Mangaluru: ಗುಳಿಗ ದೈವವನ್ನೇ ಎದುರು ಹಾಕಿಕೊಂಡ ವೆನ್ಲಾಕ್ ಹಾಸ್ಪಿಟಲ್ – ಕೊನೆಗೂ ತನ್ನ ಕಾರಣಿಕ ತೋರಿಸಿಯೇ ಬಿಟ್ಟ ಗುಳಿಗ !!

Mangaluru: ತುಳು ನಾಡಿನ ದೈವಗಳು ಕಾರಣಿಕದ ಬಗ್ಗೆ ಎಲ್ಲರಿಗೂ ತಿಳಿದಿದೆ. ಕರಾವಳಿಯ ದೈವಗಳು ಎಂದಿಗೂ ನಂಬಿದವರ ಕೈ ಬಿಡುವುದಿಲ್ಲ. ದೈವಗಳ ತುಳುನಾಡಿನ ಜನರ ನಂಬಿಕೆಗೆ ಇಂಬು ಕೊಡುವಂತಹ ಅನೇಕ ಘಟನೆಗಳು ನಡೆದಿವೆ. ಇಷ್ಟೇ ಅಲ್ಲದೆ ದೈವಗಳ ಮೇಲೆ ನಂಬಿಕೆ ಇಲ್ಲದೆ ಅಪಚಾರ ಮಾಡಿದವರಿಗೂ ತಾನು ಏನು ಎಂದು ದೈವ ತೋರಿಸಿಕೊಟ್ಟ ಉದಾಹರಣೆಗಳು ಕೂಡ ಸಾಕಷ್ಟಿವೆ. ಇದೀಗ ಅಂತಹುದೇ ಒಂದು ಘಟನೆ ದಕ್ಷಿಣ ಕನ್ನಡ ಜಿಲ್ಲಾಸ್ಪತ್ರೆ ವೆನ್ಲಾಕ್‌ನಲ್ಲಿ(Venlakh Hospital) ನಡೆದಿದ್ದು, ದೈವದ ಕಾರಣಿಕಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಹೌದು, ದಕ್ಷಿಣ ಕನ್ನಡ(Dakshina Kannada) ಜಿಲ್ಲಾಸ್ಪತ್ರೆ ವೆನ್ಲಾಕ್‌ನಲ್ಲಿ ಗುಳಿಗ ದೈವದ ಕಾರ್ಣಿಕ ನಡೆದಿದೆ. ಅದೇನೆಂದರೆ ಮಂಗಳೂರಿನ ಹಂಪನಕಟ್ಟೆಯಲ್ಲಿ ನಿರ್ಮಾಣವಾಗಿರುವ ಸೂಪರ್ ಸ್ಪೆಷಾಲಿಟಿ ವೆನ್ಲಾಕ್ ಜಿಲ್ಲಾಸ್ಪತ್ರೆಯ ಸರ್ಜಿಕಲ್‌ ಸೂಪರ್ ಸ್ಪೆಷಾಲಿಟಿ ವಿಭಾಗ ಕಟ್ಟಡ ನಿರ್ಮಾಣಕ್ಕೆಂದು ಕಾಮಗಾರಿ ಸ್ಥಳದಲ್ಲಿದ್ದ ಹಲವು ಮರಗಳನ್ನು ಕಡಿಯಲಾಗಿತ್ತು. ಈ ವೇಳೆ ಇಲ್ಲಿ ಗುಳಿಗ ದೈವದ(Guliga) ಸಾನಿಧ್ಯವಿದ್ದ ಮರವೊಂದು ಇದ್ದು ಅದನ್ನು ಕಡಿಯದಂತೆ ಹಲವರು ಗುತ್ತಿಗೆದಾರನಿಗೆ ಮನವಿ ಮಾಡಿದ್ದರು. ಆದ್ರೆ, ಅಭಿವೃದ್ದಿ ಕಾಮಗಾರಿಗೆ ದೈವ ದೇವರು ಇಲ್ಲಾ ಅಂತ ಆ ಭೂಪ ಮರ ಕಡಿಯಲು ಮುಂದಾಗಿದ್ದ. ಈ ವೇಳೆ ಪರಿಸರ ಹೋರಾಟಗಾರರು ಮರವನ್ನು ಬೇರೆಡೆ ಸ್ಥಳಾಂತರ ಮಾಡಿ ಮರದ ಜೀವ ಉಳಿಸಿದ್ದರು.

ಆದರೆ ಯಾವಾಗ ದೈವ ಸಾನಿಧ್ಯವಿದ್ದ ಮರವನ್ನು (ದೈವದ ಕಟ್ಟೆ) ತೆರವು ಮಾಡಲಾಯಿತೋ ಅಂದಿನಿಂದ ಇಲ್ಲಿ ಗುತ್ತಿಗೆದಾರನಿಗೆ ಹಲವು ಸಂಕಷ್ಟಗಳು ಎದುರಾಗಿವೆ. ಕಾರ್ಮಿಕರು ಹಲವು ಅವಘಡಗಳಿಗೆ ಸಿಲುಕಿ ಆಸ್ಪತ್ರೆ ಸೇರಿದ್ದಾರೆ. ಕಾಮಗಾರಿಯ ವೇಳೆ ನಾಗರ ಹಾವು ಕೂಡ ಬಲಿಯಾದ ಘಟನೆ ನಡೆದಿದೆ. ಒ.ಟಿ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಓರ್ವ ಸಿಬ್ಬಂದಿಗೆ ಗಂಭೀರ ಸಮಸ್ಯೆ ಎದುರಾಗಿದೆ.

ಸದ್ಯ ಇದೀಗ ಕುಂಟುತ್ತಾ ಸಾಗಿದ್ದ ಕಾಮಗಾರಿ ಇತ್ತೀಚೆಗಷ್ಟೇ ಪೂರ್ಣಗೊಂಡು ಆಸ್ಪತ್ರೆಯ ಉದ್ಘಾಟನೆ ಆಗಿದೆ.
ಆದರೆ ಸಮಸ್ಯೆ ಅಲ್ಲಿಗೆ ಮುಗಿದಿಲ್ಲ. ಹಣದ ಬಲದಲ್ಲಿ ಕಟ್ಟಡ ನಿರ್ಮಾಣ ಮಾಡಿದರೂ ದೈವ ಮಾತ್ರ ಬಿಡಲಿಲ್ಲ. ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದರುೂ ಮಾತ್ರ ಆಸ್ಪತ್ರೆಯಲ್ಲಿ ಇನ್ನೂ ಕೂಡ ಸಮಸ್ಯೆಗಳು ಮುಂದುವರೆದಿವೆ. ಆಸ್ಪತ್ರೆಯಲ್ಲಿ ಅದೇನೋ ನೆಗಟಿವ್ ಎನರ್ಜಿ ಇದೆ ಅನ್ನೋ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗೆ ಅನಿಸಿದೆ.

ಈ ಎಲ್ಲಾ ಎಚ್ಚರಿಕೆಗಳ ಬಳಿಕ ಎಚ್ಚೆತ್ತ ಆಸ್ಪತ್ರೆ ಅಧಿಕಾರಿ, ಸಿಬ್ಬಂದಿಗಳು ಜ್ಯೋತಿಷಿ ಮೊರೆ ಹೋಗಿದ್ದಾರೆ. ಈ ವೇಳೆ ಇಲ್ಲಿ ಗುಳಿಗ ದೈವದ ನೆಲೆಯನ್ನು ಕಿತ್ತು ಹಾಕಿದ್ದು ದೈವ ಅತಂತ್ರವಾಗಿದೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ನಾಗ ಹತ್ಯೆಯಿಂದ ನಾಗ ದೋಷ ಕೂಡ ಇದೆ ಅನ್ನೋ ವಿಚಾರ ಗೊತ್ತಾಗಿದೆ.

ಪ್ರಶ್ನಾ ಚಿಂತನೆಯಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಈ ಹಿಂದೆ ಗುಳಿಗ ದೈವದ ಸಾನಿಧ್ಯವಿದ್ದು ಗುಳಿಗ ದೈವ ಕೋಪಗೊಂಡಿರುವುದು ಬೆಳಕಿಗೆ ಬಂದಿದೆ. ಸದ್ಯ ಈಗ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳೇ ಹಣ ಸಂಗ್ರಹಿಸಿ ಗುಳಿಗ ದೈವದ ಪುನರ್ ಪ್ರತಿಷ್ಠಾಪನೆ ಮಾಡಿದ್ದಾರೆ. ಸ್ಥಳಾಂತರ ಮಾಡಿದ್ದ ಅಶ್ವಥ ಮರದ ಬುಡದಲ್ಲೇ ಗುಳಿಗ ದೈವಕ್ಕೆ ಕಟ್ಟೆ ನಿರ್ಮಾಣ ಮಾಡಲಾಗಿದೆ. ಪ್ರಾಯಶ್ಚಿತ ಸಹಿತ ವಿವಿಧ ಧಾರ್ಮಿಕ ವಿಧಿಗಳನ್ನು ನಡೆಸಲಾಗಿದೆ. ಅಲ್ಲದೆ ಜ್ಯೋತಿಷಿಗಳ ಸಲಹೆಯಂತೆ ವೆನ್ಲಾಕ್ ಆಸ್ಪತ್ರೆಯ ಈ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಆಶ್ಲೇಷ ಬಲಿ ನಡೆಸಿ ನಾಗನನ್ನು ಸಂತೃಪ್ತಿ ಪಡಿಸಲಾಗಿದೆ. ದೈವದ ಪ್ರತಿಷ್ಠೆ ಕಾರ್ಯದ ಬಳಿಕ 15 ದಿನದಲ್ಲೇ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಾಗಿದೆ. ಐಸಿಯುಗೆ ಬರುವ ರೋಗಿಗಳ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿದೆ. ಒಟ್ಟಿನಲ್ಲಿ ಗುಳಿಗ ದೈವದ ಪ್ರತಿಷ್ಠಾಪನೆಯಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಿದೆ. ಗುಳಿಗ ದೈವದ ಕಾರಣಿಕಕ್ಕೆ ಸರ್ಕಾರಿ ಜಿಲ್ಲಾಸ್ಪತ್ರೆಯ ಆಡಳಿತ ಮಂಡಳಿ ತಲೆಬಾಗಿದೆ.

Leave A Reply

Your email address will not be published.