೆಯು ರೈತರಿಗೆ ಆದಾಯ ಹೆಚ್ಚಿಸಲು ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಮಾಡಿಕೊಳ್ಳಲು ಸಹಾಯ ಮಾಡುತ್ತಿದೆ. ಒಂದು ವೇಳೆ ರೈತರು ವಾರದ ಅಥವಾ ಪ್ರತಿ ತಿಂಗಳು ಆದಾಯ ಬರುವ ಹಾಗೆ ಮಾಡಲು ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಮಾಡಿಕೊಂಡಲ್ಲಿ ರೈತರಿಗೆ ಕೃಷಿಯಲ್ಲಿ ಯಾವುದೇ ನಷ್ಠ ಕಂಡುಬರುವುದಿಲ್ಲ.
ಮುಖ್ಯವಾಗಿ ಕೃಷಿಯ ಉಪಕಸುಬುಗಳಾದ, ಕೋಳಿ ಸಾಕಣೆ, ಹೈನುಗಾರಿಕೆ, ಹಂದಿ ಸಾಕಾಣಿಕೆ, ಆಡು/ಕುರಿ ಸಾಕಾಣಿಕೆ, ಮೊಲ ಸಾಕಾಣಿಕೆ,ಮೀನು ಸಾಕಾಣಿಕೆ ಇಂತಹ ಕಸುಬುಗಳನ್ನು ಮಾಡುವುದರಿಂದ ರೈತರಿಗೆ ಕೃಷಿಯಲ್ಲಿ ಯಾವುದೇ ನಷ್ಠ ಸಂಭವಿಸುವುದಿಲ್ಲ.
IFS scheme-ಕೃಷಿ ಇಲಾಖೆಯ ಸಮಗ್ರ ಕೃಷಿ ಪದ್ಧತಿಯ ಯೋಜನೆಯ ಘಟಕಗಳು:
1)ಕೃಷಿ ಹೊಂಡ ಮಾಡಿಕೊಳ್ಳಬೇಕು. ಕೃಷಿ ಹೊಂಡದಲ್ಲಿ ಅಗತ್ಯವಿದ್ದರೆ ಮೀನು ಸಾಕಾಣಿಕೆ.
2)ಆಹಾರ ಬೆಳೆ ಬೆಳೆಯ ಬೇಕು.(ಭತ್ತ,ರಾಗಿ,ಜೋಳ,ಇತ್ಯಾದಿ)
3)ಹೈನುಗಾರಿಕೆ .
4)ಕೋಳಿ ಸಾಕಾಣಿಕೆ.
5)ಎರೆಹುಳು ಗೊಬ್ಬರದ ತೊಟ್ಟಿ ರಚನೆ.
6)ಅಜೋಲ್ಲ ತೊಟ್ಟಿ ರಚನೆ.
7)ಜೇನು ಸಾಕಾಣಿಕೆ.
8)ಅರಣ್ಯ ಸಸಿಗಳನ್ನು ಬೆಳೆಯಬೇಕು.
ಈ ಮೇಲೆ ತಿಳಿಸಿದ ಎಲ್ಲಾ ಘಟಕಗಳನ್ನು ಅಳವಡಿಸಿಕೊಳ್ಳುವ ರೈತರಿಗೆ 1 ಲಕ್ಷದವರೆಗೂ ಸಹಾಯಧನ ಸಿಗುತ್ತದೆ. ಸದ್ಯ ಸಮಗ್ರ ಕೃಷಿ ಪದ್ಧತಿ ಮಾಡಲು ಆಸಕ್ತ ಇರುವ ರೈತರು ತಮ್ಮ ತಮ್ಮ ಹತ್ತಿರದ ಕೃಷಿ ಇಲಾಖೆಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆಯಬಹುದು. ಒಂದು ವೇಳೆ ಈ ವರ್ಷದ ಅರ್ಜಿ ಸಲ್ಲಿಕೆ ಮುಕ್ತಾಯ ವಾಗಿದ್ದರೆ ಬರುವ ವರ್ಷಕ್ಕೆ ಈಗಲೇ ಹೆಸರು ನೊಂದಣಿ ಮಾಡಲು ಅಧಿಕಾರಿಗಳ ಸಂಪರ್ಕದಲ್ಲಿರಿ.