Home News Mysore: ಈ ಒಬ್ಬ ವ್ಯಕ್ತಿಯಿದಲೇ ಸಿದ್ದರಾಮಯ್ಯಗೆ ಇಷ್ಟೆಲ್ಲಾ ಸಂಕಷ್ಟ? ‘ನಮ್ಮ ಸಿದ್ದರಾಮಯ್ಯಗೆ ಈ ಸ್ಥಿತಿ ಬರಲು...

Mysore: ಈ ಒಬ್ಬ ವ್ಯಕ್ತಿಯಿದಲೇ ಸಿದ್ದರಾಮಯ್ಯಗೆ ಇಷ್ಟೆಲ್ಲಾ ಸಂಕಷ್ಟ? ‘ನಮ್ಮ ಸಿದ್ದರಾಮಯ್ಯಗೆ ಈ ಸ್ಥಿತಿ ಬರಲು ನೀನೇ ಕಾರಣ’ ಎನ್ನುತ್ತಾ ಕೈ ನಾಯಕರು ಕೆರಳಿದ್ದು ಯಾರ ಮೇಲೆ?

Hindu neighbor gifts plot of land

Hindu neighbour gifts land to Muslim journalist

Mysore: ಮುಡಾ ಸಂಕಷ್ಟದಲ್ಲಿ ಸಿಲುಕಿರುವ ಸಿದ್ದರಾಮಯ್ಯ ಅವರ ಸುತ್ತ ರಾಜಿನಾಮೆಯ ಹುತ್ತ ಬೆಳೆದಿದೆ. ಸಿಎಂ ಸ್ಥಾನದಿಂದ ಸಿದ್ದು ಕೆಳಗಿಳಿಯೋದು ಫಿಕ್ಸಾ? ಎಂಬ ಪ್ರಶ್ನೆ ಎದ್ದಿದೆ. ಅದರಲ್ಲೂ ಸಿದ್ದರಾಮಯ್ಯ ವಿರುದ್ಧ FIR ದಾಖಲಾದ ಬಳಿಕವಂತೂ ಇದರ ಕಾವು ಜೋರಾಗಿದೆ. ಈ ಬೆನ್ನಲ್ಲೇ ಸಿದ್ದರಾಮಯ್ಯಗೆ ಈ ಸ್ಥಿತಿ ಬರಲು ನೀನೇ ಕಾರಣ ಎಂದು ಕಾಂಗ್ರೆಸ್ ನಾಯಕರೆಲ್ಲರೂ ಈ ವ್ಯಕ್ತಿಯ ಮೇಲೆ ಕೆರಳಿನಿಂತಿದ್ದಾರೆ.

ಹೌದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬದಲಿ ನಿವೇಶನ ಪ್ರಕರಣವು ಸಿಎಂ ಸಿದ್ದರಾಮಯ್ಯ ಅವರನ್ನು ಬೇತಾಳದಂತೆ ಬೆನ್ನತ್ತಿದೆ. ಇದೇ ವಿಚಾರ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿಯನ್ನು ಕೂಡ ಅಲುಗಾಡಿಸಿದೆ. ಇಷ್ಟಕ್ಕೆಲ್ಲ ಕಾರಣರಾದ ವ್ಯಕ್ತಿಯೊಬ್ಬರ ಮೇಲೆ ಕಾಂಗ್ರೆಸ್‌ ನಾಯಕರು ಕೆಂಡಾಮಂಡಲವಾಗಿದ್ದಾರೆ. ಆ ವ್ಯಕ್ತಿಯೇ ಮುಡಾ (MUDA) ಅಧ್ಯಕ್ಷ ಕೆ.ಮರಿಗೌಡಗೆ (Marigowda).

ಯಸ್, ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಸ್ವಾಗತಕ್ಕೆ ಬಂದಿದ್ದ ಮುಡಾ (MUDA) ಅಧ್ಯಕ್ಷ ಕೆ.ಮರಿಗೌಡಗೆ (Marigowda) ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಹಾಕಿದ್ದಾರೆ. ಈ ವೇಳೆ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಆಪ್ತ ಮರಿಗೌಡ ಅವರ ವಿರುದ್ಧ ಘೋಷಣೆ ಕೂಗಿದ್ದಾರೆ. ನಿಮ್ಮಿಂದ ನಮ್ಮ ಸಿದ್ದರಾಮಯ್ಯ ಅವರಿಗೆ ಈ ಸ್ಥಿತಿ ಬಂದಿದೆ ಎಂದು ಕಾರು ಹತ್ತಿಸಿ ಅಲ್ಲಿಂದ ವಾಪಸ್ ಕಳುಹಿಸಿದ್ದಾರೆ.

ಈ ವೇಳೆ ಮರೀಗೌಡ ಅವರು ಸಮಜಾಯಿಸಿ ನೀಡಲು ಮುಂದಾಗಿದ್ದಾರೆ. ಆದರೆ ಕಾರ್ಯಕರ್ತರು ಕೇಳದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ನಿನ್ನ ಭಾಷಣ ನಮ್ಮತ್ರ ಬೇಡ, ಮೊದಲು ಇಲ್ಲಿಂದ ಜಾಗ ಖಾಲಿ ಮಾಡು. ಇಲ್ಲಾಂದ್ರೆ ಪರಿಣಾಮ ನೆಟ್ಟಗಿರಲ್ಲ ಎಂದು ವಾರ್ನ್‌ ಕೂಡ ಮಾಡಿದ್ದಾರಂತೆ. ಪರಿಸ್ಥಿತಿ ಬೇರೆ ಕಡೆ ತಿರುಗುವ ಮುನ್ನವೇ ಮರಿಗೌಡ ಅಲ್ಲಿಂದ ಹೊರಟಿದ್ದಾರೆ ಎಂದು ಹೇಳಲಾಗಿದೆ.