Asaduddin owaisi: ತಿರುಪತಿ ಲಡ್ಡುವಲ್ಲಿ ದನದ ಕೊಬ್ಬು ಬಳಸಿದ ಆರೋಪ – ಮುಸ್ಲಿಂ ಸಂಸದ ಓವೈಸಿ ಹೇಳಿದ್ದೇನು?
Asaduddin Owaisi: ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಬಳಸಿರುವ ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಕುರಿತು ನಟ-ನಟಿಯರು, ರಾಜಕಾರಣಿಗಳು ಬೇರೆ ಬೇರೆ ಹೇಳಿಕೆನೀಡುತ್ತಿದ್ದಾರೆ. ಅಂತೆಯೇ ಇದೀಗ ಮುಸ್ಲಿಂ ಸಂಸದ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯಿಸಿದ್ದಾರೆ.
ಹೌದು, ತಿರುಪತಿ ಲಡ್ಡು(Tirupati Laddu) ವಿವಾದದ ಕುರಿತು ಧಾರ್ಮಿಕ ಮುಖಂಡರಿಂದ ಹಿಡಿದು ರಾಜಕೀಯ ಪಕ್ಷಗಳ ಮುಖಂಡರ ತನಕ ಒಬ್ಬೊಬ್ಬರು ಹೇಳಿಕೆ ನೀಡುತ್ತಿರುವ ಮಧ್ಯೆಯೇ ಇದೇ ಮೊದಲ ಬಾರಿಗೆ ಈ ಸಂಬಂಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asaduddin owaisi) ಪ್ರತಿಕ್ರಿಯಿಸಿದ್ದು, ತಿರುಪತಿ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿರುವ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ. ಈ ರೀತಿ ನಡೆದಿದ್ದರೆ ಅದು ತಪ್ಪು. ನಾವೂ ಇದನ್ನು ತಪ್ಪು ಎಂದು ಪರಿಗಣಿಸುತ್ತೇವೆ, ಹೀಗಾಗಬಾರದಿತ್ತು ಎಂದು ಹೇಳಿದ್ದಾರೆ.
5 ದಿನಗಳಲ್ಲಿ ಮಾರಾಟವಾದ ಲಡ್ಡುಗಳೆಷ್ಟು?
ತಿರುಪತಿ ಲಡ್ಡು(Tirupati Laddu) ವಿವಾದವು ಅದರ ಮಾರಾಟದ ಮೇಲೆ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಜನರು, ಭಕ್ತಾದಿಗಳೂ ಕೂಡ ಈ ಬಗ್ಗೆ ನಿರೀಕ್ಷೆಮಾಡಿದ್ದರು. ಆದರೆ ಎಲ್ಲರ ನಿರೀಕ್ಷೆಗೆ ವಿರುದ್ಧವಾಗಿ ಲಡ್ಡುಗಳು ಭರ್ಜರಿ ಮಾರಾಟವಾಗುತ್ತಿವೆ. ಸೆಪ್ಟೆಂಬರ್ 19 ರಂದು 3.59 ಲಕ್ಷ ಲಡ್ಡುಗಳು, 20 ರಂದು 3.17 ಲಕ್ಷ ಲಡ್ಡುಗಳು, 21 ರಂದು 3.67 ಲಕ್ಷ, 22 ರಂದು 3.60 ಲಕ್ಷ, 23 ರಂದು 3.60 ಲಕ್ಷ ಲಡ್ಡುಗಳು ಮಾರಾಟವಾಗಿವೆ. ಅಂದರೆ ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಲಡ್ಡುಗಳು ಮಾರಾಟವಾಗುತ್ತಿವೆ. ಕಳೆದ 5 ದಿನಗಳಲ್ಲಿ ಸುಮಾರು 16 ಲಕ್ಷ ಲಡ್ಡುಗಳು ಮಾರಾಟವಾಗಿವೆ. ಅಲ್ಲದೆ, ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಲಡ್ಡುಗಳನ್ನು ತಯಾರಿಸಲಾಗುತ್ತಿದೆ.